Photos: ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಗನಿಗೆ ಅಕ್ಷರಾಭ್ಯಾಸ ಮಾಡಿಸಿದ ನಿಖಿಲ್‌ ಕುಮಾರಸ್ವಾಮಿ

Published : Apr 30, 2025, 01:32 PM ISTUpdated : Apr 30, 2025, 01:53 PM IST

ಇಂದು ಅಕ್ಷಯ ತೃತೀಯ. ಈ ಶುಭ ದಿನದಂದು ಆರಂಭಿಸಿದ ಕೆಲಸ ಯಶಸ್ಸು ಪಡೆಯುತ್ತದೆ ಎಂದು ಹೇಳುತ್ತಾರೆ. ಈಗ ನಿಖಿಲ್‌ ಕುಮಾರಸ್ವಾಮಿ ಅವರು ಮಗನ ಅಕ್ಷರಾಭ್ಯಾಸ ಮಾಡಿಸಿದ್ದಾರೆ.  

PREV
18
Photos: ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಗನಿಗೆ ಅಕ್ಷರಾಭ್ಯಾಸ ಮಾಡಿಸಿದ ನಿಖಿಲ್‌ ಕುಮಾರಸ್ವಾಮಿ

ಶೃಂಗೇರಿ ಶಾರದಾಂಬೆ ವಿದ್ಯೆಗೆ ಅಧಿಪತಿ ಎನ್ನಬಹುದು. ಈ ಪವಿತ್ರ ಪುಣ್ಯ ಸ್ಥಳದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು ಮಗ ಅವ್ಯಾನ್‌ ದೇವ್‌ ಅವರ ಅಕ್ಷರಾಭ್ಯಾಸ ಮಾಡಿಸಿದ್ದಾರೆ.
 

28

ಕೆಲದಿನಗಳ ಹಿಂದೆ ನಟಿ ಅಮೂಲ್ಯ ಹಾಗೂ ಜಗದೀಶ್‌ ಆರ್‌ ಚಂದ್ರ ಅವರು ತಮ್ಮ ಅವಳಿ ಮಕ್ಕಳಾದ ಅಥರ್ವ ಹಾಗೂ ಆಧವ್‌ ಅವರ ಅಕ್ಷರಾಭ್ಯಾಸ ಮಾಡಿಸಿದ್ದರು. ಇದಾದ ಬಳಿಕ ನಿಖಿಲ್‌ ಅವರು ಶೃಂಗೇರಿಯಲ್ಲಿ ಮಗನ ಅಕ್ಷರಾಭ್ಯಾಸ ಮಾಡಿಸಿದ್ದಾರೆ.


 

38

ಅಕ್ಷರಾಭ್ಯಾಸದ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ ಶಾರದಾ ಮಾತೆಯ ದರ್ಶನ ಕೂಡ ಪಡೆದಿದ್ದಾರೆ. 
 

48

“ಶ್ರೀ ಕ್ಷೇತ್ರ ಶೃಂಗೇರಿಗೆ ಕುಟುಂಬ ಸಮೇತ ಭೇಟಿ ನೀಡಿ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ  ಭಾರತೀತೀರ್ಥ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆದುಕೊಂಡೆ. ಪರಮಪೂಜ್ಯರ ಅನುಗ್ರಹ, ಕಾರುಣ್ಯಕ್ಕೆ ನಾನು ಧನ್ಯ” ಎಂದು ನಿಖಿಲ್‌ ಕುಮಾರಸ್ವಾಮಿ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.
 

58

“ಜಗನ್ಮಾತೆ ಶ್ರೀ ಶಾರದಾಂಬೆಯ ದರ್ಶನ ಪಡೆದು ಪುತ್ರ ಚಿ. ಅವ್ಯಾನ್ ದೇವ್ ಗೆ ಅಮ್ಮನವರ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿ ಸರ್ವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದೆ” ಎಂದು ನಿಖಿಲ್‌ ಗೌಡ ಹೇಳಿದ್ದಾರೆ. 

68

2021ರಲ್ಲಿ ಅವ್ಯಾನ್‌ ದೇವ್‌ ಅವರ ಜನನವಾಗಿದೆ. ಆಗಾಗ ತಂದೆ ಜೊತೆಗೆ ಆಟ ಆಡುವ ಅವ್ಯಾನ್‌ ದೇವ್‌ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತದೆ. 

78

ಇನ್ನು ಮಗನ ಅಕ್ಷರಾಭ್ಯಾಸದಂದು ರೇವತಿ ಮಂಜುನಾಥ್‌ ಅವರು ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅಂದಹಾಗೆ ಅವ್ಯಾನ್‌ ಕೂಡ ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಕಂಗೊಳಿಸಿದ್ದಾರೆ. 

88

ಈ ಶುಭ ಕಾರ್ಯಕ್ರಮದಲ್ಲಿ ಎಚ್‌ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರು ಭಾಗಿಯಾದಂತಿಲ್ಲ. ಅಂದಹಾಗೆ ರೇವತಿ ಅವರು ನಿಖಿಲ್‌ ರಾಜಕೀಯ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದಾರೆ. 

Read more Photos on
click me!

Recommended Stories