ಡಾರ್ಲಿಂಗ್‌ ಕೃಷ್ಣ ಚಿತ್ರಕ್ಕೆ ಆಶಿಕಾ ರಂಗನಾಥ್‌ ನಾಯಕಿ

Published : Sep 22, 2021, 02:11 PM ISTUpdated : Sep 22, 2021, 03:24 PM IST

ಆಶಿಕಾ ರಂಗನಾಥ್‌ ಕೈಗೆ ಮತ್ತೊಂದು ಸಿನಿಮಾ ಡಾರ್ಲಿಂಗ್‌ ಕೃಷ್ಣ ಚಿತ್ರಕ್ಕೆ ಆಶಿಕಾ ರಂಗನಾಥ್‌ ನಾಯಕಿ

PREV
16
ಡಾರ್ಲಿಂಗ್‌ ಕೃಷ್ಣ ಚಿತ್ರಕ್ಕೆ ಆಶಿಕಾ ರಂಗನಾಥ್‌ ನಾಯಕಿ

ಸದ್ಯ ಕನ್ನಡದಲ್ಲಿ ಅತ್ಯಂತ ಬ್ಯುಸಿ ಆಗಿರುವ ನಟಿಯರಲ್ಲಿ ಆಶಿಕಾ ರಂಗನಾಥ್‌ ಅವರದ್ದು ಪ್ರಮುಖ ಹೆಸರು. ಈಗ ಇವರ ಕೈಗೆ ಮತ್ತೊಂದು ಸಿನಿಮಾ ಬಂದಿದೆ.

26

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಡಾರ್ಲಿಂಗ್‌ ಕೃಷ್ಣ ನಾಯಕ. ಪಿ.ಸಿ. ಶೇಖರ್‌ ನಿರ್ದೇಶನ ಇದೆ. ಮುಂದಿನ ತಿಂಗಳು 10ಕ್ಕೆ ಮುಹೂರ್ತ ನಡೆಯಲಿದೆ. ಈ ಚಿತ್ರವನ್ನು ಸ್ವಯಂವರ ಚಂದ್ರು ನಿರ್ಮಿಸುತ್ತಿದ್ದಾರೆ.

36

‘ರೊಮ್ಯಾಂಟಿಕ್‌ ಕಾಮಿಡಿ ಕತೆಯನ್ನು ಒಳಗೊಂಡ ಈ ಚಿತ್ರಕ್ಕೆ ಆಶಿಕಾ ಅವರೇ ನಾಯಕಿ ಪಾತ್ರಕ್ಕೆ ಬೇಕಿತ್ತು. ಹೀಗಾಗಿ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಪಿ ಸಿ ಶೇಖರ್‌.

ತೆಲುಗು ಸಿನಿಮಾದಲ್ಲಿ ದಿಯಾ ಖ್ಯಾತಿಯ ಖುಷಿ ನಟನೆ

46

ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸುಮಾರು 74 ದಿನಗಳ ಶೆಡ್ಯೂಲ್‌ ಮುಕ್ತಾಯಗೊಂಡಿದ್ದು ಕೇಕ್‌ ಕಟ್‌ ಮಾಡುವ ಮೂಲಕ ಚಿತ್ರತಂಡ ಈ ಖುಷಿಯನ್ನು ಸೆಲಬ್ರೇಟ್‌ ಮಾಡಿತ್ತು.

56

ಶ್ರೀಮುರಳಿ, ನಟಿ ಆಶಿಕಾ ರಂಗನಾಥ್‌, ಚಿಕ್ಕಣ್ಣ ಈ ಸಂಭ್ರಮದಲ್ಲಿ ಪಾಲ್ಕೊಂಡಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ ಶ್ರೀಮುರಳಿ, ‘ಅಭಿಮಾನಿ ದೇವರೇ, ನಿಮ್ಮ ಪ್ರೀತಿ ಹಾಗೂ ಆಶೀರ್ವಾದದಿಂದ ಮದಗಜ ಶೂಟಿಂಗ್‌ ಪೂರ್ಣಗೊಂಡಿದೆ. ಆದಷ್ಟುಬೇಗ ಹಿರಿತೆರೆಯಲ್ಲಿ ಭೇಟಿ ಮಾಡ್ತೀನಿ’ ಎಂದಿದ್ದಾರೆ. ಉಮಾಪತಿ ನಿರ್ಮಾಣದಲ್ಲಿ, ಎಸ್‌ ಮಹೇಶ್‌ ನಿರ್ದೇಶನದಲ್ಲಿ ಹೊರಬರುತ್ತಿರುವ ಚಿತ್ರವಿದು ಎಂದಿದ್ದರು

ಧರಣಿ ಮಂಡಲ ಮಧ್ಯದೊಳಗೆ ಪೋಸ್ಟರ್ ರಿಲೀಸ್

66

ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿರುವ ನಟಿ ಆಶಿಕಾ ರಂಗನಾಥ್ ಈಗ ಡಾರ್ಲಿಂಗ್ ಕೃಷ್ಣ ಜೊತೆ ಸೇರುತ್ತಿದ್ದು ಈ ಹೊಸ ಕಾಂಬಿನೇಷನ್ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories