ಜೊತೆಯಾಗಿ ಕಾಣಿಸಿಕೊಂಡ Supranational ಬೆಡಗಿಯರು.. ರಿವೀಲ್ ಮಾಡಿದ್ರು ಬೆಸ್ಟ್ ಫ್ರೆಂಡ್ಸ್ ಸೀಕ್ರೆಟ್

Published : May 15, 2026, 01:52 PM IST

Friendship Goal: ಚಂದನವನದ ಬೆಡಗಿಯರು ಹಾಗೂ ಮಾಜಿ ಸುಪ್ರನ್ಯಾಷನಲ್ ವಿಜೇತರಾಗಿರುವ ಶ್ರೀನಿಧಿ ಶೆಟ್ಟಿ ಮತ್ತು ಆಶಾ ಭಟ್ ಇಬ್ಬರೂ ಅಚಾನಕ್ ಆಗಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಏನೆಲ್ಲಾ ಕಾಕತಾಳೀಯ ಘಟನೆ ನಡೆಯಿತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. 

PREV
16
ಜೊತೆಯಾಗಿ ಕಾಣಿಸಿಕೊಂಡ ಮಾಜಿ Supranational ಬೆಡಗಿಯರು

ಚಂದನವನದ ನಟಿಯರು ಹಾಗೂ ಮಾಜಿ ಸುಪ್ರನ್ಯಾಷನಲ್ ವಿಜೇತರಾಗಿರುವ ಶ್ರೀನಿಧಿ ಶೆಟ್ಟಿ ಮತ್ತು ಆಶಾ ಭಟ್ ಬೆಸ್ಟ್ ಫ್ರೆಂಡ್ಸ್ ಕೂಡ ಹೌದು. ಇದೀಗ ಇಬ್ಬರು ಅಚಾನಕ್ ಆಗಿ ಜೊತೆಯಾಗಿದ್ದು, ಒಬ್ಬರಿಗೊಬ್ಬರು ಹೇಳಿಕೊಳ್ಳದೇ ಇದ್ದರೂ ತೊಟ್ಟಿರುವ ಬಟ್ಟೆಯಿಂದ ತಲುಪುವ ಡೆಸ್ಟಿನೇಶನ್ ವರೆಗೂ ಎಲ್ಲವೂ ಒಂದೇ ರೀತಿಯಾಗಿ ಇಬ್ರು ರೆಡಿಯಾಗಿದ್ದು, ಇಬ್ಬರಿಗೂ ಅಚ್ಚರಿ ತಂದಿದೆ, ಇದೇ ಬೆಸ್ಟ್ ಫ್ರೆಂಡ್ಸ್ ಗೋಲ್ ಎಂದು ಹೇಳಿಕೊಂಡಿದ್ದಾರೆ ಬೆಡಗಿಯರು.

26
ಫೋಟೊ ಹಂಚಿಕೊಂಡ ಆಶಾ ಭಟ್

ನಟಿ ಆಶಾ ಭಟ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶ್ರೀನಿಧಿ ಶೆಟ್ಟಿ ಜೊತೆಗಿನ ಒಂದಷ್ಟು ಫೋಟೊಗಳನ್ನು ಹಂಚಿಕೊಂಡು, ಯಾವ ರೀತಿ ಇಬ್ಬರು ಅಚಾನಕ್ ಆಗಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು, ಭೇಟಿಯಾದಗಿನಿಂದ ಹಿಡಿದು, ಕಾರ್ಯಕ್ರಮ ಭಾಗಿಯಗುವವರೆಗೂ ಇಬ್ಬರ ಡ್ರೆಸ್ಸಿಂಗ್ ಒಂದೇ ರೀತಿಯಾಗಿರುವುದರ ಬಗ್ಗೆ ಹಂಚಿಕೊಂಡಿದ್ದಾರೆ.

36
ಆಶಾ ಭಟ್ ಹೇಳಿದ್ದೇನು?

ವಿಮಾನಕ್ಕೆ ಹೋಗುವ ಬಸ್ಸಿನಲ್ಲಿ ಅವಳನ್ನು ನೋಡಿ ಡಬಲ್ ಚೆಕ್ ಮಾಡಿದೆ. ಅದೇ ಡೆನಿಮ್ ಜಾಕೆಟ್, ಅದೇ ಮಾಸ್ಕ್, ಅದೇ ವಿಮಾನ, ಅದೇ ನಗರ.... ಯಾವುದನ್ನೂ ಪ್ಲ್ಯಾನ್ ಮಾಡಿರಲಿಲ್ಲ. ಪ್ರವಾಸದ ನಂತರದ ಕುರ್ತಾಗಳು ಸಹ ಒಂದೇ ರೀತಿಯಾಗಿದ್ದವು. ಇದು ಯೂನಿವರ್ಸ್ ನ ಚಮತ್ಕಾರ. ಬೆಸ್ಟ್ ಫ್ರೆಂಡ್ ಗಳು ಹೇಳದಿದ್ದರೂ ಸಿಂಕ್ ಆಗುತ್ತಾರೆ. ನಾವೆ ಅದಕ್ಕೆ ಉದಾಹರಣೆ ಎಂದು ಆಶಾ ಭಟ್ ಬರೆದುಕೊಂಡಿದ್ದಾರೆ.

46
ಶ್ರೀನಿಧಿ ಕೊಟ್ರು ಮುದ್ದಾದ ಉತ್ತರ

ಆಶಾ ಭಟ್ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಶ್ರೀನಿಧಿ ಮುದ್ದಾಗಿ ಉತ್ತರ ಕೊಟ್ಟಿದ್ದಾರೆ. ‘Just us & our essentials’ ಎಂದು ಕಾಮೆಂಟ್ ಮಾಡಿದ್ದಾರೆ. ಮಾಜಿ ಮಿಸ್ ಸುಪ್ರನ್ಯಾಷನಲ್ ವಿನ್ನರ್ ಗಳನ್ನು ಜೊತೆಯಾಗಿ ನೋಡಿ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ. ದೇಶಕ್ಕೆ ಹೆಮ್ಮೆ ತಂದ ಇಬ್ಬರು ಬ್ಯೂಟಿಗಳನ್ನು ಜೊತೆಯಾಗಿ ನೋಡಿ ಖುಷಿಯಾಯಿತು ಎಂದಿದ್ದಾರೆ.

56
ಶ್ರೀನಿಧಿ ಶೆಟ್ಟಿ

ಮಂಗಳೂರಿನ ಬೆಡಗಿ ಶ್ರೀನಿಧಿ ಶೆಟ್ಟಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಪೇಗೆಂಟ್ ವಿಜೇತರಾಗಿ, ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಜೊತೆಗೆ ಮಿಸ್ ಸುಪ್ರನ್ಯಾಷನಲ್ ಏಶಿಯಾ ಪ್ರಶಸ್ತಿ ಕೂಡ ಗೆದ್ದಿದ್ದಾರೆ. ಬಳಿಕ ಕೆಜಿಎಫ್ ಚಾಪ್ಟರ್ 1 ಮತ್ತು 2 ಎರಡರಲ್ಲೂ ನಾಯಕಿಯಾಗಿ ಅಭಿನಯಿಸಿದರು. ಬಳಿಕ ಕೋಬ್ರಾ, ಹಿಟ್, ತೆಲುಸುಕಾದ ಸಿನಿಮಾಗಳಲ್ಲಿ ನಟಿಸಿದ್ದು, ಶೀಘ್ರದಲ್ಲಿ ಆದರ್ಶ ಕುಟುಂಬಂ ಹೌಸ್ ನಂ 47 ಸಿನಿಮಾದಲ್ಲಿ ನಟಿಸಲಿದ್ದಾರೆ.

66
ಆಶಾ ಭಟ್

ಭದ್ರವತಿಯ ಬ್ಯೂಟಿ ಆಶಾ ಭಟ್ 2014ರಲ್ಲಿ ಮಿಸ್ ಸುಪ್ರನ್ಯಾಷನಲ್ ಮತ್ತು ಮಿಸ್ ದಿವಾ ಸ್ಪರ್ಧೆ ಗೆದ್ದು ಕಿರೀಟ ಮುಡಿಗೇರಿಸಿಕೊಂಡಿದ್ದರು. ಇವರು ಒಂದು ಹಿಂದಿ, ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ದರ್ಶನ್ ತೂಗುದಿಪ ಜೊತೆ ರಾಬರ್ಟ್ ಚಿತ್ರದಲ್ಲಿ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories