Rocking Star Yash: 'ನಾನು ಯಾವಾಗಲೋ ಸೂಪರ್ ಸ್ಟಾರ್.. ಆದ್ರೆ ಜನರು ಇದನ್ನ ಒಪ್ಪಿಕೊಳ್ಳೋಕೆ ಇಷ್ಟು ಟೈಂ ತಗೊಂಡ್ರು' ಎಂದ ನಟ ಯಶ್!

Published : Mar 06, 2026, 04:20 PM IST

ಯಶ್ ಅವರ ವಿಶೇಷತೆಯೇ ಅದು. ಅವರು ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅಷ್ಟೇ ಸರಳ ಮತ್ತು ಅಷ್ಟೇ ಪವರ್‌ಫುಲ್. ಈ ವಿಡಿಯೋದಲ್ಲಿ ಅವರ ಪ್ರತಿಯೊಂದು ಫ್ರೇಮ್ ಕೂಡ ಒಬ್ಬ ಅಪ್ಪಟ 'ಮಾಸ್ ಲೀಡರ್' ತರಹ ಕಾಣ್ತಿದೆ. ನೋಡಿ ಈ ಸ್ಟೋರಿ..

PREV
17

ಈಗ ಹೇಳುತ್ತಿರೋದು ಕೇವಲ ಒಬ್ಬ ನಟನ ಬಗ್ಗೆ ಅಲ್ಲ, ಬದಲಾಗಿ ಇಡೀ ಭಾರತೀಯ ಚಿತ್ರರಂಗವೇ ಕರ್ನಾಟಕದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಕನ್ನಡದ ನಟ, ನಮ್ಮ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಬಗ್ಗೆ. ಈಗ ನೀವು ನೋಡ್ತಿರೋ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.

27

ನೋಡಿ ಆ ಖದರ್! ಆ ನಡಿಗೆಯಲ್ಲಿ ಒಂದು ಗಾಂಭೀರ್ಯವಿದೆ, ಆ ಕಣ್ಣೋಟದಲ್ಲಿ ಇಡೀ ಜಗತ್ತನ್ನೇ ಗೆಲ್ಲುವ ಆತ್ವಿವಿಶ್ವಾಸವಿದೆ. ಯಶ್ ಅವರು ಕೇವಲ ಒಂದು ಸಿನಿಮಾದ ನಟನಾಗಿ ಉಳಿದಿಲ್ಲ, ಅವರು ಇಂದು ಒಂದು ಬ್ರ್ಯಾಂಡ್. ಅವರು ಕಾರ್‌ನಿಂದ ಇಳಿದು ಬರುವ ಸ್ಟೈಲ್ ನೋಡಿದ್ರೆ, "ಗಜೇಂದ್ರ ಬರ್ತಿದ್ದಾನೆ ಅಂದ್ರೆ ಆನೆಗಳು ದಾರಿ ಬಿಡ್ಲೇಬೇಕು" ಅನ್ನೋ ಡೈಲಾಗ್ ನೆನಪಾಗುತ್ತೆ. 

37

ಉದ್ದನೆಯ ಕೂದಲು, ಆಕರ್ಷಕ ಗಡ್ಡ, ಮತ್ತು ಸೂಟ್‌ನಲ್ಲಿ ಮಿಂಚುತ್ತಿರುವ ಯಶ್ ಅವರನ್ನು ನೋಡುತ್ತಿದ್ದರೆ, 'ಟಾಕ್ಸಿಕ್' ಸಿನಿಮಾದ ಅಬ್ಬರ ಹೇಗಿರಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

47

ಯಶ್ ಅವರ ವಿಶೇಷತೆಯೇ ಅದು. ಅವರು ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅಷ್ಟೇ ಸರಳ ಮತ್ತು ಅಷ್ಟೇ ಪವರ್‌ಫುಲ್. ಈ ವಿಡಿಯೋದಲ್ಲಿ ಅವರ ಪ್ರತಿಯೊಂದು ಫ್ರೇಮ್ ಕೂಡ ಒಬ್ಬ ಅಪ್ಪಟ 'ಮಾಸ್ ಲೀಡರ್' ತರಹ ಕಾಣ್ತಿದೆ. ಅಭಿಮಾನಿಗಳ ಹರ್ಷೋದ್ಗಾರ, ಕ್ಯಾಮೆರಾಗಳ ಫ್ಲ್ಯಾಶ್ ಲೈಟ್‌ಗಳ ನಡುವೆ ಯಶ್ ಅವರು ನೀಡುವ ಆ ಒಂದು ಸ್ಮೈಲ್ ಇದೆಯಲ್ಲ... ಅದು ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಹಬ್ಬದ ಸಂಭ್ರಮ.

57

ಕೆಜಿಎಫ್ ಚಾಪ್ಟರ್ 1 ಮತ್ತು 2 ರ ನಂತರ ಇಡೀ ದೇಶವೇ ಯಶ್ ಅವರ ಮುಂದಿನ ಹೆಜ್ಜೆ ಏನು ಅಂತ ಕಾಯ್ತಿತ್ತು. ಈಗ 'ಟಾಕ್ಸಿಕ್' ಮೂಲಕ ಅವರು ಅಂತರಾಷ್ಟ್ರೀಯ ಮಟ್ಟದ ಸಿನಿಮಾವನ್ನು ಕನ್ನಡಿಗರಿಗೆ ನೀಡಲು ಸಜ್ಜಾಗಿದ್ದಾರೆ. ಈ ವಿಡಿಯೋದಲ್ಲಿ ಅವರ ಲುಕ್ ಮತ್ತು ಆಟಿಟ್ಯೂಡ್ ನೋಡಿದ್ರೆ, ಅವರು ಯಾವುದೋ ದೊಡ್ಡ ಮ್ಯಾಜಿಕ್ ಮಾಡೋಕೆ ರೆಡಿಯಾಗಿದ್ದಾರೆ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತೆ.

67

"ಶ್ರಮ ಪಟ್ಟರೆ ಯಾರು ಬೇಕಾದರೂ ಸಾಧಿಸಬಹುದು" ಅನ್ನೋದಕ್ಕೆ ಯಶ್ ಅವರು ಜೀವಂತ ಉದಾಹರಣೆ. ಬಸ್ಸಿನ ಕಂಡಕ್ಟರ್ ಮಗನಾಗಿ ಕೆರಿಯರ್ ಶುರು ಮಾಡಿ, ಇಂದು ಗ್ಲೋಬಲ್ ಮಟ್ಟದಲ್ಲಿ ಕನ್ನಡದ ಬಾವುಟ ಹಾರಿಸುತ್ತಿರುವ ಅವರ ಈ ಜರ್ನಿ ನಿಜಕ್ಕೂ ರೋಚಕ. ಈ ವಿಡಿಯೋದಲ್ಲಿನ ಅವರ ಆ "ಸ್ವಾಗ್" (Swag) ಕೇವಲ ಸ್ಟೈಲ್ ಅಷ್ಟೇ ಅಲ್ಲ, ಅದು ಅವರ ವರ್ಷಗಳ ಕಠಿಣ ಪರಿಶ್ರಮದ ಪ್ರತಿಬಿಂಬ.

77

ಕೊನೆಯದಾಗಿ ಹೇಳಬೇಕೆಂದರೆ, ಯಶ್ ಅವರು ಕೇವಲ ರೀಲ್ ಹೀರೋ ಅಲ್ಲ, ರಿಯಲ್ ಲೈಫ್‌ನಲ್ಲೂ ಸಾವಿರಾರು ಜನಕ್ಕೆ ಸ್ಫೂರ್ತಿ. ಈ ವಿಡಿಯೋ ನೋಡಿದ ಮೇಲೆ ನಿಮಗನ್ನಿಸೋದು ಒಂದೇ... "ಬಾಸ್ ಈಸ್ ಆಲ್ವೇಸ್ ಬಾಸ್!". ಸದ್ಯಕ್ಕೆ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಯಶ್ ಅವರು ಇನ್ನೂ ಯಾವ ರೀತಿ ಅಬ್ಬರಿಸಲಿದ್ದಾರೆ ಅಂತ ಕಾದು ನೋಡಬೇಕಿದೆ.

ಇದರಲ್ಲಿ ಯಶ್ ಅವರು- ಜನರಿಗೆ ಸ್ಪೂರ್ತಿ ತರುವ, ಥಿಯೇಟರ್‌ನಲ್ಲಿ ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ ಸಿನಿಮಾ ಮಾಡೋದಕ್ಕೆ ಆಸೆ.. ನನಗೆ ಚಿಕ್ಕಪುಟ್ಟ ಆಸೆ ಪಡೋದು, ಅದನ್ನ ಪಡೆಯೋದಕ್ಕೆ ಕಷ್ಟಪಡೋದು ಅವೆಲ್ಲಾ ಇಷ್ಟ ಆಗಲ್ಲ.. ಬ್ರಾಂಡೆಡ್ ಬಟ್ಟೆ ಧರಿಸುವ ಮೂಲಕ ನಾನು ಯಾರಿಗೂ ಸ್ಪೂರ್ತಿ ಆಗಬೇಕಿಲ್ಲ.. ಆದ್ರೆ, ಅಂಥ ಬಟ್ಟೆ ಧರಿಸೋದಕ್ಕೆ ಸಾಧ್ಯವಾಗುವಂಥ ಕೆಲಸ ಮಾಡೋದಕ್ಕೆ ನಾನು ಸ್ಪೂರ್ತಿ ಆಗಬೇಕು ಅನ್ನೋದು ನನ್ನ ನಿಲುವು' ಎಂದಿದ್ದಾರೆ ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories