ಧಮ್ ಹೊಡೆಯೋದ್ ಕಮ್ಮಿ ಮಾಡ್ಬೇಕಲೇ ಎಂದ Kiccha Sudeep ಸಿಗರೇಟ್ ಬಿಟ್ಟಿದ್ದು ಯಾವಾಗ?

Published : Dec 17, 2025, 12:37 PM IST

Kichcha Sudeep Mark Cinema : ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸಿನಿಮಾದಲ್ಲಿ ಬಿಸಿಯಾಗಿದ್ದ ಮಚ್ಚಲ್ಲೇ ಸಿಗರೇಟ್ ಹತ್ತಿಸಿಕೊಳ್ಳುವ ಸುದೀಪ್, ನಿಜವಾಗ್ಲೂ ಸಿಗರೇಟ್ ಬಿಟ್ಟಿದ್ದಾರಾ?

PREV
16
ಶುರುವಾಗ್ತಿದೆ ಮಾರ್ಕ್ ಹಬ್ಬ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಮಾರ್ಕ್ ಗೆ ಅಭಿಮಾನಿಗಳು ಕಾಯ್ತಿದ್ದಾರೆ. ಇದೇ ಡಿಸೆಂಬರ್ 25 ರಂದು ಮಾರ್ಕ್ ತೆರೆಗೆ ಬರ್ತಿದೆ. ಟೀಸರ್ ಈಗಾಗ್ಲೇ ಸೂಪರ್ ಹಿಟ್ ಆಗಿದ್ದು, ಹಾಡುಗಳನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಟೀಸರ್ ಕೊನೆಯಲ್ಲಿ ಧಮ್ ಹೊಡೆಯೋದ್ ಕಮ್ಮಿ ಮಾಡ್ಬೇಕಲೇ ಅಂತ ಸುದೀಪ್ ಡೈಲಾಗ್ ಅಭಿಮಾನಿಗಳ ಫೆವರೆಟ್ ಡೈಲಾಗ್ ಪಟ್ಟಿ ಸೇರಾಗಿದೆ. ಆದ್ರೆ ಅನೇಕರಿಗೆ ಕಾಡ್ತಿರುವ ಒಂದೇ ಪ್ರಶ್ನೆ ಸುದೀಪ್ ಧಮ್ ಹೊಡೀತಾರಾ ಅನ್ನೋದು. ಸುದೀಪ್ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಯಾವಾಗ ಧಮ್ ಹೊಡೆಯೋದನ್ನು ಶುರು ಮಾಡ್ದೆ, ಯಾವಾಗ ಬಿಟ್ಟೆ ಹಾಗೇ ಯಾಕೆ ಬಿಟ್ಟಿ ಅನ್ನೋದನ್ನು ಸುದೀಪ್ ಹೇಳಿದ್ದಾರೆ.

26
ಸುದೀಪ್ ಕೈಗೆ ಸಿಗರೇಟ್ ಬಂದಿದ್ದು ಯಾವಾಗ?

ಮಾರ್ಕ್ ಸಿನಿಮಾದಲ್ಲಿ ಸುದೀಪ್, ಬಿಸಿಯಾಗಿದ್ದ ಮಚ್ಚಿನಿಂದ ಸಿಗರೇಟ್ ಹತ್ತಿಸಿಕೊಳ್ತಾರೆ. ಟೀಸರ್ ಕೊನೆಯಲ್ಲಿ ಧಮ್ ಬಗ್ಗೆ ಡೈಲಾಗ್ ಕೂಡ ಇದೆ. ನಿಜ ಜೀವನದಲ್ಲಿ ಕಿಚ್ಚು ಸುದೀಪ್ ಈ ಚಟ ಶುರು ಮಾಡಿದ್ದು ಬಹಳ ಲೇಟಾಗಿ. 2007 – 2008 ನಲ್ಲಿ ಸುದೀಪ್ ಧೂಮಪಾನ ಶುರು ಮಾಡಿದ್ರು.

36
ಯಾವಾಗ ಸಿಗರೇಟ್ ಬಿಟ್ರು ಸುದೀಪ್?

2008 ರಲ್ಲಿ ಧೂಮಪಾನ ಶುರು ಮಾಡಿದ್ದ ಸುದೀಪ್ 2013ರಲ್ಲಿ ಈ ಚಟವನ್ನು ಬಿಟ್ಟಿದ್ದಾರೆ. ಧಮ್ ಎಳೆಯೋದನ್ನು ಸಂಪೂರ್ಣ ಬಿಟ್ಟಿದ್ದಾರೆ. ಮಾರ್ಕ್ ಸಿನಿಮಾ ಪ್ರಚಾರದ ವೇಳೆ ಅದಕ್ಕೆ ಕಾರಣ ಏನು ಅನ್ನೋದನ್ನೂ ಸುದೀಪ್ ಹೇಳಿದ್ದಾರೆ.

46
ಸುದೀಪ್ ಧೂಮಪಾನ ಬಿಡೋಕೆ ಇದೇ ಕಾರಣ

ಸುದೀಪ್ ಅವ್ರನ್ನು ಸಿಗರೇಟ್ ಕಂಟ್ರೋಲ್ ಮಾಡ್ತಿತ್ತಂತೆ. ನನ್ನನ್ನು ಸಿಗರೇಟ್ ಕಂಟ್ರೋಲ್ ಮಾಡ್ತಿದೆ ಎನ್ನುವ ಭಾವನೆ ಬಂದಿತ್ತು ಅಂತ ಸುದೀಪ್ ಹೇಳಿದ್ದಾರೆ. ಶೂಟಿಂಗ್ ವೇಳೆ ಸುದೀಪ್ ಸೇದುತ್ತಿದ್ದ ಬ್ರ್ಯಾಂಡ್ ಪ್ಯಾಕ್ ಖಾಲಿ ಆಗಿತ್ತು. ಬೇರೆಯವರಿಂದ ಬೇರೆ ಕಡೆಯಿಂದ ಮತ್ತೆರಡು ಪ್ಯಾಕ್ ಖಾಲಿ ಮಾಡಿದ್ರು. ಸ್ನೇಹಿತರ ಜೊತೆ ಮನೆಗೆ ಬಂದೂ ಧಮ್ ಎಳೆದಿದ್ರು. ಆ ಕ್ಷಣ ಅವರಿಗೆ ಸಿಗರೇಟ್ ನನ್ನನ್ನು ಕಂಟ್ರೋಲ್ ಮಾಡ್ತಿದೆ ಎನ್ನುವ ಭಾವನೆ ಬಂದಿತ್ತು. ಸ್ಮೋಕಿಂಗನ್ನು ನಾನು ಎಂಜಾಯ್ ಮಾಡ್ತಿಲ್ಲ, ಅದಕ್ಕೆ ಅಡಿಕ್ಟ್ ಆಗಿದ್ದೇನೆ ಎಂಬುದು ಗೊತ್ತಾಗ್ತಿದ್ದಂತೆ ಸುದೀಪ್ ಸಿಗರೇಟ್ ನಿಂದ ದೂರ ಉಳಿದ್ರು. ಎಲ್ಲ ಅಡಿಕ್ಷನ್ ಕ್ರೈಮ್ ಅಂತ ಸುದೀಪ್ ಹೇಳಿದ್ದಾರೆ.

56
ಮಾರ್ಕ್ ಸಿನಿಮಾದಲ್ಲಿ ಹಿರೋಯಿನ್ ಇಲ್ಲ

ಮ್ಯಾಕ್ಸ್ ಹಾಗೂ ಮಾರ್ಕ್ ಸಿನಿಮಾ ಎರಡಲ್ಲೂ ಹೀರೋಯಿನ್ ಇಲ್ಲ. ಸಿನಿಮಾಕ್ಕೆ ಹೀರೋಯಿನ್ ಅಗತ್ಯ ಇರಲಿಲ್ಲ. ಹಾಗಘಾಇ ಎರಡರಲ್ಲೂ ಹೀರೋಯಿನ್ ಇಲ್ಲ. ಸುಮ್ನೆ ಬಂದು ಹೋಗೋರು ಹೀರೋಯಿನ್ ಅಲ್ಲ. ಅವರಿಗೂ ಮುಖ್ಯ ಪಾತ್ರ ನೀಡ್ಬೇಕು ಅನ್ನೋದು ಸುದೀಪ್ ಅಭಿಪ್ರಾಯ.

66
ವರ್ಷಕ್ಕೆ ಎರಡು ಸಿನಿಮಾ ಮಾಡೋ ಭರವಸೆ

ಕಳೆದ ವರ್ಷ ಡಿಸೆಂಬರ್ 25 ರಂದು ಮ್ಯಾಕ್ಸ್ ಸಿನಿಮಾ ತೆರೆಗೆ ಬಂದಿತ್ತು. ಅಭಿನಯ ಚಕ್ರವರ್ತಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರು. ಅದಾಗಿ ಒಂದೇ ವರ್ಷಕ್ಕೆ ಮಾರ್ಕ್ ತೆರೆಗೆ ಬರ್ತಿದೆ. 150 ದಿನಗಳಲ್ಲಿ ಸಿನಿಮಾ ಮುಗಿದಿದೆ. ಮುಂದಿನ ವರ್ಷ ಎರಡು ಸಿನಿಮಾ ನೀಡುವ ಪ್ರಯತ್ನ ಮಾಡ್ತೇನೆ ಅಂತ ಸುದೀಪ್ ಹೇಳಿದ್ದಾರೆ.

Read more Photos on
click me!

Recommended Stories