ನಟ ದರ್ಶನ್ ತೂಗುದೀಪ್ (Darshan Thugudeepa) ಪತ್ನಿ ವಿಜಯಲಕ್ಷ್ಮಿ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸುದಿದ್ಯಲ್ಲಿರುವಂತಹ ವ್ಯಕ್ತಿ. ದರ್ಶನ್ ವಿಚಾರಕ್ಕೆ ಆಗಿರಬಹುದು, ತಮ್ಮ ಲೈಫ್ ಸ್ಟೈಲ್ ವಿಷಯಕ್ಕೂ ಚರ್ಚೆಯಲ್ಲಿರುತ್ತಾರೆ ವಿಜಿ.
27
ವಿಜಯಲಕ್ಷ್ಮೀ ದರ್ಶನ್ (Vijayalakshmi Darshan) ಲೈಫ್ ಸ್ಟೈಲ್ ತುಂಬಾನೆ ದುಬಾರಿ ಅಂತಾನೇ ಹೇಳಬಹುದು. ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕುವಂತಹ ಫೋಟೊಗಳನ್ನು ನೋಡಿದ್ರೆ ಗೊತ್ತಾಗುತ್ತೆ.
37
ವಿಜಯಲಕ್ಷ್ಮೀ ಧರಿಸುವ ಡ್ರೆಸ್ ಇರಬಹುದು, ಹಾಗೆಯೇ ಅವರ ಕೈಯಲ್ಲಿ ಇರುವಂತಹ ಪುಟ್ಟಾ ಪುಟ್ಟ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್ ಆಗಿರಬಹುದು ಎಲ್ಲವೂ ಬಲು ದುಬಾರಿ. ಅದರ ಬೆಲೆ ಕೇಳಿದ್ರೇನೆ ಜನ ಇಷ್ಟೊಂದಾ ಎಂದು ಹುಬ್ಬೇರಿಸೋದು ಖಚಿತಾ.
ವಿಜಯಲಕ್ಷ್ಮೀ ಅವರ ಫ್ಯಾಷನ್ (fashion) ಸೆನ್ಸ್ ತುಂಬಾನೆ ಚೆನ್ನಾಗಿದೆ. ಅವರು ಧರಿಸುವ ಡ್ರೆಸ್ ಗೆ ಮ್ಯಾಚ್ ಆಗುವ ರೀತಿಯ ಪರ್ಸನ್ನೇ ಸದಾ ಹಿಡಿದುಕೊಳ್ಳುತ್ತಾರೆ. ಆ ಬ್ಯಾಗ್ ಏನೂ ಕಡಿಮೆ ಬೆಲೆಯದ್ದಲ್ಲ ಲಕ್ಷದಲ್ಲಿರುತ್ತೆ.
57
ಇದೀಗ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಒಂದಷ್ಟು ಫೋಟೊಗಳನ್ನು ಅದರಲ್ಲಿ ವಿಜಯಲಕ್ಷ್ಮಿ ಆಫ್ ವೈಟ್, ಪ್ಲೋರಲ್ ವರ್ಕ್ ಇರುವಂತಹ ಲಾಂಗ್ ಕುರ್ತಾ ಧರಿಸಿದ್ದು, ಅದರ ಜೊತೆ ಪುಟ್ಟ ಪರ್ಸ್ ಒಂದನ್ನು ಹಿಡಿದಿದ್ದಾರೆ.
67
ವಿಜಯಲಕ್ಷ್ಮಿ ಧರಿಸಿರುವ ಈ ಆಫ್ ವೈಟ್ ಕುರ್ತಾ ರಿತುಕುಮಾರ್ ಅವರ ಡಿಸೈನರ್ ವೇರ್ ಆಗಿದ್ದು, ಈ ಲಾಂಗ್ ಕುರ್ತಾ ಬೆಲೆ ಬರೋಬ್ಬರಿ 28 ಸಾವಿರ ಆಗಿದೆ. ಇದರ ಜೊತೆ ವಿಜಯಲಕ್ಷ್ಮೀ ವೈಟ್ ಸ್ನೀಕರ್ಸ್ ಧರಿಸಿ ಸಖತ್ ಟ್ರೆಂಡಿಯಾಗಿ ಕಾಣಿಸ್ತಿದ್ದಾರೆ.
77
ವಿಜಯಲಕ್ಷ್ಮೀ ತಮ್ಮ ಡ್ರೆಸ್ ಗೆ ಮ್ಯಾಚ್ ಮಾಡಿ ಪಿಂಕ್ ಬಣ್ಣದ ಪರ್ಸ್ ಒಂದನ್ನು ಹಿಡಿದಿದ್ದು, ಇದು ಚ್ಯಾನೆಲ್ ಸಿಸಿ ಯ ಹ್ಯಾಂಡ್ ಬ್ಯಾಗ್ ಆಗಿದ್ದು, ಇದರ ಬೆಲೆ 7,689 $ ಆಗಿದೆ, ಭಾರತೀಯ ಮೌಲ್ಯ ಬರೋಬ್ಬರಿ 6,57,195 ರೂಪಾಯಿ ಆಗಿದೆ. ಈವಾಗ ಹೇಳಿ ದರ್ಶನ್ ಪತ್ನಿ ಲೈಫ್ ಸ್ಟೈಲ್ ಬಲು ದುಬಾರಿ ಅಲ್ವಾ?