ವಿಭಿನ್ನ ಪಾತ್ರದಿಂದ ವೀಕ್ಷಕರು ನೋಡುವ ರೀತಿ ಬದಲಾಗುತ್ತದೆ: Vasishta Simha

First Published | Jan 23, 2022, 5:09 PM IST

ಎರಡನೇ ಸಲ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿರುವ ನಟ ವಸಿಷ್ಠ ಸಿಂಹ, ಚಿತ್ರಗಳಿಗೆ ಅವರು ಯಾವ ರೀತಿ ಪಾತ್ರ ಆಯ್ಕೆ ಮಾಡುತ್ತಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. 
 

ಚರಣ್ ರಾಜ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ವಸಿಷ್ಠ ಸಿಂಹ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಧಿಕಾರಿ ಪಾತ್ರದಲ್ಲಿ ಎರಡನೇ ಸಿನಿಮಾ ಇದಾಗಿದ್ದು, ಮಾಧ್ಯಮಕ್ಕೆ ನೀಡಿರುವ ಸಂದರ್ಶವೊಂದರಲ್ಲಿ ತಾವು ಆರಿಸಿಕೊಂಡ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ. 

'ಕಲಾವಿದನಾಗಿ ವಿಭಿನ್ನ ಪಾತ್ರಗಳನ್ನು ಎಕ್ಸಪರೀಮೆಂಟ್ ಮಾಡಬೇಕು. ಮಲಯಾಳಂ ನಟ Fahadh Faasil ರೀತಿ. ಅವರು ಎಲ್ಲಾ ಪಾತ್ರಗಳನ್ನು ಮಾಡುತ್ತಾರೆ. ಈ ರೀತಿ ಮಿಸ್ ಮಾಡಿದ್ದಾರೆ ಎನ್ನುವ ಹಾಗೆಯೇ ಇಲ್ಲ,' ಎಂದು ವಸಿಷ್ಠ ಸಿಂಹ ಮಾತನಾಡಿದ್ದಾರೆ.

Tap to resize

'ಪಾಸಿಟಿವ್ ಮತ್ತು ನೆಗೆಟಿವ್ ಶೇಡ್‌ ಆಗಿರಲಿ, ಆ ಪಾತ್ರ ನನಗೆ ಸ್ಪೂರ್ತಿ ನೀಡಬೇಕು. ನಾನು ಒಪ್ಪಿಕೊಳ್ಳುವೆ. ನಾನು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡರೆ ವೀಕ್ಷಕರು ನೋಡುವ ರೀತಿಯೂ ಬದಲಾಗುತ್ತದೆ.' 

'ಒಳ್ಳೆ ಪಾತ್ರಗಳನ್ನು ಮಾಡಿದರೆ ನಟನಾಗಿ ಸಂತೋಷ ಮತ್ತು ತೃಪ್ತಿ ಇರುತ್ತದೆ,' ಎಂದಿದ್ದಾರೆ.  ಕಲಾಕಾರ್, ಹೆಡ್‌ಬುಷ್‌, ಮರ್ಯಾದಸ್ಥ ಮತ್ತು ಸಿಂಹಾ ಸಿನಿಮಾದಲ್ಲಿ ವಸಿಷ್ಠ ನಟಿಸುತ್ತಿದ್ದಾರೆ.

'ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಡಿಪಾರ್ಟ್‌ಮೆಂಟ್‌ನಲ್ಲಿರುವ ಲೋಪ ದೋಶಗಳನ್ನು ತಿಳಿದುಕೊಂಡು, ಪ್ರಾಮಾಣಿಕರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುವಂತೆ ನೋಡಿ ಕೊಳ್ಳುವೆ. ಇದೊಂದು ರಿಯಲಿಸ್ಟ್‌ ವಿತ್ ಆ್ಯಕ್ಷನ್ ಸಿನಿಮಾ'.

'ಪಾತ್ರ ತಯಾರಿ ನಡೆಯುತ್ತಿದ್ದು ನಾನು, ಶರತ್‌ ಲೋಹಿತೇಶ್ವರ್ ಮತ್ತು ಸಾಯಿ ಕುಮಾರ್ ಅವರ ಜೊತೆ ಕೆಲಸ ಮಾಡುವುದಕ್ಕೆ ಕಾಯುತ್ತಿರುವೆ.'

ಸದ್ಯ ವಸಿಷ್ಠ ಅವರು ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಜನವರಿ 3ರಿಂದ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಕೊರೋನಾ ಕೇಸ್ ಕಡಿಮೆ ಇದ್ದರೂ ಮುಂಜಾಗೃತ ಕ್ರಮಗಳೊಂದಿಗೆ ಕೆಲಸ ಮಾಡುತ್ತಿದ್ದೀವಿ ಎಂದಿದ್ದಾರೆ.

Latest Videos

click me!