ನಶೆ ಏರಿಸುವಂತಿರೋ ನಿಶಾ ಯೋಗೇಶ್ವರ್ ಕಾಂಗ್ರೆಸ್ ಕೈ ಹಿಡಿಯುತ್ತಾರಾ?

First Published Mar 19, 2024, 12:11 PM IST

ಬೆಂಗಳೂರು ಗ್ರಾಮಾಂತರದಲ್ಲಿ ಯೋಗೇಶ್ವರ್ ಪ್ರಭಾವಿ ರಾಜಕಾರಣಿ. ಒಂದು ಕಡೆ ಡಿ.ಕೆ.ಶಿವಕುಮಾರ್ ಕುಟುಂಬ ಮತ್ತೊಂದೆಡೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನೇ ಎದುರಿಸಿದವರು. ಆದರೆ, ಕೆಲ ಸಿನಿಮಾಗಳಲ್ಲಿ ನಟಿಸಿರುವ ಯೋಗೇಶ್ವರ್ ಮಗಳು ಕಾಂಗ್ರೆಸ್ ಸೇರ್ತಾರೆ ಎಂಬ ಸುದ್ದಿ ಹರಡುತ್ತಿದೆ.  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ಮಂಜುನಾಥ್ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಸ್ಪರ್ಧಿಸುತ್ತಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಪ್ರಭಾವಿ ನಾಯಕ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿದ್ದು, ಅಪ್ಪನಿಗೆ ಮಗಳು ಠಕ್ಕರ್ ಕೊಡಲು ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ನಿಶಾ ಬಗ್ಗೆ ಒಂದು ಮಾಹಿತಿ ಇಲ್ಲಿದೆ. 

ಕಳೆದ ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದ ನಿಶಾ ಅವರು ದರ್ಶನ್ ಜೊತೆ ನಟಿಸಬೇಕಾಗಿತ್ತು. ಆದರೆ, ಚಿತ್ರದ ಮುಹೂರ್ತದ ನಂತರ ಇವರ ಜಾಗಕ್ಕೆ ಬೇರೊಬ್ಬ ನಟಿ ಬಂದಿದ್ದರಿಂದ, ಮುಂಬಯಿಗೆ ಮರಳಿದರು. 

ಕಳೆದ ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದ ನಿಶಾ ಅವರು ದರ್ಶನ್ ಜೊತೆ ನಟಿಸಬೇಕಾಗಿತ್ತು. ಆದರೆ, ಚಿತ್ರದ ಮುಹೂರ್ತದ ನಂತರ ಇವರ ಜಾಗಕ್ಕೆ ಬೇರೊಬ್ಬ ನಟಿ ಬಂದಿದ್ದರಿಂದ, ಮುಂಬಯಿಗೆ ಮರಳಿದರು. 

ಕನ್ನಡ ಚಿತ್ರರಂಗದಲ್ಲಿಯೂ ಇವರಿಗೆ ಸಾಕಷ್ಟು ಆಫರ್ಸ್ ಬಂದಿದ್ದರೂ, ಯಾವುದೂ ಅವರಿಗೆ ಮನಸ್ಸಿಗೆ ಹಿಡಿಸದ ಕಾರಣ ಬಾಲಿವುಡ್‌ನಲ್ಲಿ ನೆಲೆಯೂರಲು ತವಕಿಸಿದ್ದರು. ಆದರೆ, ಹಿಂದಿ ಚಿತ್ರರಂಗವೂ ಇವರ ಕೈ ಹಿಡಿಯಲಿಲ್ಲ. 

ನಿಶಾ ಅಮೆರಿಕದಲ್ಲಿ statistics and businessನಲ್ಲಿ ಪದವಿ ಪಡೆದಿದ್ದು, ಇವರು ಮೊದಲ ಸಿನಿಮಾ ಅಂಬರೀಶಾ. ಆದರೆ, ಚಿತ್ರರಂಗದಲ್ಲಿ ಹೇಳುವಂಥ ಹೆಸರು ಮಾಡುವಲ್ಲಿ ವಿಫಲರಾದರು. 

ರಂಗ ತರಬೇತಿ ಜೊತೆ, ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ ನಿಶಾ. ಸೌಂದರ್ಯದ ಜೊತೆ, ನಟನೆ ಗೊತ್ತಿದ್ದರೂ ಚಿತ್ರರಂಗದಲ್ಲಿ ಅಂದುಕೊಂಡತೆ ನೆಲೆ ಕಾಣುವಲ್ಲಿ ಇವರು ವಿಫಲರಾದರು. 

ರಂಗ ತರಬೇತಿ ಜೊತೆ, ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ ನಿಶಾ. ಸೌಂದರ್ಯದ ಜೊತೆ, ನಟನೆ ಗೊತ್ತಿದ್ದರೂ ಚಿತ್ರರಂಗದಲ್ಲಿ ಅಂದುಕೊಂಡತೆ ನೆಲೆ ಕಾಣುವಲ್ಲಿ ಇವರು ವಿಫಲರಾದರು. 

ಸಿ ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಬಾಡಿಗೆ ಕಟ್ಟದೇ, ಕಂದಾಯ ಪಾವತಿಸದೇ ಸಂಕಷ್ಟಕ್ಕೆ ಸಿಲುಕಿದ್ದು ಕೆಲವು ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಮದ್ದೂರು TAPCMSಗೆ ಸೇರಿದ ಗೋದಾಮನ್ನು 2017ರಲ್ಲಿ ನಿಶಾ ಬಾಡಿಗೆ ಪಡೆದಿದ್ದರು. ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಎಂಬ ಬ್ಯುಸಿನೆಸ್ ಆರಂಭಿಸಿದ್ದರು. 2018ರಿಂದ ಬಾಡಿಗೆ ಕಟ್ಟಿಲ್ಲ. ಕಂದಾಯ ಪಾವತಿಸಿಲ್ಲ. ಒಟ್ಟು 42,47 ಲಕ್ಷ ರೂ ಬಾಡಿಗೆ, 1.9 ಲಕ್ಷ ನೆಲ ಬಾಡಿಗೆ ಬಾಕಿ ಉಳಿಸಿಕೊಂಡಿದ್ದರು. ಈಗ TAPCMS (ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ) ನಿಶಾ ಯೋಗೇಶ್ವರ್ ವಿರುದ್ಧ ಕಾನೂನು ಹೋರಾಟ ನಡೆಸಲು ಮುಂದಾಗಿತ್ತು. 

ಒಟ್ಟಿನಲ್ಲಿ ಅಪ್ಪನ ಮುದ್ದಿನ ಮಗಳಾದ ನಿಶಾ, ಈಗ್ಯಾಕೆ ಕಾಂಗ್ರೆಸ್ ಸೇರುತ್ತಾರೆಂಬ ಗೊಂದಲ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಇದೆ. 

ಇದು ಕೇವಲ ಗಾಳಿ ಸುದ್ದಿಯೋ, ನಿಜವಾಗಲೂ ಹಲವು ವೈಯಕ್ತಿಕ ಕಾರಣಗಳಿಂದ ತಂದೆ, ರಾಜಕಾರಣಿ, ನಟ ಯೋಗೇಶ್ವರ್ ಮಗಳ ಮುಂದಿನ ರಾಜಕೀಯ ನಡೆ ಬಗ್ಗೆ ಹಲವು ಊಹಾಪೋಹಗಳು ಎದ್ದಿವೆ. 

click me!