ಪ್ರೇಮಿಗಳ ದಿನದಂದು ಪತ್ನಿ ಜೊತೆಗಿನ ಹಳೆ ನೆನಪು ಮೆಲುಕು ಹಾಕಿದ ರಮೇಶ್ ಅರವಿಂದ್

First Published | Feb 14, 2024, 5:42 PM IST

ರಮೇಶ್ ಅರವಿಂದ್ ಪ್ರೇಮಿಗಳ ಈ ವಿಶೇಷ ದಿನದಂದು ತಮ್ಮ ಪ್ರೇಮಿ, ಪತ್ನಿ ಅರ್ಚನಾ ಜೊತೆಗಿನ ಸುಮಾರು 30 ವರ್ಷ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

ಅದ್ಭುತ ನಟನಾಗಿ, ನಿರ್ದೇಶಕನಾಗಿ ಮಾತುಗಾರರಾಗಿ ಕನ್ನಡಿಗರ ಮನೆ ಮನಗಳಲ್ಲಿ ಹಲವು ವರ್ಷಗಳಿಂದ ನೆಲೆಯೂರಿರುವ ಎವರ್ ಗ್ರೀನ್ ನಟ ರಮೇಶ್ ಅರವಿಂದ್, ಇಂದು ಪ್ರೇಮಿಗಳ ದಿನದಂದು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. 

ಹೌದು ನಟ ರಮೇಶ್ ಅವರು ಪ್ರೇಮಿಗಳ ಈ ವಿಶೇಷ ದಿನದಂದು (valentines day) ತಮ್ಮ ಪ್ರೇಮಿ, ಪತ್ನಿ ಅರ್ಚನಾ ಜೊತೆಗಿನ ಸುಮಾರು 30 ವರ್ಷ ಹಳೆಯ ಫೋಟೊಗಳನ್ನು ಶೇರ್ ಮಾಡಿದ್ದು, ನನ್ನ ಅತೊದೊಡ್ಡ ಶಕ್ತಿ, ಬೆಸ್ಟ್ ಫ್ರೆಂಡ್ ಇಬ್ಬರೂ ಒಬ್ಬರೇ ಎಂದು ಬರೆದುಕೊಂಡಿದ್ದಾರೆ. 

Tap to resize

ನಟ ರಮೇಶ್ ಅವರು ಪ್ರೀತಿಸಿ ಮದುವೆಯಾದವರು. ಅವರು ತಮ್ಮ ಲವ್ ಸ್ಟೋರಿ (love story) ಬಗ್ಗೆ ಹಲವಾರು ಬಾರಿ, ಹಲವಾರು ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ನನ್ನ ಮೊದಲ ಪ್ರೀತಿಯೇ ನನ್ನ ಜೀವನದ ಬೆಸ್ಟ್ ಫ್ರೆಂಡ್ ಎಂದು ಕೂಡ ತಮ್ಮ ಪತ್ನಿಗೆ ಮಹತ್ವದ ಸ್ಥಾನ ನೀಡಿದ್ದಾರೆ. 

ರಮೇಶ್ ಮತ್ತು ಅರ್ಚನಾ ಅವರ ಲವ್ ಸ್ಟೋರಿ ಆರಂಭವಾದುದ್ದು ರಮೇಶ್ ಸಿನಿಮಾ ರಂಗಕ್ಕೆ ಬರುವ ಮುನ್ನ.  ಸ್ಟಾರ್ ಆಗುವ ಮುಂಚೆ ಅರ್ಚನಾಳನ್ನು ಕಾಲೇಜಿನಲ್ಲಿ ರಮೇಶ್ ಭೇಟಿ ಮಾಡಿದ್ದರು. ಇವರಿಬ್ಬರು ಬಿಎಂಎಸ್ ಕಾಲೇಜಿನಲ್ಲಿ ನಡೆದ ಇಂಟರ್ ಕಾಲೇಜು ಫೆಸ್ಟ್ ಒಂದರಲ್ಲಿ ಭೇಟಿಯಾಗಿದ್ದರು.

ಅರ್ಚನಾ ಮೂಲತಃ ಉತ್ತರ ಭಾರತದವರು. ಆದರೆ ಇವರ ಪ್ರೀತಿಗೆ ಅವರ ಪ್ರದೇಶ, ಭಾಷೆ ಸಿನಿಮಾ ಯಾವುದೂ ಪ್ರಭಾವ ಬೀರಲಿಲ್ಲ. ಒಬ್ಬರನ್ನೊಬ್ಬರು ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು 1991 ಜುಲೈ 7ರಂದು ಮದುವೆಯಾಗಿದ್ದರು ಈ ಜೋಡಿ. 

ಜೀವನದ ಕಷ್ಟ ಸುಖದಲ್ಲೂ ಪತ್ನಿ ಅರ್ಚನಾ ತನ್ನ ಜೊತೆ ಇದ್ದುದನ್ನು ನೆನೆಯುವ ರಮೇಶ್, ಮೊದಲೆಲ್ಲಾ ಚಾಪೆ ಮೇಲೆ ಇಬ್ಬರೂ ನಿದ್ದೆ ಮಾಡುತ್ತಿದ್ದೆವು. ಅಂದಿನ ಕಷ್ಟದಿಂದ ಇಂದಿನ ಸಂತೋಷದ ಜೀವನದವರೆಗೂ ನನ್ನ ಜೊತೆ ಅರ್ಚನಾ ಸದಾ ಇದ್ದಾಳೆ, ಅವರೇ ನನ್ನ ಯಶಸ್ಸಿನ ಮೂಲ ಎಂದು ರಮೇಶ್ ಹೇಳುತ್ತಾರೆ. 

ಇಂದಿಗೂ ರಮೇಶ್ ಅರವಿಂದ್ ಮತ್ತು ಅರ್ಚನಾ ಜೋಡಿ ಸ್ಯಾಂಡಲ್ ವುಡ್ ನ ಬೆಸ್ಟ್ ಜೋಡಿಗಳಲ್ಲಿ(best sandalwod couple) ಒಬ್ಬರು ಎಂದರೆ ತಪ್ಪಾಗಲ್ಲ. ಪ್ರೀತಿ ಯಾವತ್ತೂ ಕಡಿಮೆ ಆಗೋದಿಕ್ಕೆ ಸಾಧ್ಯ ಇಲ್ಲ. ಪ್ರೀತಿಸಿದ ಹುಡುಗಿ ಜೊತೆ ಇದ್ದರೆ ಜಗವನ್ನೇ ಗೆಲ್ಲಬಹುದು ಎಂದು ತೋರಿಸಿದ ಜೋಡಿ ಇವರು. 

Latest Videos

click me!