Upendra's Tears: ರಿಯಲ್ ಸ್ಟಾರ್ ಉಪೇಂದ್ರ ಅವರು '45' ಸಿನಿಮಾ ಪ್ರಚಾರದ ವೇಳೆ, ತಾವು ಮೊದಲ ಬಾರಿಗೆ ಕಣ್ಣೀರು ಹಾಕಿದ ಕ್ಷಣವನ್ನು ಬಹಿರಂಗಪಡಿಸಿದ್ದಾರೆ. ತನ್ನ ವಿಚಾರಧಾರೆಗಳಿಗೂ ದ್ರೋಹ ಬಗೆಯಲಾಗದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಅನುಭವಿಸಿದ ನೋವಿನಿಂದ ಅತ್ತಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಮೊದಲ ಬಾರಿಗೆ ತಮ್ಮೊಳಗಿನ 'ನಾನು' ಕಣ್ಣೀರು ಹಾಕಿದ್ದು ಯಾವಾಗ ಮತ್ತು ಯಾಕೆ ಎಂಬುದನ್ನು ಹೇಳಿಕೊಂಡಿದ್ದಾರೆ. ನಂತರ ಈಗ ತಮ್ಮಲ್ಲಿಯ ಕಣ್ಣೀರು ಬತ್ತಿದೆ ಎಂಬ ಮಾತನ್ನು ಸಹ ಉಪೇಂದ್ರ ಹೇಳಿದ್ದಾರೆ. ಉಪೇಂದ್ರ ಕಣ್ಣೀರಿಗೆ ಕಾರಣವಾಗಿದ್ದು ಯಾವ ವಿಷಯ ಎಂಬುದನ್ನು ನೋಡೋಣ ಬನ್ನಿ.
26
45 ಸಿನಿಮಾ ಪ್ರಚಾರದಲ್ಲಿ ಉಪೇಂದ್ರ ಬ್ಯುಸಿ
ಉಪೇಂದ್ರ, ಶಿವರಾಜ್‌ಕುಮಾರ್ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ 45 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಉಪೇಂದ್ರ, ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋಗೆ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕಿ ಅನುಶ್ರೀ , ಕನ್ನಡಿಯನ್ನು ಉಪೇಂದ್ರ ಮುಂದೆ ಇರಿಸುತ್ತಾರೆ. ಈ ಕನ್ನಡಿಯೊಳಗಿನ ಉಪೇಂದ್ರ ಯಾವತ್ತಾದ್ರೂ ಅತ್ತಿದ್ದಾರೆ ಎಂದು ಕೇಳುತ್ತಾರೆ.
36
ಅನುಶ್ರೀ ಪ್ರಶ್ನೆಗೆ ಉಪೇಂದ್ರ ಹೇಳಿದ್ದೇನು?
ಅನುಶ್ರೀ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ಕನ್ನಡಿಯೊಳಗಿರುವ ಉಪೇಂದ್ರ ತುಂಬಾ ಬಾರಿ ಅತ್ತಿದ್ದಾನೆ. ಇತ್ತೀಚೆಗೆ ಪ್ರಜಾಕೀಯ ಎಂಬ ಕಲ್ಪನೆ ಮಾಡಿದ್ದೆ. ಒಬ್ಬರು ಬಂದು ಪಕ್ಷ ತೆಗೆದುಕೊಳ್ಳಿ ಎಂದು ನೀಡಿದ್ರು. ನೀವು ಹೇಳಿದ್ದೆ ಕರೆಕ್ಟ್, ಪಕ್ಷದ ಎಲ್ಲಾ ಚಟುವಟಿಕೆಗಳನ್ನು ಮಾಡಿಕೊಂಡು ಹೋಗಿ ಎಂದು ಹೇಳಿದರು.
ನಾವು ಸಹ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆಗೆ ಮುಂದಾದೀವಿ. ಇನ್ನೇನು ಚುನಾವಣೆಗೆ ಹೋಗಬೇಕು ಅನ್ನುವಷ್ಟರಲ್ಲಿ ನೀವು ಸರಿ ಇಲ್ಲ, ನಿಮ್ಮ ಯೋಚನೆ ವರ್ಕೌಟ್ ಆಗಲ್ಲ. ನಮ್ಮ ದಾರಿಯಲ್ಲಿಯೇ ಹೋಗಬೇಕು ಎಂದು ಹೇಳಿದ್ದರು. ಆ ವೇಳೆಗಾಗಲೇ ನನ್ನನ್ನು ನಂಬಿಕೊಂಡು 200 ಜನರು ಬಂದಿದ್ದರು. ಆ ಸಮಯದಲ್ಲಿ ನನಗೆ ಸಿಕ್ಕಾಪಟ್ಟೆ ಫೀಲ್ ಆಯ್ತು.
56
ಅದೇ ಕೊನೆ!
ಚುನಾವಣೆಗೆ ಸ್ಪರ್ಧಿಸಲು ನನ್ನೊಂದಿಗೆ ಸುಮಾರು 200 ಜನರು ಬಂದಿದ್ದರು. ಇವರನ್ನು ಬಿಡುವ ಹಾಗಿಲ್ಲ, ಹಿಡಿದುಕೊಳ್ಳುವ ಹಾಗಿಲ್ಲ ಎಂಬ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಅವರೆಲ್ಲರನ್ನೂ ಬಿಟ್ರೆ ಮೋಸ ಮಾಡಿದಂತಾಗುತ್ತಿತ್ತು. ಹೋದ್ರೆ ನನ್ನ ವಿಚಾರಧಾರೆಗಳಿಗೆ ದ್ರೋಹ ಮಾಡಿದಂತಾಗುತ್ತಿತ್ತು. ಆ ಸಮಯದಲ್ಲಿ ತುಂಬಾ ನೋವಾಗಿ ಅತ್ತಿದ್ದೆ ಮತ್ತು ಅದೇ ಕೊನೆ. ಆದ್ರೆ ಈ ಆ ಕಣ್ಣೀರು ಬತ್ತಿದೆ ಎಂದು ಉಪೇಂದ್ರ ತಿಳಿಸಿದರು.
ಉಪೇಂದ್ರ ಅವರ ಈ ಮಾತುಗಳನ್ನ ಕೇಳಿದ ಅಭಿಮಾನಿಗಳು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇರುವುದರಲ್ಲಿ ಬುದ್ಧಿವಂತರುನೀವು ನಿಮ್ಮನ್ನೇ ನಂಬಿಸಿ ನಿಮಗೂ ನೋವು ಮಾಡಿದ್ದಾರೆ .ಇರಲಿ ನೀವೂ ಮೋಸಹೋಗುವ ಸ್ಥಿತಿಗೆ ಬಂದರೆ ಇನ್ನೂ ಮುಂದೆ ಯಾರನ್ನೂ ಯಾರೂ ನಂಬಲು ಕಷ್ಟವಾಗುತ್ತದೆ. ನಿಮ್ಮ ಕಣ್ಣೀರು ನಿಮ್ಮನ್ನು ನಂಬಿ ಬಂದವರಿಗೆ ಎನ್ನುವ ಸಂಕಟವೇ ಹೊರತು ಜನ ಅಂದರೆ ನಾವೆಲ್ಲಾ ಎನ್ನುವ ತಿಳುವಳಿಕೆ ಬರುವಷ್ಟರಲ್ಲಿ ಇನ್ನೂ ಏನೇನು ಅನಾಹುತಗಳು ಆಗುತ್ತದೆಯೋ ಅನ್ನುವುದೇ ಚಿಂತೆ ಎಂದು ಶೋಬನ್ ಕುಮಾರ್ ಎಂಬವರು ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.