ಮುಳ್ಳಯ್ಯನಗಿರಿಗೆ ಹೈಕಿಂಗ್ ಮಾಡಿ ಸಂಭ್ರಮಿಸಿದ ಗಾಯಕ ವಿಜಯ್ ಪ್ರಕಾಶ್ ದಂಪತಿ

First Published | Dec 28, 2023, 5:39 PM IST

ಕರ್ನಾಟಕ ಅತ್ಯಂತ ಎತ್ತರದ ಪರ್ವತ ಶಿಖರವಾದ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ದಂಪತಿಗಳು ಟ್ರೆಕ್ಕಿಂಗ್ ಮಾಡಿದ್ದು, ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಕನ್ನಡ ನಾಡಿನ ಕಂಚಿನ ಕಂಠದ ಗಾಯಕ, ಕನ್ನಡಿಗರ ನೆಚ್ಚಿನ ವಿಪಿ ಸರ್ ಅಂದ್ರೆ ವಿಜಯ್ ಪ್ರಕಾಶ್ (Vijay Prakash), ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
 

ಈ ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ಹಾಡು, ತಮಾಷೆ ಮಾಡುತ್ತಾ, ಅರ್ಜುನ್ ಜನ್ಯ ಕಾಲೆಳೆಯುತ್ತಾ ಮೋಜು ಮಾಡುವ, ಗಾಯಕಿ ಅಭ್ಯರ್ಥಿಗಳನ್ನು ತಿದ್ದಿ ತೀಡುವ ವಿಪಿ ಸರ್ ಎಂದರೆ ಕೇವಲ ಸರಿಗಮಪ ಶೋಗೆ ಮಾತ್ರ ಅಲ್ಲ ಕನ್ನಡಿಗರಿಗೂ ಪ್ರೀತಿ. 
 

Tap to resize

ವಿಜಯ್ ಪ್ರಕಾಶ್ ಅವರು ಕನ್ನಡದ ಜೊತೆ ತಮಿಳು ಸಿಂಗಿಂಗ್ ರಿಯಾಲಿಟಿ ಶೋದಲ್ಲೂ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಅವರು, ಎಲ್ಲಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಚಿಕ್ಕಮಗಳೂರಿಗೆ ತೆರಳಿ ಟ್ರೆಕ್ಕಿಂಗ್ ಮಾಡಿಕೊಂಡು ಬಂದಿದ್ದಾರೆ. 
 

ಹೌದು ವಿಜಯ್ ಪ್ರಕಾಶ್, ಅವರ ಪತ್ನಿ ಮಹತಿ ವಿಜಯಪ್ರಕಾಶ್ (Mahathi Vijay Prakash) ಜೊತೆಗೆ ಇಬ್ಬರು ಸ್ನೇಹಿತರು ಸೇರಿ ನಾಲ್ಕು ಜನ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಹೈಕಿಂಗ್ ಮಾಡಿದ್ದು, ಆ ಸಂಭ್ರಮದ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ವಿಜಯ್ ಪ್ರಕಾಶ್ ನೀವು ಚಿಕ್ಕಮಗಳೂರಿಗೆ ಭೇಟಿ ನೀಡಿದರೆ ಖಂಡಿತವಾಗಿಯೂ ಮುಳ್ಳಯ್ಯನಗಿರಿಗೆ (Mullayyanagiri) ಹೈಕಿಂಗ್ ಮಾಡುವ ಅನುಭವವನ್ನು ಮಿಸ್ ಮಾಡಲೇ ಬೇಡಿ ಎಂದು ಬರೆದುಕೊಂಡಿದ್ದಾರೆ. 

ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯಂತ ಎತ್ತರವಾದ ಪರ್ವತವಾಗಿದ್ದು, ಇದು ಸುಮಾರು 1925 ಮೀಟರ್ ಎತ್ತರದಲ್ಲಿದೆ. ಗಿರಿಯ ಬೇಸ್ ವರೆಗೂ ವಾಹನದಲ್ಲಿ ತೆರಳಿ, ಅಲ್ಲಿಂದ ಸ್ಟೆಪ್ ಮೂಲಕ ಅಥವಾ ಟ್ರೈಲ್ ಮೂಲಕ ತುತ್ತ ತುದಿಗೆ ಸುಲಭವಾಗಿ ತಲುಪಬಹುದು ಎಂದು ವಿಪಿ ಸರ್ ಬರೆದುಕೊಂಡಿದ್ದಾರೆ. 
 

ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಗೀತೆಗಳನ್ನು ನೀಡುತ್ತಾ ಬಂದಿರುವ ವಿಜಯ್ ಪ್ರಕಾಶ್ ಅವರು ದೇಶ ವಿದೇಶದಲ್ಲಿ ಶೋಗಳನ್ನು ನೀಡುತ್ತಾ ಬಂದಿದ್ದಾರೆ. ಕನ್ನಡದಲ್ಲಿ ಕಾಂತಾರ ಚಿತ್ರದ ಸಿಂಗಾರ ಸಿರಿಯೇ, ವಾಮನ ಚಿತ್ರದ ಮುದ್ದು ರಾಕ್ಷಸಿ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. 
 

Latest Videos

click me!