#HappyBirthday ನಿಖಿಲ್ ಕುಮಾರಸ್ವಾಮಿ; ಹುಟ್ಟುಹಬ್ಬ ಆಚರಣೆಗೆ ಬ್ರೇಕ್!

First Published | Jan 22, 2022, 11:36 AM IST

32ರ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ ಯುವರಾಜ. ಕೊರೋನಾದಿಂದ ಆಚರಣೆ ಬೇಡ ಎಂದ ನಟ. 
 

ಇಂದು ಸ್ಯಾಂಡಲ್‌ವುಡ್‌ ಯುವನಟ, ಯುವರಾಜ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಜನ್ಮದಿನ. 32ರ ವಸಂತಕ್ಕೆ ಕಾಲಿಟ್ಟಿದ್ದಾರೆ. 

ಕೋವಿಡ್ ಹಿನ್ನೆಲೆಯಲ್ಲಿ ಬರ್ತ್‌ಡೇ ಆಚರಣೆ ಮಾಡಿಕೊಳ್ಳದಿರಲು ನಿಖಿಲ್ ನಿರ್ಧರಿಸಿದ್ದಾರೆ. ಈ ಬಗ್ಗೆ ಟ್ಟಿಟರ್ ಖಾತೆಯಲ್ಲಿ ಟ್ಟೀಟ್ ಕೂಡ ಮಾಡಿದ್ದಾರೆ. 

Tap to resize

‘ಕೋವಿಡ್ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡುವ ಮೂಲಕ ತಾವು ಇದ್ದಲ್ಲಿಂದಲೇ ಹರಸಿ’ ಎಂದು ನಿಖಿಲ್ ಟ್ವೀಟ್ ಮಾಡಿದ್ದಾರೆ. 

ಹುಟ್ಟುಹಬ್ಬದ ಪ್ರಯುಕ್ತ ಇಂದು ನಿಖಿಲ್ ನಟನೆಯ ಹೊಸ ಚಿತ್ರದ ಘೋಷಣೆಯಾಗಲಿದೆ. ಮಂಜು ಅಥರ್ವ ನಿರ್ದೇಶನದ ಚಿತ್ರದ ಹೆಸರು ಹಾಗೂ ನಿಖಿಲ್ ಲುಕ್ ರಿವೀಲ್ ಆಗಲಿದೆ.  

ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಮವಾಗಿ ತೊಡಗಿಸಿಕೊಂಡಿರುವ ನಿಖಿಲ್‌ ಹೆಚ್ಚಾಗಿ ಸಿನಿಮಾ ಮಾಡಬೇಕು ಎನ್ನುವುದು ತಂದೆ ಹೆಚ್‌ ಡಿ ಕುಮಾರಸ್ವಾಮಿ ಅವರ ಆಸೆಯಂತೆ. 

ಅಲ್ಲದೆ ಈ ವರ್ಷ ನಿಖಿಲ್‌ ಅವರಿಗೆ ಹುಟ್ಟುಹಬ್ಬ ಮತ್ತಷ್ಟು ಸ್ಪೆಷಲ್‌ ಕಾರಣ ಮನೆಗೆ ಆಗಮಿಸಿರುವ ಪುಟ್ಟ ಕಂದಮ್ಮನಿಂದ. ಪುತ್ರನ ಜೊತೆ ಇದು ಮೊದಲ ಹುಟ್ಟುಹಬ್ಬ ಆಚರಣೆ ಆಗಲಿದೆ.

Latest Videos

click me!