'ಟಾಕ್ಸಿಕ್' ಚಿತ್ರಕ್ಕಾಗಿ 'ಕೆಜಿಎಫ್' ಖ್ಯಾತಿಯ ಯಶ್ ತಮ್ಮ ಉದ್ದನೆಯ ಕೂದಲು ಮತ್ತು ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ತಮ್ಮ ಹೊಸ ಲುಕ್ನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಯಶ್ ನಟನೆಗೆ ಟಾಕ್ಸಿಕ್ (Toxic Movie) ಚಿತ್ರದ ಬಿಡುಗಡೆ ಇರಾನ್-ಇಸ್ರೇಲ್ ಸಂಘರ್ಷದಿಂದ ಮುಂದಕ್ಕೆ ಹಾಕಲಾಗಿದೆ. ಇದೇ ಯುಗಾದಿಯಂದು ಬಿಡುಗಡೆಯಾಗಬೇಕಿದ್ದ ಚಿತ್ರ ಜೂನ್ 4ಕ್ಕೆ ಬಿಡುಗಡೆ ಡೇಟ್ ಫಿಕ್ಸ್ ಆಗಿದೆ. ಇದರ ನಡುವೆಯೇ, ಮುಂಬೈನ ಬೀದಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಸುತ್ತಾಡಿದೆ.
26
ಕೂದಲು, ಗಡ್ಡಕ್ಕೆ ಕತ್ತರಿ
‘ಕೆಜಿಎಫ್ 2’ ಸಿನಿಮಾ ಆರಂಭ ಆದಾಗಿನಿಂದಲೂ ಉದ್ದನೆಯ ಗಡ್ಡ ಹಾಗೂ ಉದ್ದ ಕೂದಲು ಬಿಟ್ಟಿದ್ದ ರಾಕಿ ಬಾಯಿ, ಟಾಕ್ಸಿಕ್ನ ಡಬಲ್ ರೋಲ್ನಿಂದಾಗಿ ಕೂದಲು ಮತ್ತು ಗಡ್ಡಕ್ಕೆ ಕತ್ತರಿ ಹಾಕಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ‘ಟಿಕೆಟ್’ ಹೆಸರಿನ ಪಾತ್ರದ ಲುಕ್ಗಾಗಿ ಅವರು ಗಡ್ಡ ಹಾಗೂ ಕೂದಲನ್ನು ಟ್ರಿಮ್ ಮಾಡಿಸಿದ್ದರು.
36
ಮತ್ತೊಂದು ವೇಷದಲ್ಲಿ ಯಶ್
ಆದರೆ ಇದೀಗ ಸ್ವಲ್ಪ ಗಡ್ಡ, ಕೂದಲು ಬೆಳೆದಿದ್ದು, ಮತ್ತೊಂದು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಶಾರ್ಟ್ ಹೇರ್ ಹಾಗೂ ಸಣ್ಣದಾದ ಗಡ್ಡದಲ್ಲಿ ಕಾಣಿಸಿಕೊಂಡರು. ಯಶ್ ಜೊತೆ ಹೊರಗೆ ಸುತ್ತಾಡಿದ ವಿಡಿಯೊ ವೈರಲ್ ಆಗಿದೆ.
ಈ ಹಿಂದೆ ಕೂಡ ಯಶ್ ಶೂಟಿಂಗ್ ಮಧ್ಯೆ ಮುಂಬೈ ಬೀದಿಯಲ್ಲಿ ರಾಧಿಕಾ ಜೊತೆ ಸುತ್ತಾಡಿದ ವಿಡಿಯೊ ವೈರಲ್ ಆಗಿತ್ತು. ಇದುವರೆಗೆ ಯಶ್ ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದರು. ಆದರೆ, ಈಗ ಟಿಕೆಟ್ ಪಾತ್ರದ ಲುಕ್ ರಿವೀಲ್ ಆಗಿರುವುದರಿಂದ ಬಹಿರಂಗವಾಗಿ ಹೊಸ ಲುಕ್ ನಲ್ಲಿ ಓಡಾಡುತ್ತಿದ್ದಾರೆ.
56
ಮುಂಬೈನಲ್ಲಿ ಪಾಪರಾಜಿಗಳು
ಅಷ್ಟಕ್ಕೂ ಯಶ್ ಅವರು ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ದಾಟಿ ಬೆಳೆದು ನಿಂತಿದ್ದಾರೆ. ಇದೇ ಕಾರಣಕ್ಕೆ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅವರಿಗೆ ಅಭಿಮಾನಿಗಳು ಇದ್ದಾರೆ. ಇನ್ನು ಮುಂಬೈನಲ್ಲಿ ಕೇಳಬೇಕೆ?
66
ಲುಕ್ ಬದಲಾದರೂ ವರ್ಚಸ್ಸು ಬದಲಾಗಿಲ್ಲ
ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಅಲ್ಲಿಯೂ ಅಭಿಮಾನಿಗಳು ಸುತ್ತುಹಾಕಿದ್ದಾರೆ. ಲುಕ್ ಬದಲಾದರೂ ಪಾಪರಾಜಿಗಳು ಅವರನ್ನು ಸುತ್ತುವರಿದು ರಾಕಿ ಬಾಯ್ ಎಂದೇ ಕರೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.