ಸ್ಟೈಲ್‌ ಆಗಿ ಕೂಲಿಂಗ್‌ ಗ್ಲಾಸ್‌ ಹಾಕೊಂಡು ನಾನು ಹಳ್ಳಿ ಹುಡುಗಿಯೆಂದ ಸಪ್ತಮಿ: ಓಹ್ ಹೆಣ್ಮಗು ಹೆಣ್ಮಗು ಎಂದ ಫ್ಯಾನ್ಸ್‌!

Published : Mar 18, 2024, 09:28 AM IST

ಕಾಂತಾರ ಸುಂದರಿ ನಟಿ ಸಪ್ತಮಿ ಗೌಡ ಇತ್ತೀಚೆಗೆ ಹಳ್ಳಿಯ ಪ್ರದೇಶದಲ್ಲಿ ನಿಂತು ಮುದ್ದಾಗಿ ಪೋಟೋಶೂಟ್‌ ಮಾಡಿಸಿದ್ದಾರೆ. ಹಳ್ಳಿಯ ಸುತ್ತಾ ಓಡಾಡುತ್ತಾ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
19
ಸ್ಟೈಲ್‌ ಆಗಿ ಕೂಲಿಂಗ್‌ ಗ್ಲಾಸ್‌ ಹಾಕೊಂಡು ನಾನು ಹಳ್ಳಿ ಹುಡುಗಿಯೆಂದ ಸಪ್ತಮಿ: ಓಹ್ ಹೆಣ್ಮಗು ಹೆಣ್ಮಗು ಎಂದ ಫ್ಯಾನ್ಸ್‌!

ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಕೆಲವು ದಿನಗಳ ಹಿಂದೆ ಹಳ್ಳಿ ಕಡೆಗೆ ಪಯಣ ಬೆಳೆಸಿ ಅಲ್ಲಿ ತಮ್ಮ ಸಮಯ ಕಳೆಯುವುದರ ಜೊತೆಗೆ ಕ್ಯೂಟ್‌ ಫೋಟೋಶೂಟ್‌ ಮಾಡಿಸಿದ್ದಾರೆ.

29

ಕಾಂತಾರಾ ಸುಂದರಿ ಸಪ್ತಮಿ ಗೌಡ ಪಿಂಕ್‌ ಕಲರ್‌ ಪ್ರಿಂಟೆಡ್‌ ಸಲ್ವಾರ್ ಧರಿಸಿವುದರ ಜೊತೆಗೆ ಬ್ಲಾಕ್‌ ಮಟೆಲ್‌ ಜುಂಕಿ ಹಾಗೂ ಬಳೆಗಳನ್ನು ಹಾಕಿಕೊಂಡು ಅಂದವಾಗಿ ಕಾಣಿಸಿಕೊಂಡಿದ್ದಾರೆ.

39

ನಟಿ ಸಪ್ತಮಿ ಗೌಡ ಹಾಗೆಯೇ ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಫ್ರೀ ಹೇರ್‌ ವಿತ್‌ ನ್ಯೂಡ್‌ ಮೇಕಪ್‌ನಲ್ಲಿ ಸುಂದರವಾಗಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.  

49

ಮೂಗುತ್ತಿ ಚೆಲುವೆ ಸಪ್ತಮಿ ಗೌಡ ಹಳ್ಳಿಯ ಮನೆಯಲ್ಲಿಯೂ ಫೋಟೊಶೂಟ್‌  ಮಾಡಿಸುತ್ತಾ, ಊರೆಲ್ಲಾ ತಿರುಗುತ್ತಾ ಸಖತ್‌ ಎಂಜಾಯ್‌ ಮಾಡಿದ್ದಾರೆ. ಸೂರ್ಯ ಕಿರಣದ ಜೊತೆ ನಲಿಯುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ.

59

ಚಂದನವನದ ಬೆಡಗಿ ಸಪ್ತಮಿ ಗೌಡ ಈ ಫೋಟೋಗಳನ್ನು ಪೋಸ್ಟ್‌ ಮಾಡುವಾಗ ಕ್ಯಾಪ್ಶನ್‌ನಲ್ಲಿ ʻಹಳ್ಳಿ ಹುಡುಗಿʼ ಎಂದು ಬರೆದುಕೊಂಡಿದ್ದಾರೆ. ಮಗಳ ಮುದ್ದಾದ ಪೋಸ್​ಗಳಿಗೆ ಅಮ್ಮ ಕ್ಯಾಮೆರಾ ಕ್ಲಿಕ್ ಮಾಡಿದ್ದಾರೆ.

69

ಸಪ್ತಮಿ ಗೌಡ ಹಳ್ಳಿಯಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದು, ಸದ್ಯ ಈ ಫೋಟೋಗಳು ಸಖತ್ ವೈರಲ್‌ ಆಗುತ್ತಿವೆ.

79

ಕನ್ನಡ ನಟಿ ಸಪ್ತಮಿ ಗೌಡ ಫೋಟೋಗಳಿಗೆ ಸಾವಿರಾರು ಲೈಕ್ಸ್‌ ಹಾಗೂ ಕಮೆಂಟ್‌ಗಳ ನದಿಯೇ ಹರಿದಿದೆ. ಇನ್ನಷ್ಟು ನೆಟ್ಟಿರು ಎಮೋಜಿಗಳನ್ನು ನೀಡಿದ್ದಾರೆ.

89

ಸಪ್ತಮಿ ಗೌಡ ಫೋಟೋಸ್ ನೋಡಿದ ನೆಟ್ಟಿಗರು, ಓಹ್ ಹೆಣ್ಮಗು ಹೆಣ್ಮಗು, ಯಾವ ಹಳ್ಳಿ ಬಂಗಾರ ನಿಂದು ಎಂದು ಕೇಳಿದರೇ ಮತ್ತೊಬ್ಬರು ನಿಮ್ದು ತೋಟ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.

99

ಇನೊಬ್ಬ ಅಭಿಮಾನಿ ತಿಡಿಕೊ ಹಳ್ಳಿಯ ಹುಡುಗಿ ನಿನ್ನ ಕಣ್ಣಿನ ಕಾಡಿಗೆ ತುಸು ಹೆಚ್ಚಾದರೇನೂ ಪರವಾಗಿಲ್ಲ, ದೃಷ್ಟಿ ಬಿಳುತಾವ ನೋಡ ಹುಡುಗಿ ನಿನ್ನಂದಕೆ ಸರಿ ಸಾಟಿ ಯಾರು ಇಲ್ಲವೆಂದು ತರೇಹವಾರಿ ಹೊಗಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories