ನಟಿಯಲ್ಲ, ಶ್ರುತಿ ಪುತ್ರಿಗೆ IPS ಅಧಿಕಾರಿಯಾಗುವ ಕನಸು : Viral Post ಬಗ್ಗೆ ಗೌರಿ ಏನಂದ್ರು?

Published : Mar 27, 2026, 12:21 PM IST

ಸೋಶಿಯಲ್ ಮೀಡಿಯಾದಲ್ಲಿ ಹಲವಾರು ದಿನಗಳಿಂದ ಕನ್ನಡದ ಜನಪ್ರಿಯ ನಟಿ ಶ್ರುತಿ ಅವರ ಪುತ್ರಿ ಗೌರಿ ಶ್ರುತಿ ಅವರು IPS ಅಧಿಕಾರಿಯಾಗಿ ಜನರ ಕಷ್ಟಗಳನ್ನು ಪರಿಹರಿಸಲು ಬಯಸುತ್ತಾರೆ ಎನ್ನುವ ಪೋಸ್ಟ್ ಒಂದು ಓಡುತ್ತಿದ್ದು, ಇದೀಗ ಆ ಪೋಸ್ಟ್ ಗೆ ಸ್ವತಃ ಗೌರಿ ಉತ್ತರ ನೀದಿದ್ದಾರೆ. 

PREV
16
ಶ್ರುತಿ ಪುತ್ರಿ ಗೌರಿ

ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಶ್ರುತಿ. ನಾಯಕಿಯಾಗಿ, ಪೋಷಕಪಾತ್ರದಲ್ಲಿ, ಈಗ ವಿಲನ್ ಆಗಿಯೂ ಸಹ ಶ್ರುತಿ ಅದ್ಭುತ ಅಭಿನಯ ನೀಡುವ ಮೂಲಕ ಜನಮನ ಗೆದ್ದಿದ್ದಾರೆ. ಶ್ರುತಿ ಮಾತ್ರವಲ್ಲ್ ಶ್ರುತಿ ಪುತ್ರಿ ಸಹ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಅವರ ಬಗ್ಗೆ ಒಂದಲ್ಲ ಒಂದು ಊಹಾಪೋಹಗಳು ಕೇಳೀ ಬರುತ್ತಿರುತ್ತವೆ.

26
ಐಪಿಎಸ್ ಅಧಿಕಾರಿ ಆಗ್ತಾರ ಗೌರಿ

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಶ್ರುತಿ ಪುತ್ರಿ ಅಮ್ಮನಂತೆ ನಟಿಯಾಗೋದಿಲ್ಲ, ಬದಲಾಗಿ IPS ಅಧಿಕಾರಿಯಾಗಿ ಸೇವೆ ಸಲ್ಲಿಸಲು ಬಯಸುತ್ತಾರೆ ಎನ್ನುವ ಪೋಸ್ಟ್ ಸಿಕ್ಕಾಪಟ್ತೆ ವೈರಲ್ ಆಗಿತ್ತು. ಅದಕ್ಕೆ ಜನ ಕೂಡ ಮೆಚ್ಚುಗೆ ಸೂಚಿಸಿದ್ದರು. ಆದರೆ ಇದೆಲ್ಲಾ ನಿಜಾನ? ಗೌರಿ ನಿಜಕ್ಕೂ ಅಮ್ಮನ ಹಾದಿ ಹಿಡಿಯದೆ ಐಪಿಎಸ್ ಅಧಿಕಾಯಾಗಿ ಸೇವೆ ಸಲ್ಲಿಸುತ್ತಾರ?

36
ವೈರಲ್ ಆಗಿರುವ ಪೋಸ್ಟ್ ನಲ್ಲಿ ಏನಿತ್ತು?

ವೈರಲ್ ಆಗುತ್ತಿರುವ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ‘ನಾನು ಅಮ್ಮನಂತೆ ನಟಿಯಾಗಲು ಇಷ್ಟವಿಲ್ಲ. ನನ್ನ ಕನಸೇ ಬೇರೆ, ನಾನು IPS ಅಧಿಕಾರಿಯಾಗಿ ಜನರ ಕಷ್ಟಗಳನ್ನು ಪರಿಹರಿಸಬೇಕು. ಆದಷ್ಟು ಬೇಗ ವಿಧ್ಯಾಭ್ಯಾಸ ಮುಗಿಸಿ ನಮ್ಮ ಕರ್ನಾಟಕಕ್ಕೆ ಖಡಕ್ IPS ಆಫೀಸರ್ ಆಗುತ್ತೇನೆ ಎಂದು ಭರವಸೆ ಕೊಟ್ಟ ಶ್ರುತಿ ಮಗಳು’ ಎನ್ನುವ ಬರೆಯಲಾಗಿತ್ತು. ಇದೀಗ ಅದಕ್ಕೆ ಶ್ರುತಿ ಪುತ್ರಿ ಉತ್ತರ ಕೊಟ್ಟಿದ್ದಾರೆ.

46
ಗೌರಿ ಶ್ರುತಿ ಉತ್ತರ ಏನಿತ್ತು ಗೊತ್ತಾ?

ನನ್ನ ಜೀವನದ ಒಂದು ಹಂತದಲ್ಲಿ ನಾನು ಐಎಎಸ್ ಅಧಿಕಾರಿ ಆಗಬೇಕು ಎಂದು ಬಯಸಿದ್ದೆ… ವರ್ಷಗಳು ಕಳೆದಂತೆ ನಾನು ನನ್ನನ್ನು ನಟಿಯಾಗಿ ಇರುವುದನ್ನು ಹೊರತುಪಡಿಸಿ ಬೇರೆ ಯಾವುದಾಗಿಯೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತುಕೊಂಡೆ. ನಟಿಯಾಗುವುದು, ಗಾಯಕಿಯಾಗುವುದು ಎಂದಿಗೂ ನನ್ನ ಕನಸಾಗಿತ್ತು. ಮತ್ತು ನಾನು ಅದನ್ನೇ ಮುಂದುವರಿಸುತ್ತೇನೆ ಎಂದು ಗೌರಿ ಸ್ಪಷ್ಟನೆ ನೀಡಿದ್ದಾರೆ.

56
ಅಮ್ಮನ ಹಾದಿಯಲ್ಲೇ ಪುತ್ರಿ ಗೌರಿ

ವರ್ಷಗಳ ಹಿಂದೆ ಶ್ರುತಿ ಹುಟ್ಟುಹಬ್ಬದ ಪಾರ್ಟಿ ಸಂದರ್ಭದಲ್ಲಿ ಮಾತನಾಡಿದ ಗೌರಿ, ಹಿಂದೆ ನನಗೆ ಗೈನಕಾಲಜಿಸ್ಟ್, ಡಾಕ್ಟರ್, ಐಎಎಸ್ ಆಫೀಸರ್ ಆಗಬೇಕೆಂಬ ಕನಸು ಇತ್ತು. ಆದರೆ ಈಗ ನಾನು ಅಮ್ಮನಂತೆ ನಟಿಯಾಗಲು ಬಯಸಿದ್ದೇನೆ. ಅದಕ್ಕಾಗಿ ಎಲ್ಲಾ ತಯಾರಿ ನಡೆಸುತ್ತಿದ್ದೇನೆ. ಡ್ರಾಮಾ ಸ್ಕೂಲ್ ಸೇರಿದ್ದೇನೆ, ಡ್ಯಾನ್ಸ್ ಕಲಿಯುತ್ತಿದ್ದೇವೆ. ಉತ್ತಮ ಸ್ಕ್ರಿಪ್ಟ್ ಬಂದರೆ ಒಪ್ಪಿಕೊಳ್ಳುತ್ತೇನೆ ಎಂದಿದ್ದರು.

66
ಗೌರಿ ಗಾಯಕಿಯೂ ಹೌದು

ಸೋಶಿಯಲ್ ಮೀಡೀಯಾದಲ್ಲಿ ಆಕ್ಟಿವ್ ಆಗಿರುವ ಗೌರಿ, ಗಾಯಕಿ ಕೂಡ ಹೌದು. ತಮ್ಮ ಮಧುರ ಕಂಠದಿಂದ ಹಲವಾರು ಹಾಡುಗಳನ್ನೂ ಹಾಡಿದ್ದಾರೆ. ಅಷ್ಟೇ ಅಲ್ಲ, ಗೌರಿಗೆ ಇನ್’ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 209ಕೆ ಫಾಲೋವರ್ಸ್ ಕೂಡ ಇದ್ದಾರೆ. ಸಿನಿಮಾದಲ್ಲಿ ಗೌರಿಯನ್ನು ಯಾವಾಗ ನೋಡಬಹುದು ಅನ್ನೋದಕ್ಕೆ ಇನ್ನೂ ಕಾಯಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories