‘ಚಿನ್ನ ನಿನ್ನ ಮಗ ಪಾಸ್’ ಎಂದು ಪತ್ನಿಗೆ ಹೇಳುತ್ತಾ ಪುತ್ರನ ಯಶಸ್ಸನ್ನು ಸಂಭ್ರಮಿಸಿದ ವಿಜಯ್ ರಾಘವೇಂದ್ರ

Published : Apr 30, 2025, 02:57 PM ISTUpdated : Apr 30, 2025, 03:17 PM IST

ನಟ ವಿಜಯ ರಾಘವೇಂದ್ರ ಪುತ್ರ ಶೌರ್ಯ ವಿಜಯ್ ಐಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಈ ಸಂಭ್ರಮವನ್ನು ನಟ ಸಂಭ್ರಮಿಸಿದ್ದಾರೆ.   

PREV
17
‘ಚಿನ್ನ ನಿನ್ನ ಮಗ ಪಾಸ್’ ಎಂದು ಪತ್ನಿಗೆ ಹೇಳುತ್ತಾ ಪುತ್ರನ ಯಶಸ್ಸನ್ನು ಸಂಭ್ರಮಿಸಿದ ವಿಜಯ್ ರಾಘವೇಂದ್ರ

ಐಸಿಎಸ್​ಇ 10ನೇ ತರಗತಿ ಮತ್ತು ಐಎಸ್​ಸಿ (ISC) 12ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಇಂದು ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ (CISCE) ಪ್ರಕಟಿಸಿದ್ದು, ಚಂದನವನದ ಖ್ಯಾತ ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪುತ್ರ ಶೌರ್ಯ ವಿಜಯ್ ಕೂಡ 12ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ನಟ ಈ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

27

ಮುದ್ದಿನ ಮಗನ ಕೆನ್ನೆಗೆ ವಿಜಯ್ ರಾಘವೇಂದ್ರ  ಹಾಗೂ ಪತ್ನಿ ಸ್ಪಂದನಾ ವಿಜಯ್ (Spandana Vijay) ಮುತ್ತಿಡುವ ಹಳೆಯ ಫೋಟೊ ಒಂದನ್ನು ವಿಜಯ್ ರಾಘವೇಂದ್ರ ಶೇರ್ ಮಾಡಿದ್ದು, ಚಿನ್ನ, ನಿನ್ನ ಮಗ ಪಾಸ್ ಆಗಿದ್ದಾನೆ ಎಂದು ಹೆಂಡ್ತಿಯನ್ನು ನೆನಪಿಸುತ್ತಾ ಪೋಸ್ಟ್ ಮಾಡಿದ್ದಾರೆ. 
 

37

ಶೌರ್ಯ ವಿಜಯ್ (Shourya Vijay) ಐಎಸ್​ಸಿ 12ನೇ ತರಗತಿಯಲ್ಲಿ ಓದುತ್ತಿದ್ದರು. ಇವರಿಗೆ ಪರೀಕ್ಷೆಯಲ್ಲಿ ಎಷ್ಟು ಪರ್ಸಂಟೇಜ್ ಬಂದಿದೆ. ಯಾವ ಸ್ಕೂಲ್ ನಲ್ಲಿ ಓದುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ನಟ ತಮ್ಮ ಮಗನ ಯಶಸ್ಸನ್ನು ಹಂಚಿಕೊಳ್ಳುವ ಮೂಲಕ ತಾವೂ ಸಂಭ್ರಮಿಸಿದ್ದಾರೆ. 

47

ಮಗನ ಪರೀಕ್ಷೆಯ ಸಮಯದಲ್ಲಿ ವಿಜಯ್ ರಾಘವೇಂದ್ರ ಕಾಳಜಿಯಿಂದ ಮಗನ ಜೊತೆಯಾಗಿ ನಿಂತು ಆತನಿಗೆ ಧೈರ್ಯ ತುಂಬಿದ್ದರು. ಮಗನ ಪರೀಕ್ಷೆ ಮುಗಿಯುತ್ತಿದ್ದಂತೆ ನಟ ಆತನನ್ನು ಕರೆದುಕೊಂಡು ಸಮ್ಮರ್ ವೆಕೇಶನ್ (summer vacation) ಎಂಜಾಯ್ ಮಾಡಲು ಗೋವಾಕ್ಕೆ ತೆರಳಿದ್ದರು. 

57

ಇನ್ನು ನಿನ್ನೆಯಷ್ಟೇ ಶೌರ್ಯ ಅಮ್ಮ ಸ್ಪಂದನಾ ವಿಜಯ್ ಅವರ ಹಳೆಯ ಫೋಟೊಗಳನ್ನು ಪೋಸ್ಟ್ ಮಾಡಿದ್ದು,  ಲ್ಯಾಪ್‌ಟಾಪ್‌ನಲ್ಲಿ ನನ್ನ ಫೋಟೋಗಳನ್ನು ಸ್ಕ್ರೋಲ್ ಮಾಡಿದಾಗ ಈ ಚಿತ್ರಗಳು ಸಿಕ್ಕವು...ಇದನ್ನೆಲ್ಲಾ ನೋಡಿ ಎಂದು ಬರೆದುಕೊಂಡಿದ್ದರು. ಈ ಫೋಟೊಗಳ ಜೊತೆಗೆ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರದ ‘ಧಿಕ್ಕಾರ ನಿನಗೆ ದೇವರೆ ಉಸಿರು ಈ ಇರುವರೆಗೆ, ಕಸಿದುಕೊಂಡ ಜೀವವ ಮರಳಿ ಕೊಡು ನನಗೆ, ಧಿಕ್ಕಾರ ನಿನಗೆ ದೇವರೆ ನಿನ್ನ ಈ ನಡೆಗೆ, ಕ್ಷಮಿಸಲಾರೆ ನಿನ್ನನ್ನು ನಾನು ಕೊನೆವರೆಗೆ’ ಎನ್ನುವ ಹಾಡನ್ನು ಹಾಕಿದ್ದರು. 
 

67

ವಿಜಯ್ ರಾಘವೇಂದ್ರ ಹಾಕಿರುವ ಫೋಟೊ ನೋಡಿ, ಅಭಿಮಾನಿಗಳು ಸಹ ಶೌರ್ಯನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ರಾಘು ನಿಮ್ಮ ಪರಿಶ್ರಮ . ನಿಮ್ಮ ಮಗ ನಿಮ್ಮ ಆಸೆನಾ ನೆರೆವೇರಿಸುತ್ತಾನೆ. ದೇವರು ಇಬ್ಬರಿಗೂ ಆರೋಗ್ಯ ಆಯುಷ್ ಕೊಡಲಿ ಎಂದು ಶುಭ ಕೋರಿದ್ದಾರೆ. 

77

2023ರಲ್ಲಿ ಫ್ಯಾಮಿಲಿ ಜೊತೆ ಬ್ಯಾಂಕಾಕ್ ಗೆ ತೆರಳಿದ್ದ ಸ್ಪಂದನಾ, ಅಲ್ಲೇ ಹೃದಯಾಘಾತದಿಂದ (heart attack) ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ವಿಜಯ್ ರಾಘವೇಂದ್ರ ಪ್ರೀತಿಯ ಪತ್ನಿ ಇಲ್ಲದೇ ಒಬ್ಬಂಟಿಯಾದರು. ಮಗ ಶೌರ್ಯ ಕೂಡ ಇವತ್ತಿಗೂ ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ. 

Read more Photos on
click me!

Recommended Stories