ಕಿರಿಕ್ ಪಾರ್ಟ್ ಚಿತ್ರದ ಮೂಲಕ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ, ಪುಷ್ಪ ಸಿನಿಮಾ ಹಿಟ್ ಆಗುತ್ತಿದ್ದಂತೆ ಬಾಲಿವುಡ್ ನಿರ್ದೇಶಕರ ಗಮನ ಸೆಳೆಯುತ್ತಿದ್ದಾರೆ.
27
ಅಮಿತಾಭ್ ಬಚ್ಚನ್ ಜೊತೆ ಗುಡ್ ಬಾಯ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಜುನು ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಪದೇ ಪದೇ ಮುಂಬೈಗೆ ಪ್ರಯಾಣ ಮಾಡುತ್ತಿರುತ್ತಾರೆ.
37
ಕಳೆದ ವರ್ಷ ರಶ್ಮಿಕಾ ಮಂದಣ್ಣ ಫ್ಯಾಷನ್ ವಿಚಾರವಾಗಿ ತುಂಬಾನೇ ಟ್ರೋಲ್ ಆಗಿದ್ದರು. ಫ್ಯಾಷನ್ ಸೆನ್ಸಸ್ ಇಲ್ಲ ಬೇರೆಯವರನ್ನು ಕಾಪಿ ಮಾಡುತ್ತಾರೆ ಎಂದು ಕೇಳಿ ಬರುತ್ತಿತ್ತು. ಹೀಗಾಗಿ ರಶ್ಮಿಕಾ ಸ್ಟೈಲಿಂಗ್ ಬದಲಾಯಿಸಿದ್ದಾರೆ.
47
ಪಕ್ಕಾ ಸೌತ್ ಇಂಡಿಯನ್‌ನೂ ಅಲ್ಲ ನಾರ್ಥ್ ಇಂಡಿಯನ್‌ನೂ ಅಲ್ಲ ಈ ಕನ್ಫ್ಯೂಷನ್ ಬೇಡವೇ ಬೇಡ ಎಂದು ಹಾಲಿವುಡ್ ಸ್ಟೈಲ್ ಫಾಲೋ ಮಾಡಲು ಶುರು ಮಾಡಿದ್ದಾರೆ.
57
ಕೆಲವು ದಿನಗಳ ಹಿಂದೆ ಬಾಡಿ ಫಿಟ್ ಜೀನ್ಸ್ ಪ್ಯಾಂಟ್, ಬ್ಲ್ಯಾಕ್ ಟೀ-ಶರ್ಟ್ ಮತ್ತು ಪಂಪ್ ಹೀಲ್ಸ್ ಧಿರಿಸಿ ಮಾಡಲ್ ರೀತಿ ನಡೆದುಕೊಂಡು ಬಂದ ಲುಕ್ ನೋಡಿ ವಾವಾವಾ!!! ಅನ್ನುತ್ತಿದ್ದಾರೆ ನೆಟ್ಟಿಗರು.
67
ಮತ್ತೊಂದು ಸಲ ಲೂಸ್ ಟ್ರ್ಯಾಕ್ ಪ್ಯಾಂಟ್, ಸ್ಪೋರ್ಟ್ ಟಾಪ್ ಮತ್ತು ಫ್ರೆಂಚ್ ಕೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸಲ ಕಾಣಿಸಿಕೊಳ್ಳುವ ಲುಕ್‌ನಲ್ಲಿ ಮತ್ತೆ ಕಾಣಿಸಿಕೊಳ್ಳುವುದಿಲ್ಲ.
77
ಆರಂಭದಲ್ಲಿ ಟ್ರೋಲ್ ಮತ್ತು ಕೆಟ್ಟ ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳುತ್ತಿದ್ದ ರಶ್ಮಿಕಾ ಮಂದಣ್ಣ ಈಗ I dont care ಎಂದು ಕೂಲ್ ಆಗಿ ಜೀವನ ಎಂಜಾಯ್ ಮಾಡುತ್ತಿದ್ದಾರೆ.