ಪ್ಯಾರ್‌ಗೆ ಆಗ್ಬಿಟ್ಟೈತೆ ನಟಿ ಪಾರುಲ್ ಯಾದವ್ ಈವಾಗ ಎಲ್ಲಿದ್ದಾರೆ?

First Published | Dec 29, 2023, 5:58 PM IST

ಪ್ಯಾರ್ ಗೆ ಆಗ್ಬಿಟೈತೆ… ಹಾಡಿನ ಮೂಲಕ ಕನ್ನಡಿಗರ ಮನಸ್ಸು ಗೆದ್ದ ನಟಿ ಪಾರುಲ್ ಯಾದವ್ ಈವಾಗ ಏನು ಮಾಡ್ತಿದ್ದಾರೆ? ಎಲ್ಲಿದ್ದಾರೆ ಅನ್ನೋದು ಗೊತ್ತಾ? ಚಿತ್ರರಂಗದಿಂದ ದೂರ ಉಳಿದೇ ಬಿಟ್ರಾ ಪಾರುಲ್. 

ನಟ ಕೋಮಲ್ ಅಭಿನಯದ ಗೋವಿಂದಾಯ ನಮಃ ಚಿತ್ರದಲ್ಲಿನ ಪ್ಯಾರ್ ಗೇ ಆಗ್ಬಿಟೈತೆ ಹಾಡು ಎಷ್ಟೊಂದು ಫೇಮಸ್ ಆಗ್ಬಿಟ್ಟಿತ್ತು ಅಂದ್ರೆ, ಆ ಹಾಡಿಗೆ ಹೆಜ್ಜೆ ಹಾಕಿದ ಪಾರುಲ್ ಯಾದವ್ (Parul Yadav) ಸಹ ಅಷ್ಟೇ ಫೇಮಸ್ ಆಗಿದ್ದರು. 
 

ತಮ್ಮ ಗ್ಲಾಮರಸ್ ಲುಕ್ ನಿಂದ ಪಡ್ಡೆ ಹುಡುಗರ ಹೃದಯ ಗೆದ್ದಿದ್ದ, ಜೊತೆಗೆ ತಮ್ಮ ಅಭಿನಯದ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ಪಾರುಲ್ ಯಾದವ್ ಈವಾಗ ಎಲ್ಲಿದ್ದಾರೆ? ಚಿತ್ರರಂಗದಿಂದ ದೂರವೇ ಉಳಿದು ಬಿಟ್ರ? 

Tap to resize

ಮುಂಬೈ ಮೂಲದವರಾದ ನಟಿ ಪಾರುಲ್ ಕನ್ನಡ, ತಮಿಳು ಮತ್ತು ಮಲಯಾಲಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚಿದ್ದ ನಟಿ. ಇವರಿಗೆ ಹೆಸರು ಮತ್ತು ಜನಪ್ರಿಯತೆ ತಂದುಕೊಟ್ಟಿದ್ದು ಕನ್ನಡ ಚಿತ್ರರಂಗ. 
 

ಟಿವಿ ಶೋಗಳಲ್ಲಿ ನಿರೂಪಣೆ ಮಾಡುತ್ತಿದ್ದ ಪಾರುಲ್ ‘ಭಾಗ್ಯವಿಧಾತ" ಎಂಬ ಹಿಂದಿ ಧಾರಾವಾಹಿಯ ಮೂಲಕ ನಟನೆ ಆರಂಭಿಸಿದರು.  ಬಳಿಕ ಕೋಮಲ್‌ ನಟನೆಯ ಗೋವಿಂದಾಯ ನಮಃ" ಚಿತ್ರದ ಮೂಲಕ ಸ್ಯಾಂಡಲ್ವುಡ್‌ ಗೆ (Sandalwood) ಎಂಟ್ರಿ ಕೊಟ್ಟರು.

ಕನ್ನಡದಲ್ಲಿ ಇವರು ಕಿಚ್ಚ ಸುದೀಪ್, ಉಪೇಂದ್ರ, ಚಿರಂಜೀವಿ ಸರ್ಜಾ, ಡಾಲಿ ಧನಂಜಯ್ ಜೊತೆ ನಟಿಸುವ ಮೂಲಕ ಕನ್ನಡದ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ನೆಲೆಯೂರಿದ್ದರು. 
 

ಪಾರುಲ್ ನಟಿಸಿದ ಬಚ್ಚನ್ ಮತ್ತು ಜೆಸ್ಸಿ ಚಿತ್ರಗಳು ಜನರಿಗೆ ತುಂಬಾನೆ ಇಷ್ಟವಾಗಿದ್ದವು. ಅಷ್ಟೇ ಅಲ್ಲ ಬಚ್ಚನ್, ಆಟಗಾರ ಮತ್ತು ಕಿಲ್ಲಿಂಗ್ ವೀರಪ್ಪನ್ ಚಿತ್ರಗಳಿಗಾಗಿ ಇವರು ಆರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. 

ಕಿಲ್ಲಿಂಗ್ ವೀರಪ್ಪನ್, ಜೆಸ್ಸಿ ಮತ್ತು 2018ರಲ್ಲಿ ಸೀಸರ್ ಸಿನಿಮಾದಲ್ಲಿ ನಟಿಸಿದ ಬಳಿಕ ಪಾರುಲ್ ಸಿನಿಮಾರಂಗದಿಂದ ದೂರಾನೆ ಉಳಿದಿದ್ದಾರೆ. ಇದಾದ ನಂತರ ಅವರು ಮತ್ತೆ ಕನ್ನಡದಲ್ಲಾಗಲಿ ಬೇರೆ ಯಾವುದೇ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. 
 

ಸದ್ಯ ಸಿನಿಮಾದಿಂದ ದೂರ ಉಳಿದಿರುವ  ಪಾರುಲ್ ಮುಂಬೈನಲ್ಲಿ ನೆಲೆಸಿದ್ದು ಸೋಲೊ ಟ್ರಿಪ್ ಗಳಲ್ಲಿ ಬ್ಯೂಸಿಯಾಗಿದ್ದಾರೆ.ಇವರಿಗೆ ಒಂಟಿಯಾಗಿ ಪ್ರವಾಸ ಮಾಡುವುದೆಂದರೆ ಬಲು ಇಷ್ಟ. ಜೊತೆಗೆ ಪಾರ್ಟಿ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇವರ ಬೋಲ್ಡ್ ಲುಕ್ ನೋಡಿ ಜನರು ವಾವ್ ಅನ್ನುತ್ತಿದ್ದಾರೆ. 

Latest Videos

click me!