ತಂದೆ ಆಗುತ್ತಿರುವ ಸಂಭ್ರಮದಲ್ಲಿ ನಟ Vishal Hegde; ಗುಡ್‌ ನ್ಯೂಸ್ ಫೋಟೋ!

First Published | Jan 22, 2022, 11:48 AM IST

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುವ ಮೂಲಕ  ತಂದೆ ಆಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡ ವಿಶಾಲ್. 

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ವಿಶಾಲ್ ಹೆಗ್ಡೆ ಮತ್ತು ಪ್ರಿಯಾ ಅಭಿಮಾನಿಗಳ ಜೊತೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.

ವಿಶಾಲ್ ಮತ್ತು ಪ್ರಿಯಾ, ಪೋಷಕರಾಗುತ್ತಿದ್ದಾರೆ. ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ. ಸಿನಿ ಸ್ನೇಹಿತರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. 

Tap to resize

'We have Hoped and we have Prayed and now we are Excited to say. Our little miracle is on its way' ಎಂದು ಬರೆದುಕೊಂಡಿದ್ದಾರೆ. 

ಸಿನಿ ಕ್ಷೇತ್ರ ಮತ್ತು ಯುಟ್ಯೂಬ್‌ vloggingನಲ್ಲಿ ವಿಶಾಲ್ ತೊಡಗಿಸಿಕೊಂಡಿದ್ದರೆ, ಪತ್ನಿ ಪ್ರಿಯಾ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌. 

ವಿಶಾಲ್ ಮತ್ತು ಪ್ರಿಯಾ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಷೀವ್ ಆಗಿದ್ದು ಟ್ರೆಂಡಿಂಗ್‌ನಲ್ಲಿರುವ ಪ್ರತಿಯೊಂದು ಆಡಿಯೋಗೂ ಧ್ವನಿ ಕೂಡಿಸುತ್ತಾರೆ ಮತ್ತು ರೀಲ್ಸ್ ಮಾಡುತ್ತಾರೆ.

'ಕನ್ನಡ vlog ಕನ್ನಡದಲ್ಲಿ ಇರುತ್ತದೆ. ಪ್ರಮುಖವಾಗಿ ಜೀವನದ ಪ್ರತಿಯೊಂದು ವಿಚಾರಗಳನ್ನು ತೋರಿಸಲಾಗುತ್ತದೆ. ನನ್ನ ದಿನಚರಿ ನಾನು ಭೇಟಿ ನೀಡುವ ಸ್ಥಳ ಹೀಗೆ' ಎಂದು ವಿಶಾಲ್ ಹೇಳಿದ್ದರು.

Latest Videos

click me!