ಏಪ್ರಿಲ್ ತಿಂಗಳಿನಲ್ಲಿ ಸಿನಿಮಾ ಜಾತ್ರೆ
ಸಪ್ಪಗಿದ್ದ ಚಿತ್ರರಂಗ ಮತ್ತೆ ಕ್ರಿಯಾಶೀಲವಾಗಿದೆ. ಪ್ರೇಕ್ಷಕರು ಮತ್ತೆ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ. ಮಾ.17ರಂದು ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ನಟನೆಯ ‘ಜೇಮ್ಸ್’ ಹೊಸ ದಾಖನೆಯನ್ನೇ ಬರೆದಿದೆ.
ಆರ್‌ಆರ್‌ಆರ್ ಎಫೆಕ್ಟ್
ಈ ವಾರ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಹಬ್ಬ ನಡೆಯುತ್ತಿದೆ. ಈ ಕಾರಣಗಳಿಂದ ಬಿಡುಗಡೆಯಾಗಬೇಕಾದ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿತ್ತು. ಮುಂದಿನ ವಾರದಿಂದ ಮತ್ತೆ ಸಿನಿಮಾ ಬಿಡುಗಡೆ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ ವಾರ ಅಂದ್ರೆ ಏ.1ರಂದು 7 ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.
ಸ್ಟಾರ್‌ಗಳ ಸಿನಿಮಾ ರಿಲೀಸ್
ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’ (Home Minister), ಸಂಚಾರಿ ವಿಜಯ್ (Sanchari vijay) ಅವರ ‘ತಲೆದಂಡ’ ,ಯಶ್ ಶೆಟ್ಟಿನಟನೆಯ ‘ಇನ್‌ಸ್ಟೆಂಟ್ ಕರ್ಮ’ (Instant Karma)
ತ್ರಿಕೋನ ಸಿನಿಮಾ ಪೋಸ್ಟರ್
ಅಚ್ಯುತ್‌ಕುಮಾರ್ ಹಾಗೂ ಲಕ್ಷ್ಮೀ ನಟನೆಯ ‘ತ್ರಿಕೋನ’, ಮನೋಜ್ ಹಾಗೂ ಗುರುಪ್ರಸಾದ್ ಅಭಿನಯದ ‘ಬಾಡಿಗಾಡ್’, ಡಾರ್ಲಿಂಗ್ ಕೃಷ್ಣ ಅವರ ‘ಲೋಕಲ್ ಟ್ರೈನ್’ ಮತ್ತು ಸುಮನ್ ಅಭಿನಯದ ‘ಸೇವಾ ದಾಸ್
ಡಿಫರೆಂಟ್ ಡೈರೆಕ್ಟರ್ ಆರ್‌ಜಿವಿ
ರಾಮ್‌ಗೋಪಾಲ್ ವರ್ಮಾ- ಉಪೇಂದ್ರ ಜೋಡಿಯ ಹೊಸ ಸಿನಿಮಾ. ಹೊಸಬಗೆಯ ಗ್ಯಾಂಗ್‌ಸ್ಟರ್ ಸ್ಟೋರಿ ರೆಡಿಯಾಗುತ್ತಿದೆ ಎಂದ ನಿರ್ದೇಶಕ ಆರ್‌ಜಿವಿ
ಆರ್ ಸಿನಿಮಾ
ರಾಮ್‌ಗೋಪಾಲ್ ವರ್ಮಾ ಉಪೇಂದ್ರ ಕಾಂಬಿನೇಶನ್‌ನಲ್ಲಿ ಹೊರ ಬರುತ್ತಿರುವ ಹೊಸ ಸಿನಿಮಾ ‘ಆರ್’. ‘ಉಪೇಂದ್ರ ಅವರ ಜೊತೆಗೆ ನನ್ನ ಹೊಸ ಚಿತ್ರ ಘೋಷಿಸಲು ಖುಷಿಯಾಗುತ್ತಿದೆ. ಇದು ಭಾರತೀಯ ಪಾತಕ ಜಗತ್ತಿನ ಇತಿಹಾಸದಲ್ಲಿ ಬರುವ ಯುನಿಕ್ ಗ್ಯಾಂಗ್‌ಸ್ಟರ್ ಕತೆ.
ಉಪ್ಪಿ ಜೊತೆ ಆರ್‌ಜಿವಿ
ಸ್ಕ್ವಾರ್ ಪ್ರೊಡಕ್ಷನ್ಸ್ ಈ ಚಿತ್ರ ನಿರ್ಮಿಸುತ್ತಿದೆ’ ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಉಪೇಂದ್ರ ಅವರ ಲುಕ್ ಇರುವ ವೀಡಿಯೋ ಝಲಕ್ ಇದೆ. ಕಡುಗೆಂಪು ಬಣ್ಣದ ಉಡುಗೆಯಲ್ಲಿ ಚಾಕುವನ್ನು ತಿರು ತಿರುಗಿಸಿ ನೋಡುತ್ತಾ ಅದಕ್ಕೆ ಮುತ್ತಿಡುವ ಉಪೇಂದ್ರ ನಟನೆ ಫ್ಯಾನ್ಸ್ ಮೆಚ್ಚುಗೆ ಗಳಿಸಿದೆ. ಇದೊಂದು ಡೆಡ್ಲೀ ಕಾಂಬಿನೇಶನ್ ಎಂದು ಜನ ಹೊಗಳುತ್ತಿದ್ದಾರೆ.