ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದವಳ ಬದುಕು ಹೀಗಿರುತ್ತದೆ: ವರಲಕ್ಷ್ಮಿ V3 ಕಥೆ ವೈರಲ್

Published : Jan 09, 2023, 08:57 AM IST

ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ವಿ3 ಸಿನಿಮಾ. ನೈಜ ಕಥೆ ಆಧರಿತ ಸಿನಿಮಾ ಹೇಗಿದೆ?

PREV
16
ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದವಳ ಬದುಕು ಹೀಗಿರುತ್ತದೆ: ವರಲಕ್ಷ್ಮಿ V3 ಕಥೆ ವೈರಲ್

ಬಹುಭಾಷಾ ನಟ ಶರತ್‌ಕುಮಾರ್ ಪುತ್ರಿ ವರಲಕ್ಷ್ಮಿ ಅಭಿನಯಿಸಿರುವ ತಮಿಳು ಸಿನಿಮಾ v3 ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜನವರಿ 6ರಂದು ರಿಲೀಸ್ ಆದ ಈ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಶೀಘ್ರದಲ್ಲಿ ಮುಟ್ಟಲಿದೆ. 

26

ಕನ್ನಡದ ನಟಿ ಪಾವನಾ ಗೌಡ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಅದುಕುಲಂ, ಈಸ್ಟರ್ ಅನಿಲ್ ಸೇರಿದಂತೆ ದೊಡ್ಡ ತಾರ ಬಳಗ ನೋಡಬಹುದು.

36

V3 ಸಿನಿಮಾ ಒಂದು ನೈಜ ಕಥೆಯನ್ನು ಆಧರಿಸಿ ಮಾಡಿರುವ ಸಿನಿಮಾ ಆಗಿದ್ದು ಅಪ್ಪ ಮಗಳ ಸುಖ ಸಂಸಾರದ ಸುತ್ತ ಕಥೆ ನಡೆಯುತ್ತದೆ. ಇದ್ದಕ್ಕಿದ್ದಂತೆ ಅವರ ಜೀವನದಲ್ಲಿ ಎಂದೂ ಕಲ್ಪನೆ ಮಾಡಿಕೊಂಡಿರದ ಘಟನೆ ನಡೆಯುತ್ತದೆ ಅದೇ ಈ ಚಿತ್ರಕ್ಕೆ ಒಂದು ಟ್ವಿಸ್ಟ್‌.

46

ಜೀವನದಲ್ಲಿ ಸಾಧನೆ ಮಾಡಬೇಕು ಎಂದು ದೊಡ್ಡ ಕನಸು ಕಟ್ಟಿಕೊಂಡಿರುತ್ತಾಳೆ ಆದರೆ ಆಕೆಯ ಒಂದು ಹೆಜ್ಜೆ ಇಡೀ ಜೀವನೇ ಬದಲಾಗುತ್ತದೆ ಅದು ತಪ್ಪು ರೀತಿಯಲ್ಲಿ. ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಅವಳ ಬದುಕು ಗೊತ್ತು ಗುರಿ ಇಲ್ಲದಂತೆ ಆಗುತ್ತದೆ. 

56

ಐಎಎಸ್ ಅಧಿಕಾರಿ ಪಾತ್ರದಲ್ಲಿ ವರಲಕ್ಷ್ಮಿ ಕಾಣಿಸಿಕೊಂಡಿದ್ದು ತನಿಖೆಯಿಂದ ಈ ಕುಟುಂಬಕ್ಕೆ ಸಿಗಬಹುದಾ ಅನ್ನೋದೇ ಈ ಚಿತ್ರಕ್ಕೆ ಇರುವ ರೋಚಕ ಟ್ವಿಸ್ಟ್‌.

66

ಅಮುದವನ್ ನಿರ್ದೇಶನ, ಶಿವ ಪ್ರಭು ಕ್ಯಾಮರಾ ಹೊಂದಿರುವ ಈ ಸಿನಿಮಾ ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ. ಒಟ್ಟು 450 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories