ಟ್ರೈಲರ್​ ನೋಡಿ 5 ಲಕ್ಷ ಗೆಲ್ಲಿ: ಪ್ರತಿಯೊಬ್ಬರಿಗೂ ಬಹುಮಾನ- ನಟ ಪ್ರಥಮ್​ ಬಂಪರ್​ ಆಫರ್​ ಏನು?

Published : Mar 26, 2026, 06:55 PM IST

ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರ 'ಫಸ್ಟ್ ನೈಟ್ ವಿತ್ ದೆವ್ವ' ಚಿತ್ರವು ಏಪ್ರಿಲ್ 3 ರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರಕ್ಕಾಗಿ, ಟ್ರೈಲರ್‌ಗೆ ಕ್ರಿಯೇಟಿವ್ ಕಾಮೆಂಟ್ ಹಾಕಿದ ಪ್ರೇಕ್ಷಕರಿಗೆ ಪ್ರಥಮ್ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

PREV
16
ಫಸ್ಟ್​ ನೈಸ್ ವಿತ್​ ದೆವ್ವ

Bigg Boss Winner, ಒಳ್ಳೆ ಹುಡುಗ ಪ್ರಥಮ್​ ಅವರ ಫಸ್ಟ್​ ನೈಸ್ ವಿತ್​ ದೆವ್ವ (First Night With Devva) ಸಿನಿಮಾ ಬರುವ ಏಪ್ರಿಲ್ 3ರಂದು ಬಿಡುಗಡೆಯಾಗಲಿರುವುದಾಗಿ ಘೋಷಿಸಲಾಗಿದೆ. ಸದ್ಯ ಈ ಚಿತ್ರದ ಟ್ರೈಲರ್​ ಅನ್ನು ಹಿರಿಯ ನಟ ಶ್ರೀನಿವಾಸಮೂರ್ತಿ ಬಿಡುಗಡೆ ಮಾಡಿದ್ದಾರೆ.

26
ವಿಭಿನ್ನ ರೀತಿಯ ಪ್ರಮೋಷನ್​

ಟ್ರೈಲರ್​ ಬಿಡುಗಡೆಯಾದ ಬೆನ್ನಲ್ಲೇ ಪ್ರಥಮ್​, ಈ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ಪ್ರಮೋಟ್​ ಮಾಡಲು ತಯಾರಿ ನಡಿಸಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಲಕ್ಷ ರೂಪಾಯಿಗಳ ಬಂಪರ್​ ಆಫರ್​ ಅನ್ನು ಅವರು ಪ್ರೇಕ್ಷಕರಿಗೆ ನೀಡಿದ್ದಾರೆ.

36
ನಿಮಗೇ ಹಣ ಕೊಡುವೆ

ಪೇಡ್​ ಪ್ರಮೋಷನ್​ಗೆ 25 ಲಕ್ಷ ಬೇಕು ಎಂದರು. ಅದನ್ನು ನಾನ್ಯಾಕೆ ಕೊಡಲಿ, ಅದನ್ನು ವೀಕ್ಷಕರಿಗೆ ಕೊಡೋಣ ಎಂದುಕೊಂಡಿದ್ದೇನೆ ಎಂದು ವಿಡಿಯೋ ಮೂಲಕ ತಿಳಿಸಿರೋ ಪ್ರಥಮ್​ ನಿನ್ನೆ ಅಂದ್ರೆ ಮಾರ್ಚ್​ 25ರಂದು ಈ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಇದನ್ನು ನೋಡಿ ಕಮೆಂಟ್ಸ್​ ಹಾಕಿ ಎನ್ನುವ ಮೂಲಕ ಆಫರ್​ ತಿಳಿಸಿದ್ದಾರೆ.

46
ಕ್ರಿಯೇಟಿವ್​ ಕಮೆಂಟ್ಸ್​

ಯೂನಿಕ್​ ಆಗಿ, ಸಕತ್​ ಕ್ರಿಯೇಟಿವ್​ ಆಗಿ ಕಮೆಂಟ್ಸ್​ ಹಾಕಬೇಕು. ಅದನ್ನು ನಿಮ್ಮ ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಹಾಕಿರಬೇಕು. ನೂರು ಜನ ಅದನ್ನು ನೋಡಿರುವ ಸ್ಕ್ರೀನ್​ಶಾಟ್​ ಅನ್ನು ನನಗೆ ಇನ್​ಬಾಕ್ಸ್​ ಮಾಡಿ. ಪ್ರತಿಯೊಬ್ಬರಿಗೂ 25 ಸಾವಿರ ರೂಪಾಯಿ ಕೊಡುತ್ತಿದ್ದೇನೆ. ಟೋಟಲ್​ ಐದು ಲಕ್ಷ ರೂಪಾಯಿ ದುಡ್ಡು. ನಿಮ್ಮಿಂದ ಪಡೆದುಕೊಂಡ ದುಡ್ಡು, ನಿಮಗೇ ಕೊಡುತ್ತಿದ್ದೇನೆ ಎಂದಿದ್ದಾರೆ ಪ್ರಥಮ್​.

56
ಅನ್ನ ತಿಂದಿದ್ದೀನಿ

ನಿಮ್ಮಿಂದ ಅನ್ನ ತಿಂದಿದ್ದೀನಿ, ಋಣ ಹೀಗೆ ತೀರಿಸುತ್ತೇನೆ ಎಂದಿದ್ದಾರೆ ಪ್ರಥಮ್​. ಈಗ ಎಷ್ಟು ಮಂದಿ, ಯಾರ್ಯಾರು ಈ ಹಣ ಪಡೆಯುತ್ತಾರೆ ಎನ್ನುವುದನ್ನು ನೋಡಬೇಕಿದೆ.

66
ಏನಿದು ಸ್ಟೋರಿ?

ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ, ಇದಕ್ಕೆ ಪ್ರಥಮ್‌ ಅವರದ್ದೇ ಕಥೆ, ಚಿತ್ರಕಥೆ. ಪಿ. ವಿ. ಆರ್. ಸ್ವಾಮಿ ಗೂಗಾರೆದೊಡ್ಡಿ ಅವರು ನಿರ್ದೇಶನ ಮಾಡಿದ್ದಾರೆ. "ನಮ್ಮ ʻಫಸ್ಟ್ ನೈಟ್ ವಿತ್ ದೆವ್ವʼ ಚಿತ್ರದ ಡಬ್ಬಿಂಗ್, ಸ್ಯಾಟಲೈಟ್ ರೈಟ್ಸ್ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ, ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಹಾರರ್ ಕಾಮಿಡಿ ಚಿತ್ರ ಇದು" ಎಂದು ಇದಾಗಲೇ ನಟ ತಿಳಿಸಿದ್ದಾರೆ. ಸಿನಿಮಾ ಸ್ಟೋರಿ ಏನಂದ್ರೆ, ನಾಯಕನಿಗೆ ಮದುವೆ ಆಗುತ್ತದೆ. ಆದರೆ ಆಮೇಲೆ ಅವಳು ದೆವ್ವ ಎನ್ನೋದು ಗೊತ್ತಾಗುತ್ತದೆ. ನಂತರ ಅವನ ಫಸ್ಟ್ ನೈಟ್ ಆಗುತ್ತಾ ಇಲ್ವಾ ಎನ್ನುವುದೇ ಕುತೂಹಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories