ಯಶ್ ಟಾಕ್ಸಿಕ್‌ ಚಿತ್ರಕ್ಕೆ ಮಹಿಳಾ ಸ್ಟಾರ್‌ ನಿರ್ದೇಶಕಿ, ಯಾರೀಕೆ ಗೀತು ಮೋಹನ್‌ದಾಸ್‌

First Published | Dec 8, 2023, 12:40 PM IST

ರಾಕಿಂಗ್‌ ಸ್ಟಾರ್‌ ನಟ ಯಶ್ 19ನೇ ಚಿತ್ರ 'ಟಾಕ್ಸಿಕ್ - ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ಪಡೆದಿರುವ ಕೇರಳ ಮೂಲದ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಲಿದ್ದಾರೆ. ಯಾರು ಈ ಗೀತು ಮೋಹನ್ ದಾಸ್ ಎಂಬ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಖ್ಯಾತ ಮಾಲಿವುಡ್ ನಟಿ-ನಿರ್ದೇಶಕಿ ಗೀತು ಮೋಹನ್ ದಾಸ್ ನಟ ಯಶ್‌ ಅವರ ಮುಂದಿನ ಚಿತ್ರ ಟಾಕ್ಸಿಕ್ ನಿರ್ದೇಶಿಸಲಿದ್ದು, ಹೈ ಬಜೆಟ್‌ ಚಿತ್ರವು  ಗೋವಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರಗ್ ಮಾಫಿಯಾ ಹಿನ್ನೆಲೆಯಲ್ಲಿ ಆಕ್ಷನ್-ಆಧಾರಿತ ಸಿನೆಮಾವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹ-ನಿರ್ಮಾಣ ಮಾಡಿದೆ. ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್  ಯಶ್ ನಿರ್ಮಾಣ ಸಂಸ್ಥೆ ಎಂದು ತಿಳಿದುಬಂದಿದೆ.  ಶೂಟಿಂಗ್‌  ಹಂತದಲ್ಲಿರುವ ಈ ಚಿತ್ರವು ಏಪ್ರಿಲ್ 10, 2025 ರಂದು ತೆರೆ ಕಾಣಲಿದೆ. 

ಗೀತು ನಿಜ ನಾಮಧೇಯ ಗಾಯತ್ರಿ ದಾಸ್. ನಟಿ ಜೊತೆಗೆ ಮಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ಸ್ಟಾರ್‌ ನಿರ್ದೇಶಕಿ. 2013 ರಲ್ಲಿ, ಅವರು ಸಾಮಾಜಿಕ-ರಾಜಕೀಯ ಕಥಾಹಂದರದ ಲೈಯರ್ಸ್ ಡೈಸ್ ಅನ್ನು ನಿರ್ದೇಶಿಸಿದರು, ಇದು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದೆ. ಈ ಚಿತ್ರ ಸನ್‌ಡಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಮತ್ತು US 87ನೇ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತ ಸರ್ಕಾರವು ಪ್ರವೇಶವಾಗಿ ಆಯ್ಕೆ ಮಾಡಿತು.

Tap to resize

1986 ರಲ್ಲಿ ಮೋಹನ್‌ಲಾಲ್ ಮುಖ್ಯ ಭೂಮಿಕೆಯಲ್ಲಿ ತನ್ನ ನಾಲ್ಕನೇ ಚಿತ್ರ ಒನ್ನು ಮೊದಲ್ ಪೂಜ್ಯಂ ವಾರೆಯಲ್ಲಿ ನಟಿಸಿದಾಗ ಇವರ ಹೆಸರು ಗೀತು ಎಂದು ಪರದೆಯಲ್ಲಿ ಕಾಣಿಸಿತು. ಗೀತು ಆಕೆಯ ಕುಟುಂಬ ಪ್ರೀತಿಯಿಂದ ಕರೆಯುವ ಹೆಸರಾಗಿದೆ.  ಆಗ ಗೀತುಗೆ ಐದು ವರ್ಷ ವಯಸ್ಸಾಗಿತ್ತು. ಈ ಚಿತ್ರದ ಮೂಲಕ ಬಾಲನಟಿಯಾಗಿ ಎಂಟ್ರಿಕೊಟ್ಟಿದ್ದ ಗೀತು, ಮೊದಲ ಅಭಿನಯದಲ್ಲೇ ಮಲೆಯಾಳಂ ಜನರ ಮನ ಗೆದ್ದಿದ್ದರು. ಬಳಿಕ ಎನ್ ಬೊಮ್ಮಕುಟ್ಟಿ ಅಮ್ಮವುಕ್ಕು  ನಲ್ಲಿ ಕೂಡ ಬಾಲಕಲಾವಿದೆಯಾಗಿ ನಟಿಸಿದರು.

ದೊಡ್ಡವರಾದ ನಂತರ ಗೀತು ನಟಿಸಿದ ಮೊದಲ ಚಿತ್ರ ಮೋಹನ್ ಲಾಲ್ ನಾಯಕನಾಗಿ ನಟಿಸಿದ ಲೈಫ್ ಈಸ್ ಬ್ಯೂಟಿಫುಲ್. ಬಳಿಕ ತೆಂಕಶಿ ಪಟ್ಟಣಂ, ವಲ್ಕನ್ನಡಿ, ನಮ್ಮಲ್ ತಮ್ಮಿಲ್ ಮತ್ತು ಹಲವಾರು ಇತರ ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದರು.

ನಳ ಧಮಯಂತಿ, ಪೋಯಿ, ಅಕಲೆ ಇತ್ಯಾದಿ ಮಲಯಾಲಂನ ಹಿಟ್‌ ಚಿತ್ರಗಳಲ್ಲಿ ನಟಿಸಿರುವ ಗೀತು. ಶ್ಯಾಮಪ್ರಸಾದ್ ನಿರ್ದೇಶಿಸಿದ ಮತ್ತು ಟಾಮ್ ಜಾರ್ಜ್ ಕೋಲಾತ್ ನಿರ್ಮಿಸಿದ ಅಕಲೆ ಚಿತ್ರ ಆಕೆಯ ವೃತ್ತಿಜೀವನವನ್ನು ಉನ್ನತ ಮಟ್ಟಕ್ಕೆ ಕೊಡೊಯ್ಯಿತು.  2004 ರಲ್ಲಿ ಬಂದ ಈ ಚಿತ್ರಕ್ಕೆ ಅತ್ಯುತ್ತಮ ನಟಿ ಕೇರಳ ರಾಜ್ಯ ಪ್ರಶಸ್ತಿ ಸಿಕ್ಕಿತು.  ಅತ್ಯುತ್ತಮ ನಟಿ-ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಗೀತು ಗೆದ್ದರು. ಅಕಲೆಯಲ್ಲಿ ರೋಸ್ ಪಾತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿತ್ತು.

Geetu Mohandas

ಗೀತು ಮೋಹನ್‌ದಾಸ್ ಅವರು 2009 ರಲ್ಲಿ ತಮ್ಮ ಚಲನಚಿತ್ರ ನಿರ್ಮಾಣ ಸಂಸ್ಥೆ  ಅನ್‌ಪ್ಲಗ್ಡ್  ಅನ್ನು ಸ್ಥಾಪಿಸಿದರು. ಬಳಿಕ ತನ್ನ ನಿರ್ದೇಶನದ ಚೊಚ್ಚಲ ಕಿರು ಫಿಕ್ಷನ್‌ ಚಿತ್ರ ಕೇಳ್ಕುನ್ನುಂಡೋ ಆರ್ ಯು ಲಿಸ್ನಿಂಗ್ ಅನ್ನು ಅನ್‌ಪ್ಲಗ್ಡ್ ಮೂಲಕ ನಿರ್ಮಿಸಿದರು. ಈ ಚಲನಚಿತ್ರವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ರೋಟರ್‌ಡ್ಯಾಮ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು   7 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ಭಾರತದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಚಲನಚಿತ್ರವನ್ನು 2014 ರಿಂದ 12 ನೇ ತರಗತಿಯ ಕೇರಳ ರಾಜ್ಯ ಪಠ್ಯಕ್ರಮದಲ್ಲಿ ಅಧ್ಯಾಯವಾಗಿ ಸೇರಿಸಲಾಗಿದೆ.

ಅವರ ಮೊದಲ ಚಲನಚಿತ್ರ "ಲೈಯರ್ಸ್ ಡೈಸ್" (ಹಿಂದಿ ಭಾಷೆ) ಸ್ಕ್ರಿಪ್ಟ್ ಮತ್ತು ಪ್ರಾಜೆಕ್ಟ್ ಅಭಿವೃದ್ಧಿಗಾಗಿ ಹಬರ್ಟ್ ಬಾಲ್ಸ್ ನಿಧಿ ಪಡೆಯಿತು ಮತ್ತು ಈ ಚಲನಚಿತ್ರವು 2014 ರಲ್ಲಿ ಸನ್ಡಾನ್ಸ್ ಚಲನಚಿತ್ರೋತ್ಸವದಲ್ಲಿ ವಿಶ್ವ ನಾಟಕ ಸ್ಪರ್ಧೆಗೆ ಆಯ್ಕೆಯಾಯಿತು. ಲಯರ್ಸ್ ಡೈಸ್  ಪ್ರಪಂಚದಾದ್ಯಂತ ಆರು ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ಭಾರತದಲ್ಲಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದು 87ನೇ ಅಕಾಡೆಮಿ ಪ್ರಶಸ್ತಿಗಳಿಗಾಗಿ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶ ಪಡೆದ ಸಿನೆಮಾವಾಗಿದೆ.

ಗೀತು ಅವರ ಎರಡನೇ ಚಲನಚಿತ್ರ, ಮೂತೊನ್ (ಹಿಂದಿ ಮತ್ತು ಮಲೆಯಾಳಂ) ಅನ್ನು ಸನ್‌ಡಾನ್ಸ್ ಫಿಲ್ಮ್ ಲ್ಯಾಬ್‌ನಿಂದ ಮಾರ್ಗದರ್ಶನ ಮಾಡಲಾಯಿತು ಮತ್ತು ಗೀತು 2016 ರಲ್ಲಿ ಸನ್‌ಡಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಗ್ಲೋಬಲ್ ಫಿಲ್ಮ್ ಮೇಕರ್ ಪ್ರಶಸ್ತಿಯನ್ನು ಗೆದ್ದರು. ಮೂತನ್ 2019 ರಲ್ಲಿ ಟೊರೊಂಟೊ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತನ್ನ ಮೊದಲ ಪ್ರದರ್ಶನವನ್ನು ಕಂಡಿತ್ತು ಮತ್ತು MAMI 2019 ನಲ್ಲಿ ಆರಂಭಿಕ ಚಲನಚಿತ್ರವಾಗಿತ್ತು.

8 ಜೂನ್ 1981 ರಂದು ಕೊಚ್ಚಿಯಲ್ಲಿ ಮೋಹನ್‌ದಾಸ್ ಮತ್ತು ಲತಾ ದಂಪತಿ ಪುತ್ರಿಯಾಗಿ ಜನಿಸಿದ ಗಾಯತ್ರಿ ದಾಸ್. ಭಾರತ, ಮಲೇಷ್ಯಾ ಮತ್ತು ಕೆನಡಾದಲ್ಲಿ ಅಧ್ಯಯನ ಮಾಡಿದ್ದಾರೆ. 14 ನವೆಂಬರ್ 2009 ರಂದು, ಅವರು ಮಲೆಯಾಳಂನ ಖ್ಯಾತ ಸಿನಿಮಾಟೋಗ್ರಾಫರ್, ನಿರ್ದೇಶಕ ರಾಜೀವ್ ರವಿಯನ್ನು ವಿವಾಹವಾಗಿದ್ದಾರೆ. ದಂಪತಿಗೆ ಆರಾಧನಾ ಎಂಬ ಮಗಳಿದ್ದಾಳೆ. 

ಯಶ್ ಚಿತ್ರಕ್ಕೆ ಡೈರೆಕ್ಟರ್ ಕ್ಯಾಪ್‌ ತೊಡುವ ಬಗ್ಗೆ  ಮಾತನಾಡಿದ ಗೀತು,  "ನಾನು ಯಾವಾಗಲೂ ನನ್ನ ನಿರೂಪಣೆಯ ಶೈಲಿಯಲ್ಲಿ ಪ್ರಯೋಗ ಮಾಡಿದ್ದೇನೆ. 'ಲೈಯರ್ಸ್ ಡೈಸ್' ಮತ್ತು 'ಮೂತೊನ್' ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದರೂ, ನನ್ನ ದೇಶದಲ್ಲಿ ನನ್ನದೇ ಆದ ಪ್ರೇಕ್ಷಕರನ್ನು ಹುಡುಕಲು ನಾನು ಯಾವಾಗಲೂ ಹಂಬಲಿಸುತ್ತೇನೆ. ಆ ಚಿಂತನೆಯಿಂದಲೇ ಈ ಚಿತ್ರದ ಯೋಜನೆ ಹುಟ್ಟಿಕೊಂಡಿದೆ. 

ಟಾಕ್ಸಿಕ್‌ ಚಿತ್ರವು ಎರಡು ವಿರುದ್ಧ ಪ್ರಪಂಚಗಳ ಸಮ್ಮಿಲನವಾಗಿದೆ ಮತ್ತು ಕಥೆ ಹೇಳುವಲ್ಲಿ ಸೌಂದರ್ಯಶಾಸ್ತ್ರವು ಒಟ್ಟಿಗೆ ಬರುತ್ತದೆ ಎಂಬುದನ್ನು ನಾನು ಯಶ್ ಅವರಲ್ಲಿ ಕಂಡುಕೊಂಡೆ. ನಾನು ಕಂಡ ಅತ್ಯಂತ ಅದ್ಭುತ ಮನಸ್ಸಿನವರಲ್ಲಿ ಯಶ್ ಒಬ್ಬರು ಮತ್ತು ನಮ್ಮ ತಂಡದೊಂದಿಗೆ ಈ ಮಾಂತ್ರಿಕ ಪ್ರಯಾಣವನ್ನು ಪ್ರಾರಂಭಿಸಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
 

Latest Videos

click me!