ಮಡೆನೂರು ಮನುಗೆ ಕಿರುತೆರೆ, ಹಿರಿತೆರೆಯಿಂದ ಅಸಹಕಾರ- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

Published : May 27, 2025, 06:28 PM IST

ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಮಡೆನೂರು ಮನು ಮಾತನಾಡಿರುವುದು ಎನ್ನಲಾದ ವೈರಲ್ ಆಡಿಯೋ ಈಗ ಇನ್ನೊಂದು ಸಂಕಷ್ಟ ತಂದಿದೆ. ಮಡೆನೂರು ಮನು ಅವರು ಸ್ಟಾರ್ ನಟರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

PREV
16

ಸ್ಟಾರ್ ನಟರ ಅಭಿಮಾನಿಗಳಿಂದ ಫಿಲ್ಮ್ ಚೇಂಬರ್‌ನಿಂದ ದೂರು ಬಂದ ಹಿನ್ನೆಲೆ, ಫಿಲ್ಮ್ ಚೇಂಬರನಲ್ಲಿ ಸಭೆ ಕರೆಯಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆದಿದೆ. ಮಡೆನೂರು ಮನುರನ್ನ ಬ್ಯಾನ್ ಮಾಡಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ. ಕಿರುತೆರೆ ಹಾಗು ಸಿನಿಮಾದಿಂದ ಬ್ಯಾನ್ ಮಾಡಬೇಕು ಅಂತ ದೂರು ನೀಡಲಾಗಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಈ ಬಗ್ಗೆ ಮಾತಾಡಿದ್ದಾರೆ.

26

ಎಲ್ಲಾ ಸಂಸ್ಥೆಗಳನ್ನೂ ಕರೆದು ಸಭೆ ಮಾಡಿದ್ದೇವೆ. ಮನು ಅವರು ದುರಹಂಕಾರಿ ಮಾತನ್ನು ಆಡಿದ್ದಾರೆ. ಮನು ಅವರಿಗೆ ಅಸಹಕಾರ ತೋರಿಸಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

46

ಕಿರುತೆರೆ ಹಿರಿತೆರೆಯಿಂದ ಅಸಹಕಾರ ಕೊಡಲಾಗಿದೆ. ಕಾನೂನುನಲ್ಲಿ ಸಮಸ್ಯೆ ಬಗೆ ಹರಿಸಿಕೊಂಡು ಬಂದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. 

56

“ಕಿರುತೆರೆ ಹಾಗು ಸಿನಿಮಾದಿಂದ ಬ್ಯಾನ್ ಮಾಡಬೇಕು ಅಂತ ದೂರು ನೀಡಲಾಗಿದೆ. ಇಂದಿನಿಂದ ಕಿರುತೆರೆ- ಬೆಳ್ಳಿತೆರೆಯಿಂದ ಸಂಪೂರ್ಣ ಅಸಹಕಾರ ಕೊಡಲಾಗುವುದು. ಮಡೆನೂರು ಮನುಗೆ ಅನಿರ್ಧಿಷ್ಟಾವಧಿ ಅಸಹಕಾರ ಕೊಡಲಾಗುವುದು. ಮಡೆನೂರು ಮನು ವಿರುದ್ಧ ವಾಣಿಜ್ಯ ಮಂಡಳಿಯಿಂದಲೇ ಕೇಸ್ ದಾಖಲಿಸುತ್ತೇವೆ” ಎಂದು ಹೇಳಿದ್ದಾರೆ.

66

ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿದ್ದ ಸಹನಟಿ ಮೇಲೆ ಅ*ತ್ಯಾಚಾರ ಮಾಡಿದ್ದಾರೆ ಎಂದು ಮನು ವಿರುದ್ಧ ದೂರು ದಾಖಲಾಗಿದೆ. ಸದ್ಯ ಮನು ಜೈಲಿನಲ್ಲಿದ್ದಾರೆ. 

Read more Photos on
click me!

Recommended Stories