ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ ನ. 29ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕುವೆಂಪು ಅವರ ಮಂತ್ರ ಮಾಂಗಲ್ಯದಂತೆ ವಿವಾಹ ನೆರವೇರಿತ್ತು.
ಉದ್ಯಮಿ ವಿಜಯ್ ಘೋರ್ಪಡೆ ಅವರು ಮಂತ್ರ ಮಾಂಗಲ್ಯ ಮೂಲಕ ಪೂಜಾ ಕೈ ಹಿಡಿದಿದ್ದು, ವಿಜಯ್ ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಮಾಲೀಕರಾಗಿದ್ದಾರೆ.
ಬೆಂಗಳೂರಿನ ಯಲಹಂಕ ಬಳಿ ಇರುವ ಖಾಸಗಿ ರೆಸಾರ್ಟ್ ಒಂದರಲ್ಲಿ ಬಹಳ ಸರಳವಾಗಿ ಇವರಿಬ್ಬರ ವಿವಾಹ ಸಮಾರಂಭ ಜೋಡಿಯ ಆಸೆಯಂತೆ ನಡೆದಿತ್ತು.
ನಟಿ ಪೂಜಾ ಗಾಂಧಿ ಮತ್ತು ವಜಿಯ್ ಅವರ ಕುಟುಂಬದ ಆಪ್ತರು ಮತ್ತು ಚಿತ್ರರಂಗದ ಕೆಲವು ಸ್ನೇಹಿತರು, ಕಲಾವಿದರು ಈ ವಿವಾಹದಲ್ಲಿ ಭಾಗಿಯಾಗಿದ್ದರು.
ಕನ್ನಡ ಚಿತ್ರರಂಗದಲ್ಲಿ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾದ ಮೊದಲ ತಾರೆ ಎಂಬ ಕಾರಣಕ್ಕೂ ಪೂಜಾ ಗಾಂಧಿ ವಿಶೇಷ ಎನಿಸಿಕೊಂಡಿದ್ದಾರೆ.
ಇದೀಗ ಮದುವೆಯಾದ ಬಳಿಕ ದಂಪತಿ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಗೆ ಭೇಟಿ ನೀಡಿದ್ದು, ಅಲ್ಲಿ ತೆಗೆಸಿಕೊಂಡಿರುವ ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿಗೆ ಕನ್ನಡವೆಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಕನ್ನಡ ಬರೆಯುವುದನ್ನು ಕೂಡ ಕಲಿತಿದ್ದಾರೆ.
Pooja gandhi
2006ರಲ್ಲಿ ಬಿಡುಗಡೆಯಾಗಿ ಸ್ಯಾಂಡಲ್ ವುಡ್ ನಲ್ಲಿ ಭಾರೀ ಯಶಸ್ಸು ಗಳಿಸಿದ ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಪೂಜಾ ಗಾಂಧಿ ಒಂದೇ ಸಿನಿಮಾ ಮೂಲಕ ಕರ್ನಾಟಕದಾದ್ಯಂತ ಚಿರಪರಿಚಿತರಾದರು.
Pooja gandhi
‘ಕವಿಶೈಲ’ ಎಂದು ಅಡಿಬರಹ ನೀಡಿ ಪತಿಯ ಜೊತೆ ಇರುವ ಫೋಟೋಗಳನ್ನು ಪೂಜಾ ಗಾಂಧಿ ಪೋಸ್ಟ್ ಮಾಡಿದ್ದಾರೆ. ಮದುವೆ ಬಳಿಕ ಕುವೆಂಪು ಹುಟ್ಟಿ ಬೆಳೆದ ಜಾಗಕ್ಕೆ ಅವರು ಭೇಟಿ ನೀಡಿದ್ದಾರೆ ಅನ್ನೋದು ವಿಶೇಷ.
Pooja gandhi
ಹೊರ ರಾಜ್ಯದವರಾದ ಪೂಜಾ ಗಾಂಧಿ ಕರ್ನಾಟಕಕ್ಕೆ ಬಂದು ಕನ್ನಡ ಕಲಿತಿದ್ದಾರೆ. ಕನ್ನಡದವರನ್ನೇ ಮದುವೆಯಾಗಿ ಕನ್ನಡದ ಸೊಸೆಯಾಗಿದ್ದಾರೆ.