ಸೈಲೆಂಟ್‌ ಅಗಿ ಹಿಂದಿ ನಟನನ್ನು ಲವ್ ಮಾಡಿದ 'ಪುಟ್ಟನಂಜ' ನಟಿ ಮೀನಾ; ಆತ ಮದುವೆ ಆಗಿದ್ದಾನೆಂದು ಕೇಳಿ ಹಾರ್ಟ್‌ ಬ್ರೇಕ್‌...

Published : Mar 16, 2023, 12:38 PM IST

ಸುಹಾಸಿನಿ ಚಾಟ್‌ ಶೋನಲ್ಲಿ ಬಾಲ್ಯದ ಕ್ರಶ್‌ ಬಗ್ಗೆ ಮಾತನಾಡಿದ ನಟಿ ಮೀನಾ. ಆ ನಾಯಕ ಯಾರೆಂದು ಕೇಳಿದರೆ ನೀವೂ ಶಾಕ್ ಆಗ್ತೀರಾ....

PREV
16
ಸೈಲೆಂಟ್‌ ಅಗಿ ಹಿಂದಿ ನಟನನ್ನು ಲವ್ ಮಾಡಿದ 'ಪುಟ್ಟನಂಜ' ನಟಿ ಮೀನಾ; ಆತ ಮದುವೆ ಆಗಿದ್ದಾನೆಂದು ಕೇಳಿ ಹಾರ್ಟ್‌ ಬ್ರೇಕ್‌...

1995ರಲ್ಲಿ ಪುಟ್ಟನಂಜ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮೀನಾ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಚಾಟ್‌ ಶೋನಲ್ಲಿ ರಿವೀಲ್ ಮಾಡಿರುವ ವಿಚಾರ.

26

ಬಹುಭಾಷಾ ನಟಿ ಸುಹಾಸಿನಿ ನಡೆಸುವ ಚಾಟ್‌ ಶೋನಲ್ಲಿ ಮೀನಾ ಭಾಗಿಯಾಗಿದ್ದರು. ಈ ವೇಳೆ ತಮ್ಮ ಬಾಲ್ಯದ ಕ್ರಶ್‌ ಯಾರು, ಅವರಿಗೆ ಮದುವೆ ಆಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಎಷ್ಟು ಬೇಸರವಾಯ್ತು ಎಂದು ರಿವೀಲ್ ಮಾಡಿದ್ದಾರೆ. 

36

ಹೌದು! ನಟಿ ಮೀನಾ ಮದುವೆಗೂ ಮುನ್ನ ಹಿಂದಿ ನಟ ಹೃತಿಕ್ ರೋಷನ್‌ನ ತುಂಬಾ ಪ್ರೀತಿಸುತ್ತಿದ್ದರಂತೆ. ನಾನು ಮದುವೆ ಮಾಡಿಕೊಳ್ಳುವ ಹುಡುಗ ಹೃತಿಕ್‌ ರೀತಿನೇ ಇರಬೇಕು ಎನ್ನುತ್ತಿದ್ದರಂತೆ. 

46

ಮೀನಾ ಅವರಿಗೆ ಮದುವೆ ಮಾಡಬೇಕು ಎಂದು ಅವರ ತಾಯಿ ಗಂಡು ಹುಡುಕುತ್ತಿದ್ದರಂತೆ. ಆಗ ಮೀನಾ ನನಗೆ ಹೃತಿಕ್‌ ರೀತಿ ಹುಡುಗ ಬೇಕು ಹುಡುಕಿ ಎನ್ನುತ್ತಿದ್ದರಂತೆ. ಯಾವಾಗ ಹೃತಿಕ್ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿಡಿತ್ತು ಆಗ ಹಾರ್ಟ್‌ ಬ್ರೇಕ್ ಆಯಿತ್ತು ಎಂದಿದ್ದಾರೆ.

56

ವೃತ್ತಿ ಜೀವನದಲ್ಲಿ ಮೀನಾ ತುಂಬಾ ಅವಕಾಶಗಳನ್ನು ಕಳೆದುಕೊಂಡಿದ್ದಾರಂತೆ. ತಲೈವಾ ರಜನಿಕಾಂತ್‌ ಜೊತೆ ಪಡಿಯಪ್ಪದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದರು. ಆಫರ್‌ ರಿಜೆಕ್ಟ್ ಮಾಡಿದ ಮೇಲೆ ಬೇಸರವಾಯ್ತು ಎಂದಿದ್ದಾರೆ.

66

ಸ್ಟಾರ್ ನಟರ ಸಿನಿಮಾದಲ್ಲಿ ವಿಲನ್ ರೋಲ್ ಒಮ್ಮೆ ಒಪ್ಪಿಕೊಂಡು ಮಾಡಿದರೆ ಮತ್ತೊಮ್ಮೆ ಪ್ರಮುಖ ನಾಯಕಿ ಆಗುವುದು ಕಷ್ಟ ಎಂದು ಮೀನಾ ತಾಯಿ ಹೇಳಿದಕ್ಕೆ ಆಫರ್‌ ರಿಜೆಕ್ಟ್‌ ಮಾಡಿದರಂತೆ.

Read more Photos on
click me!

Recommended Stories