INCA Award ಸಮಾರಂಭದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದು ಬೀಗಿದ ರುಕ್ಷ್ಮಿಣಿ ವಸಂತ್

Published : Apr 18, 2026, 12:20 PM IST

Rukmini Vasanth: ಕಾಂತಾರ ಚಾಪ್ಟರ್ 1 ಚೆಲುವೆ ರುಕ್ಮಿಣಿ ವಸಂತ್ INCA Award ಸಮಾರಂಭದಲ್ಲಿ ದಂತದ ಗೊಂಬೆಯಂತೆ ಮಿಂಚಿದ್ದಾರೆ. ಐವರಿ ಬಣ್ಣದ ಗೌನ್ ತೊಟ್ಟ ಚೆಲುವೆ ಫೋಟೊ ಹಂಚಿಕೊಂಡಿದ್ದು, ಕನಕವತಿ ಪಾತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಬೀಗಿದ್ದಾರೆ ಸುಂದರಿ. 

PREV
16
ರುಕ್ಮಿಣಿ ವಸಂತ್

ಚಂದನದಲ್ಲಿ ಮಿಂಚಿ ಇದೀಗ ಕಾಲಿವುಡ್, ಟಾಲಿವುಡ್, ಬಾಲಿವುಡ್ ನಲ್ಲೂ ಮಿಂಚಲು ರೆಡಿಯಾಗಿರುವ ನಟಿ ರುಕ್ಮಿಣಿ ವಸಂತ್,ಇದೀಗ INCA ಪ್ರಶಸ್ತಿ ಸಮಾರಂಭದಲ್ಲಿ, ಅತ್ಯುತ್ತಮ ಕನ್ನಡ ನಟಿ ಪ್ರಶಸ್ತಿ ಪಡೆದು ಬೀಗಿದ್ದಾರೆ. ಸಮಾರಂಭದಲ್ಲಿ ಐವರಿ ಗೌನ್ ನಲ್ಲಿ ರುಕ್ಮಿಣಿ ಮಿಂಚುತ್ತಿದ್ದಾರೆ.

26
ದಂತದ ಗೊಂಬೆಯಾದ ರುಕ್ಮಿಣಿ ವಸಂತ್

INCA ಪ್ರಶಸ್ತಿ ಸಮಾರಂಭದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಕನಕವತಿ ಪಾತ್ರಕ್ಕೆ ಅತ್ಯುತ್ತಮ ಕನ್ನಡ ನಟಿ ಪ್ರಶಸ್ತಿ ಪಡೆದ ರುಕ್ಮಿಣಿ ವಸಂತ್, ಪ್ರಶಸಿ ಸ್ವೀಕರಿಸಲು ಐವರಿ ಬಣ್ಣಾದ ಲಾಂಗ್ ಗೌನ್ ಧರಿಸಿ, ಬನ್ ಹೇರ್ ಸ್ಟೈಲ್ ಮಾಡಿ, ಸಿಂಪಲ್ ಆಗಿ ಒಂದು ಕಿವಿಯೋಲೆ ಧರಿಸಿ ಸಿಕ್ಕಾಪಟ್ಟೆ ಮಿಂಚಿದ್ದಾರೆ.

36
ಕರಣ್ ಜೋಹರ್ ಅಪ್ಪುಗೆ

INCA-2026 (ಇಂಡಿಯನ್ ನ್ಯಾಷನಲ್ ಸಿನಿ ಅಕಾಡೆಮಿ ಅವಾರ್ಡ್ಸ್) ಪ್ರಶಸ್ತಿ ಸಮಾರಂಭವನ್ನು ಕರಣ್ ಜೋಹರ್ ಮತ್ತು ರಾಣಾ ದಗ್ಗುಬಾಟಿ ನಿರೂಪಣೆ ಮಾಡಿದ್ದು, ರುಕ್ಮಿಣಿ ವಸಂತ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರುತ್ತಿದ್ದಂತೆ ಕರಣ್ ಜೋಹರ್ ಅಪ್ಪಿಕೊಂಡು, ವೇದಿಕೆಗೆ ಸ್ವಾಗತಿಸಿದರು.

46
ಕಾಂತಾರ ಸಿನಿಮಾ ಕುರಿತು ಮೆಚ್ಚುಗೆ

ರುಕ್ಮಿಣಿ ವಸಂತ್ ಪ್ರಶಸ್ತಿ ಪಡೆಯುವುದಕ್ಕೂ ಮುನ್ನ ಮಾತನಾಡಿ ಕಾಂತಾರ ಚಾಪ್ಟರ್ 1 ಚಿತ್ರ ಸ್ಪೆಷಲ್ ಆಗಿದೆ. ಈ ಚಿತ್ರಕ್ಕೆ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ತುಂಬಾನೆ ಖುಷಿ ಇದೆ. ಅಷ್ಟೆ ಎಕ್ಸೈಟ್ ಕೂಡ ಆಗಿದ್ದೇನೆ ಎಂದು ಚಂದನವನದ ಸುಂದರಿ ರುಕ್ಮಿಣಿ ಹೇಳಿದ್ದಾರೆ.

56
ಕಾಂತಾರಾ ಸಿನಿಮಾಗೆ ಹಲವು ಪ್ರಶಸ್ತಿ

INCA ಅವಾರ್ಡ್ ಸಮಾರಂಭದಲ್ಲಿ ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಒಟ್ಟು ನಾಲ್ಕು ಪ್ರಶಸ್ತಿಬಂದಿವೆ. ಅತ್ಯುತ್ತಮ ನಟ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನ ರಿಷಬ್ ಶೆಟ್ರು ಪಡೆದುಕೊಂಡಿದ್ದಾರೆ.

66
ರುಕ್ಮಿಣಿ ನಗುವಿಗೆ ಮನಸೋತ ಜನ

ರುಕ್ಮಿಣಿ ವಸಂತ್ ನಗುವಿಗೆ ಅಭಿಮಾನಿಗಳು ಮನಸೋತಿದ್ದು, ಬ್ಯೂಟಿಫುಲ್, ದಂತದ ಗೊಂಬೆ, ದೇವತೆ ಎಂದು ಹೊಗಳಿದ್ದಾರೆ. ಅಂದಹಾಗೆ ರುಕ್ಮಿಣಿ ಶೀಘ್ರದಲ್ಲಿ ಟಾಕ್ಸಿಕ್ ಸಿನಿಮಾ ಮೂಲಕ ಕನ್ನಡಿಗರ ಮುಂದೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಇವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories