ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಅವರು ಸದ್ಯ ಜೈಲಿನಲ್ಲಿದ್ದಾರೆ. ಇವರು ಅರೆಸ್ಟ್ ಆದಾಗ ಮಗನನ್ನು ಹ್ಯಾಂಡಲ್ ಮಾಡೋದು ತುಂಬ ಕಷ್ಟ ಆಗಿತ್ತು ಎಂದು ವಿಜಯಲಕ್ಷ್ಮೀ ಅವರು ನಟಿ ರಚನಾ ರೈ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
“ಸಿನಿಮಾ ಕೆಲಸ ನಡೆಯುತ್ತಿತ್ತು. ಕುದುರೆಯನ್ನು ತರಲು ದರ್ಶನ್ ಹೊರಗಡೆ ಹೋಗಿದ್ದರು. ನಾನು ಕೋರ್ಟ್ ಕೆಲಸ ಅಂತ ಓಡಾಡುತ್ತಿದ್ದೆ. ಬೇಲ್ ಕ್ಯಾನ್ಸಲ್ ಆಗಿದ್ದು ಗೊತ್ತಾಯ್ತು. ನಾನು ಹದಿನೈದು ನಿಮಿಷ ದರ್ಶನ್ ಅವರಿಗೆ ಫೋನ್ ಮಾಡಲಿಲ್ಲ. ನನಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ” ಎಂದಿದ್ದಾರೆ ವಿಜಯಲಕ್ಷ್ಮೀ
26
ದರ್ಶನ್ ಒಂದೂ ಪದ ಮಾತನಾಡಲಿಲ್ಲ
“ನಾನು ಆಮೇಲೆ ದರ್ಶನ್‌ಗೆ ಫೋನ್ ಮಾಡಿದಾಗ, ಏನಾಯ್ತು ವಿಜಿ ಅಂದ್ರು. ಬೇಲ್ ಕ್ಯಾನ್ಸಲ್ ಆಯ್ತು ಎಂದೆ. ಆಗ ಒಂದು ಪದ ಕೂಡ ಅವರ ಬಾಯಿಂದ ಬರಲಿಲ್ಲ. ನಾನು ಬರುತ್ತಿದ್ದೇನೆ, ವಿನೀಶ್‌ನನ್ನು ನೋಡಿಕೋ, ಮನೆ ನೋಡಿಕೋ, ಆರಾಮಾಗಿರು, ಅಳಬೇಡ ಎಂದರು” ಎಂದಿದ್ದಾರೆ.
36
ಮಗ ಇನ್ನೂ ಚಿಕ್ಕವನು
“ವಿನೀಶ್‌ನನ್ನು ಹ್ಯಾಂಡಲ್ ಮಾಡೋದು ಕಷ್ಟ ಆಯ್ತು, ಈ ಘಟನೆ ನಡೆದಾಗ ಅವನಿಗೆ 16 ವರ್ಷ, ಈಗ ಅವನಿಗೆ 17 ವರ್ಷ ವಯಸ್ಸು. ಎಲ್ಲವನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ಅಲ್ಲ, ಆದರೆ ಮನಸ್ಸಿಗೆ ಬೇಸರವಾಗುತ್ತದೆ, ನಮ್ಮ ಥರ ಇರೋದಿಲ್ಲ. ನಮ್ಮ ಮನೆಯಲ್ಲಿ ಟಿವಿ ಆನ್ ಮಾಡೋದಿಲ್ಲ, ಹೀಗಾಗಿ ಅವನಿಗೆ ಮನೆಯಲ್ಲಿ ಈ ವಿಷಯ ಗೊತ್ತಾಗೋದಿಲ್ಲ” ಎಂದಿದ್ದಾರೆ.
“ಫಸ್ಟ್ ದರ್ಶನ್ ಅರೆಸ್ಟ್ ಆದಾಗ ವಿನೀಶ್‌ಗೆ ಹೊರಗಡೆ ಸ್ನೇಹಿತರಿಂದ ಅಪ್ಪ ಅರೆಸ್ಟ್ ಆಗ್ತಿದ್ದಾರೆ ಎನ್ನೋದು ಗೊತ್ತಾಗಿದೆ. ಮೊದಲ ಬಾರಿಗೆ ಅರೆಸ್ಟ್ ಆದಾಗ, ಅವನು ಬಾಸ್ಕೆಟ್ ಬಾಲ್ ಆಡುತ್ತಿದ್ದ. ನಾನು ಅವನಿಗೆ ಫೋನ್ ಮಾಡಿ ಮನೆಗೆ ಕರೆಸಿಕೊಂಡಿದ್ದೆ” ಎಂದಿದ್ದಾರೆ.
56
ಮಧ್ಯರಾತ್ರಿ ಎದ್ದು ಅಳುತ್ತಿದ್ದನು
“ಅಪ್ಪನಿಗೆ ಏನಾಯ್ತು? ಎಂದು ಅವನು ಅಲ್ಲಿಂದಲೇ ಅಳುತ್ತ ಬಂದ. ಅಪ್ಪ ಅರೆಸ್ಟ್ ಅಂತ ನನಗೆ ಹೇಳೋಕೆ ಧೈರ್ಯ ಇರಲಿಲ್ಲ. ನಾನು ಸುಮಾರು ದಿನ ಅವನಿಗೆ ಅಸಲಿ ವಿಷಯ ಏನು ಎಂದು ಹೇಳಿರಲಿಲ್ಲ. ತಿಂಗಳುಗಳ ಕಾಲ ಅವನು ಮಧ್ಯರಾತ್ರಿ ಎದ್ದು ಅಪ್ಪ, ಅಪ್ಪನನ್ನು ಮಿಸ್ ಮಾಡಿಕೊಳ್ತಿದೀನಿ ಎಂದು ಅಳುತ್ತಿದ್ದನು. ಆ ಟೈಮ್ ನನಗೆ ತುಂಬ ಕಷ್ಟ ಆಯ್ತು” ಎಂದಿದ್ದಾರೆ.
66
ನನ್ನ ಮಗ ದರ್ಶನ್ ಅವರ ಮೊದಲ ಅಭಿಮಾನಿ
“ವಿನೀಶ್‌ಗೆ ದರ್ಶನ್ ಅಂದರೆ ತುಂಬ ಇಷ್ಟ, ಯಾವಾಗಲೂ ದರ್ಶನ್ ಹಿಂದೆಯೇ ಇರುತ್ತಾರೆ. ವಿನೀಶ್‌ಗೆ ದರ್ಶನ್ ಅಂದರೆ ತಂದೆಯಾಗಿ ಇಷ್ಟ ಅನ್ನೋದಕ್ಕಿಂತ ಅಭಿಮಾನಿ ಎನ್ನಬಹುದು. ದರ್ಶನ್‌ಗೆ ನಿನ್ನ ಮೊದಲ ಫ್ಯಾನ್ ನಿನ್ನ ಮಗ, ನೀನು ಮನೆಯಲ್ಲಿ ಅಭಿಮಾನಿ ಹುಟ್ಟಿಸಿದ್ದೀಯಾ ಎಂದು ಹೇಳಿದ್ದೇನೆ” ಎಂದರು.