ರಿಷಬ್ ಶೆಟ್ಟಿ ಫ್ರೆಂಚ್ ಬಿಯರ್ಡ್ ಲುಕ್ ವೈರಲ್; ಕಾಮೆಂಟ್‌ನಲ್ಲಿ ಶುರುವಾಯ್ತು ಫ್ಯಾನ್ಸ್‌ ಚರ್ಚೆ!

First Published | Aug 18, 2020, 4:55 PM IST

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಡಿಫರೆಂಟ್‌ ಲುಕ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಡಿಫರೆಂಟ್‌ ಲುಕ್‌ ಪೋಟೋ ಶೇರ್ ಮಾಡಿದ ನಟ ರಿಷಬ್ ಶೆಟ್ಟಿ.
'ನ್ಯೂ ಲುಕ್' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
Tap to resize

ಫ್ರೆಂಚ್ ಬಿಯರ್ಡ್‌ ಲುಕ್‌ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಮಗಳು ಜಾನಕಿ ಖ್ಯಾತಿಯ ಗಾನವಿಲಕ್ಷ್ಮಿ 'ಕಾಲೇಜ್‌ ಲುಕ್‌ ಆ?' ಎಂದು ಕಾಮೆಂಟ್ ಮಾಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಿಷಬ್‌ ಯಾವ ಸಿನಿಮಾ ಲುಕ್‌ ಇದು ಎಂದು ಫ್ಯಾನ್ಸ್ ಕಾಮೆಂಟ್ ಮಾಡಿ, ಪ್ರಶ್ನಿಸುತ್ತಿದ್ದಾರೆ.
ಇತ್ತೀಚಿಗೆ ರಾಜ್‌ ಬಿ ಶೆಟ್ಟಿ ಕಾಂಬಿನೇಷನ್‌ನಲ್ಲಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.
ರಿಷಬ್ ತಮ್ಮ ಮುಂದಿನ ಸಿನಿಮಾ 'ಹರಿಕಥೆ ಅಲ್ಲಾ ಗಿರಿಕಥೆ' ಚಿತ್ರೀಕರಣ ಪ್ರಾರಂಭಿಸಬೇಕಿದೆ.
'ಬೆಲ್ ಬಾಟಮ್‌ 2' ಚಿತ್ರಕ್ಕೆ ಕಥೆ ಸಿದ್ಧವಾಗುತ್ತಿದೆ. ಮೊದಲ ಭಾಗಕ್ಕಿಂತ ಹೊಸ ಹೊಸ ವಿಷಯಗಳನ್ನು ಭಾಗ ಎರಡರಲ್ಲಿ ತೋರಿಸಲಾಗುತ್ತಂತೆ.
ರಿಷಬ್ ಶೆಟ್ಟಿ ಅವರಷ್ಟೇ ತಮ್ಮ ಪುತ್ರನ ಪೋಟೋಗಳು ವೈರಲ್ ಆಗುತ್ತಿದೆ.
ಇತ್ತೀಚಿಗೆ ಪುತ್ರನಿಗೆ ಕೃಷ್ಣನ ಉಡುಗೆ ಧರಿಸಿ ಫೋಟೋ ಶೂಟ್ ಮಾಡಿಸಿದ್ದರು.

Latest Videos

click me!