ರಾತ್ರಿಯಲ್ಲಾ ಕಾರಿನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ವಿ: ಕೊನೆಗೂ ಲವ್‌ ಸ್ಟೋರಿ ಬಿಚ್ಚಿಟ್ಟ ವಿನಾಯಕ್ ಜೋಶಿ

Published : Feb 14, 2024, 07:31 PM IST

25 ವರ್ಷಗಳ ನಂತರ ಭೇಟಿ ಮಾಡಿ ಪ್ರೀತಿಯಲ್ಲಿ ಬಿದ್ದ ವಿನಾಯಕ್ ಜೋಶಿ. ಕ್ಯೂಟ್‌ ಜೋಡಿ ಎನ್ನುವ ನೆಟ್ಟಿಗರಿಗೆ ಬಿಚ್ಚಿಟ್ಟ ಲವ್ ಸ್ಟೋರಿ...

PREV
16
ರಾತ್ರಿಯಲ್ಲಾ ಕಾರಿನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ವಿ: ಕೊನೆಗೂ ಲವ್‌ ಸ್ಟೋರಿ ಬಿಚ್ಚಿಟ್ಟ ವಿನಾಯಕ್ ಜೋಶಿ

ನಟ ವಿನಾಯಕ್ ಜೋಶಿ ಮತ್ತು ಬ್ಯಾಡ್ಮಿಂಟನ್ ಪ್ಲೇಯರ್‌ ವರ್ಷ ಬೆಳವಾಡಿ ಬಾಲ್ಯದಿಂದಲೂ ಸ್ನೇಹಿತರು. ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರೂ ಒಬ್ಬರನ್ನೊಬ್ಬರು ಭೇಟಿ ಮಾಡಿರಲಿಲ್ಲ ಮಾತನಾಡಿಸಿರಲಿಲ್ಲ ಆದರೆ 25 ವರ್ಷಗಳ ನಂತರ ಆದ ಭೇಟಿ ಅವರ ಪ್ರೀತಿ ಹರಳಿಸಿತ್ತು. 

26

'ಮಕ್ಕಳಾಗಿ ಒಟ್ಟಿಗೆ ಆಟವಾಡಿದ ನಂತರ ನಾವು ಮೊದಲು ಭೇಟಿ ಮಾಡಿದ್ದೇ 25 ವರ್ಷಗಳ ನಂತರ. ಕಾಮನ್‌ ಫ್ರೆಂಡ್‌ ಮೂಲಕ ಮತ್ತೆ ಸಂಪರ್ಕ ಬೆಳೆಯಿತ್ತು' ಎಂದು ವಿನಾಯಕ್ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

36

'ನನ್ನ ಹುಟ್ಟುಹಬ್ಬದ ದಿನ ವರ್ಷಾ ನನ್ನನ್ನು 25 ವರ್ಷಗಳ ನಂತರ ಭೇಟಿ ಮಾಡಿದ್ದು. 15 ದಿನಗಳಲ್ಲಿ ಅಕೆ ನನ್ನ ಸಂಗಾತಿ ಆಗಬೇಕು ಎಂದು ತೀರ್ಮಾನ ಮಾಡಿ ಕೇಳಿ ಬಿಟ್ಟೆ'

46

'ವಿನಾಯಕ್ ಮತ್ತು ನಾನು ಕಾರಿನಲ್ಲಿ ಕುಳಿತುಕೊಂಡು ಹೆಚ್ಚಿನ ಸಮಯ ಕಳೆದಿದ್ದೀವಿ. ಫ್ರೆಂಡ್‌ ಜೊತೆ ಲೂಡೋ ಗೇಮ್ ಆಡುತ್ತಿರುವ ಎಂದು ಪೋಷಕರಿಗೆ ಸುಳ್ಳು ಹೇಳಿರುವೆ ಆದರೆ ವಿನಾಯಕ್‌ ಜೊತೆಗಿರುತ್ತಿದೆ' ಎಂದು ವರ್ಷ ಹೇಳಿದ್ದಾರೆ.

56

'ನಾವಿಬ್ಬರು ಒಟ್ಟಿಗೆ ತುಂಬಾ ಪ್ರಯಾಣ ಮಾಡಿದ್ದೀವಿ. ಬೆಂಗಳೂರಿಗೆ ಬಂದ ಮೇಲೆ ಖುಷಿಯಾಗುತ್ತದೆ ಸೇಫ್‌ ಫೀಲ್ ಆಗುತ್ತದೆ' ಎಂದಿದ್ದಾರೆ.

66

ವಿನಾಯಕ್ ಜೋಶಿ ಮತ್ತು ವರ್ಷಾ ಬೆಳವಾಡಿ ಮೂಲತಃ ಬಸವನಗುಡಿ ನಿವಾಸಿಗಳಾಗಿದ್ದು. ಸೌತ್ ಬೆಂಗಳೂರಿನ ಆಹಾರ ಸಖತ್ ಎಂಜಾಯ್ ಮಾಡುತ್ತಾರಂತೆ. 

Read more Photos on
click me!

Recommended Stories