ಏಪ್ರಿಲ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್.
ರೇವತಿಯೊಂದಿಗೆ ಮದುವೆ ನಿಶ್ಚಯವಾದ ಕೂಡಲೇ ಫೆಬ್ರವರಿ 6ಕ್ಕೆ ಭಾವೀ ಪತ್ನಿಯೊಂದಿಗಿನ ಮೊದಲ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
ಈ ಜೋಡಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಲು ಕಾರಣವೇನು?
ನಿಖಿಲ್ ಪ್ರತೀ ಫೋಟೋದಲ್ಲಿಯೂ ಪತ್ನಿ ಬಗ್ಗೆ ಕಾವ್ಯಾತ್ಮಕವಾಗಿ ಕೆಲವು ಸಾಲುಗಳನ್ನು ಬರೆಯುತ್ತಾರೆ.
ತನ್ನ ಸಂಗಾತಿ ಜೊತೆ ಒಂದೇ ರೀತಿಯಲ್ಲಿ ಫೋಸ್ ಕೊಟ್ಟರೂ, ಬರೆಯೋ ಸಾಲಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಂದ ದೂರ ಇರುವ ರೇವತಿ ಬಗ್ಗೆ ನಿಖಿಲ್ ಮಹಿಳಾ ಫ್ಯಾನ್ಸ್‌ಗೆ ತುಂಬಾ ಕುತೂಹಲ.
ಜ್ಯುವೆಲ್ಲರಿ ಡಿಸೈನರ್ ಆಗಿರುವ ರೇವತಿ ಧರಿಸುವ ಆಭರಣಗಳೂ ಆಕರ್ಷಕವಾಗಿರುತ್ತವೆ.
ನಿಖಿಲ್ ಅಪ್ಲೋಡ್ ಮಾಡಿದ ಕಲವೇ ಕ್ಷಣದಲ್ಲಿ, ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ ಕಮೆಂಟ್ಸ್ ಪಡೆದುಕೊಳ್ಳುವ ಕಾರಣ ಇನ್‌ಸ್ಟಾಗ್ರಾಂನಲ್ಲಿ ನಿಖಿಲ್ ದಂಪತಿ ಫೋಟೋಸ್ ಟ್ರೆಂಡ್ ಆಗುತ್ತಿದೆ.
ಕರ್ನಾಟಕವೇ ಮೆಚ್ಚಿಕೊಂಡಿರುವ ಈ ಜೋಡಿ ಫೋಟೋವನ್ನು ಅಭಿಮಾನಿಗಳು ತುಂಬಾ ಶೇರ್ ಮಾಡಿಕೊಳ್ಳುತ್ತಾರೆ.
ಪತ್ನಿ ರೇವತಿ ಬಗ್ಗೆ ನಿಖಿಲ್ ಬರೆಯುವ ಸಾಲುಗಳು ಅವರ ಮೇಲಿರುವ ಗೌರವವನ್ನು ಹೆಚ್ಚಿಸುತ್ತದೆ.