ವಸಿಷ್ಠ-ಹರಿಪ್ರಿಯಾ ಜೋಡಿಯ ಮೊದಲ ಯುಗಾದಿ ಸಂಭ್ರಮ ಹೇಗಿದೆ ನೋಡಿ

First Published | Mar 22, 2023, 2:37 PM IST

ಸ್ಯಾಂಡಲ್ ವುಡ್ ನಟ ವಸಿಷ್ಠ ಮತ್ತು ಹರಿಪ್ರಿಯಾ ಜೋಡಿ ಮೊದಲ ಯುಗಾದಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. 

ನಾಡಿನಾದ್ಯಂತ ಯುಗಾದಿ ಸಂಭ್ರಮ ಜೋರಾಗಿದೆ. ಜನರು ಸಡಗರದಿಂದ ಯುಗಾದಿ ಹಬ್ಬ ಆಚರಿಸುತ್ತಿದ್ದಾರೆ. ಸಿನಿಮಾ ಮಂದಿ ಕೂಡ ಜೋರಾಗಿ ಹಬ್ಬ ಆಚರಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಟ ವಸಿಷ್ಠ ಮತ್ತು ಹರಿಪ್ರಿಯಾ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. 

ವಸಿಷ್ಠ ಮತ್ತು ಹರಿಪ್ರಿಯಾ ಜೋಡಿಗೆ ಮೊದಲ ಯುಗಾದಿ ಸಂಭ್ರಮ. ಮದುವೆಯಾಗಿ ಮೊದಲ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೂ ಯುಗಾದಿ ಶುಭಾಶಯ ತಿಳಿಸಿದ್ದಾರೆ. 

Tap to resize

ಸಿಂಹಪ್ರಿಯಾ ಜೋಡಿ ಇದೇ ವರ್ಷ ಜನವರಿ 26ರಂದು ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾಗಿ ಎರಡು ತಿಂಗಳು ಪೂರೈಸಿದೆ. ಇದೀಗ ಖುಷಿ ಖುಷಿಯಾಗಿ ತಮ್ಮ ಮೊದಲ ಯುಗಾದಿ ಹಬ್ಬವನ್ನ ಆಚರಿಸಿದ್ದಾರೆ. 

ನಟಿ ಹರಿಪ್ರಿಯಾ ಕೆಂಪು ಬಣ್ಣದ ಜರಿ ಸೀರೆಯಲ್ಲಿ ಮಿಂಚಿದ್ರೆ,‌ ವಸಿಷ್ಠ ಕಪ್ಪು ಮತ್ತು ಕಂದು ಬಣ್ಣದ ಶೇರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸುಂದರ ಜೋಡಿಯ ಫೋಟೋಗೆ ಮೆಚ್ಚುಗೆಯ ಕಾಮೆಂಟ್ ಹರಿದು ಬರುತ್ತಿದೆ. ಅಭಿಮಾನಿಗಳು ಸಹ ಈ ಜೋಡಿಗೆ ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. 

ಮದುವೆ ಬಳಿಕ ನಟಿ ಹರಿಪ್ರಿಯಾ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇತ್ತೀಚೆಗಷ್ಟೆ ಗುಡ್ ನ್ಯೂಸ್ ನೀಡುವುದಾಗಿ ಹೇಳಿ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದರು ಹರಿಪ್ರಿಯಾ. ಏನಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.

ಕೊನೆಗೂ ಗುಡ್ ನ್ಯೂನ್ ಏನು ಎಂದು ಬಹಿರಂಗ ಪಡಿಸಿದ್ದು ಹೊಸ ಯೂಟ್ಯೂಬ್ ಚಾನೆಲ್ ಮಾಡುವುದಾಗಿ ಹೇಳಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಹರಿಪ್ರಿಯಾ ಅಭಿಮಾನಿಗಳ ಮುಂದೆ ಬರಲಿದ್ದಾರೆ. 

Latest Videos

click me!