ಕನ್ನಡ ಚಿತ್ರರಂಗದ ದಿಗ್ಗಜರಲ್ಲೊಬ್ಬರಾದ ಮೈಸೂರು ಪುಟ್ಟಲಿಂಗಪ್ಪ ಶಂಕರ್ ಅವರು 1935 ಆಗಸ್ಟ್ 20 ರಂದು ಜನಿಸಿದರು.
undefined
ಖ್ಯಾತ ಖಳನಾಯಕನ ಪಟ್ಟ ಅಲಂಕರಿಸಿದ್ದ ಇವರು ರಂಗಭೂಮಿ ನಂಟು ಹೊಂದಿದ್ದರು.
undefined
ಪರಿಸರ, ಕಾಡು ಹಾಗು ವನ್ಯಜೀವಿ ಸಂರಕ್ಷಣೆಯ ಸಂಬಂಧ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದ ಹೆಗ್ಗಳಿಕೆ ಇವರದು.
undefined
ಡಾ ರಾಜ್ ಅಭಿನಯದ ಸತ್ಯ ಹರಿಶ್ಚಂದ್ರ ಚಿತ್ರದ ವೀರಬಾಹು ಪಾತ್ರ ಇವರನ್ನು ಹೆಚ್ಚು ಜನಪ್ರಿಯರನ್ನಾಗಿಸಿದೆ.
undefined
ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ಪರಿಣಿತರಾಗಿದ್ದ ಇವರು ನಟನೆಯ ಜೊತೆಗೆ,ದಿಗ್ದರ್ಶನ,ಚಿತ್ರನಿರ್ಮಾಣ,ವಿತರಣೆ ಹೀಗೆ ಎಲ್ಲಾ ಮಜಲುಗಳನ್ನು ಚೆನ್ನಾಗಿ ಅರಿತಿದ್ದರು.
undefined
ಸತ್ಯಹರಿಶ್ಚಂದ್ರ , ಗಂಧದಗುಡಿ , ಬಂಗಾರಮನುಷ್ಯ , ಭೂತಯ್ಯನ ಮಗ ಅಯ್ಯು ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಜನರ ಗಮನ ಸೆಳೆದಿದ್ದರು.
undefined
ಸಿನಿಮಾ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದ ಎಂಪಿ ಶಂಕರ್ ಅವರು ತಮ್ಮ ಸಂಸ್ಥೆಯಿಂದ 16 ಯಶಸ್ವಿ ಸಿನಿಮಾಗಳನ್ನು ಕನ್ನಡ ಸಿನಿಪ್ರಿಯರಿಗೆ ನೀಡಿದ್ದಾರೆ.
undefined
ಗಿಡ್ಡುದಾದ ಮತ್ತು ನಾರದ ವಿಜಯ ಎಂಬ ಹಾಸ್ಯ ಪ್ರಧಾನ ಸಿನಿಮಾಗಳನ್ನು ತಯಾರಿಸಿದ್ದು ಕೂಡ ಮತ್ತೊಂದು ವಿಶೇಷ.
undefined
ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿದ್ದ " ಕಲ್ಲರಳಿ ಹೂವಾಗಿ "ಎಂಪಿ ಶಂಕರ್ ಅವರ ಕೊನೆಯ ಸಿನಿಮಾವಾಗಿತ್ತು.
undefined
ನಟಶಾರ್ದೂಲ,ಕಲಾಶಾರ್ದೂಲ,ಮೈಸೂರುಹುಲಿ,ಕಲಾಸೇವಾಧುರೀಣ,ಕನ್ನಡಭೂಷಣ,ಸಾಹಸೀಚಿತ್ರರತ್ನ,ಕರುಣಾರತ್ನ ಎಂಬ ಅನೇಕ ಬಿರುದುಗಳನ್ನು ಪಡೆದಿದ್ದಾರೆ.
undefined