ಮಾತೃಪ್ರೇಮವನ್ನು ಸಾರುವ ಹಾಡು ಇದಾಗಿದ್ದು, ಅರ್ಚನಾ ಜೋಯಿಸ್ ನಿರ್ವಹಿಸಿರುವ ಯಶ್ ತಾಯಿಯ ಪಾತ್ರ ಹೈಲೈಟ್ ಆಗಿದೆ. ರವಿ ಬಸ್ರೂರು ಅವರ ಸಂಗೀತವಿರುವ ಈ ಹಾಡಿಗೆ ಕಿನ್ನಲ್ ರಾಜ್ ಅವರ ಸಾಹಿತ್ಯವಿದೆ.
ಸುಚೇತಾ ಬಸ್ರೂರು ಹಾಡಿಗೆ ದನಿಯಾಗಿದ್ದಾರೆ. ಈ ಹಾಡಿನ ಹಿಂದಿ ವರ್ಶನ್ ‘ಫಲಕ್ ತು’ ಹಾಡನ್ನೂ ಸುಚೇತಾ ಅವರೇ ಹಾಡಿದ್ದು, 4.4 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಿಸಿದೆ.
ತಮಿಳು ಹಾಡನ್ನು ಕನ್ನಡ ಗಾಯಕಿ ಅನನ್ಯಾ ಭಟ್ ಹಾಡಿದ್ದಾರೆ. ತೆಲುಗು, ಮಲಯಾಳಂ ವರ್ಶನ್ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದಿನ ‘ಕೆಜಿಎಫ್ ಚಾಪ್ಟರ್ 1’ರಲ್ಲೂ ತಾಯಿ ಸೆಂಟಿಮೆಂಟಿನ ಹಾಡಿತ್ತು.
‘ಗರ್ಭದಿ ನನ್ನಿರಿಸಿ’ ಎಂಬ ಸಾಲುಗಳ ಈ ಹಾಡು ಗಮನಸೆಳೆದಿತ್ತು. ಯಶ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣದ ‘ಕೆಜಿಎಫ್ 2’ ಚಿತ್ರ ಏಪ್ರಿಲ್ 14ರಂದು ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ.
ಉತ್ತರ ಭಾರತದಲ್ಲಿ ಸಿನಿಮಾತಂಡ ಬೀಡಿಬಿಟ್ಟಿದ್ದು ಪ್ರಮೋಷನ್ ಅಬ್ಬರದ ಪ್ರಮೋಷನ್ ಮಾಡುತ್ತಿದೆ. ಈ ನಡುವೆ ಕೆಜಿಎಫ್-2 ಸಿನಿಮಾದ ಮುಂಗಡ ಬುಕ್ಕಿಂಗ್ ಕೂಡ ಆರಂಭವಾಗಿದೆ.
ವಿದೇಶಗಳಲ್ಲಿ ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದ್ದು ದಾಖಲೆಯ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿತ್ತು. ಈ ಬಗ್ಗೆ ಸಿನಿಮಾತಂಡ ಮಾಹಿತಿ ಹಂಚಿಕೊಂಡಿತ್ತು. ಇದೀಗ ಭಾರತದ ಹಲವು ಭಾಗಗಳಲ್ಲಿ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದ್ದು ಈ ಬಗ್ಗೆಯೂ ಚಿತ್ರತಂಡ ಮಾಹಿತಿ ನೀಡಿದೆ.