ಮಾವ ಪೊಲೀಸ್ ಕಂಡ್ರೋ, ಹುಷಾರಾಗಿರ್ರೋ; ಅಪ್ಪನ ಫೋಟೋ ಹಂಚಿಕೊಂಡ ಸಪ್ತಮಿಗೆ ಫ್ಯಾನ್ಸ್ ಕಾಮೆಂಟ್ ವೈರಲ್

Published : Jan 07, 2023, 11:32 AM ISTUpdated : Jan 07, 2023, 12:23 PM IST

ಕಾಂತಾರ ಸಿನಿಮಾ ಸ್ಟಾರ್ ಸಪ್ತಮಿ ಗೌಡ ತಂದೆ, ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ರೆಡ್ಡಿ ಜೊತೆ ಫೋಟೋ ಹಂಚಿಕೊಂಡಿದ್ದಾರೆ. 

PREV
18
ಮಾವ ಪೊಲೀಸ್ ಕಂಡ್ರೋ, ಹುಷಾರಾಗಿರ್ರೋ; ಅಪ್ಪನ ಫೋಟೋ ಹಂಚಿಕೊಂಡ ಸಪ್ತಮಿಗೆ ಫ್ಯಾನ್ಸ್ ಕಾಮೆಂಟ್ ವೈರಲ್

ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ಮಿಂಚಿರುವ ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸಪ್ತಮಿಗೆ ಪ್ಯಾನ್ ಇಂಡಿಯಾ ಮಟ್ಟದ ಖ್ಯಾತಿ ತಂದುಕೊಟ್ಟಿದೆ. 
 

28

ಕಾಂತಾರ ಸಕ್ಸಸ್ ಬಳಿಕ ಸಪ್ತಮಿ ಗೌಡ ಪ್ರಮೋಷನ್, ಸಂದರ್ಶನ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಇದೀಗ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಮುಂದಿನ ಸಿನಿಮಾಗಳ ಶೂಟಿಂಗ್ ತಯಾರಿ ನಡುವೆಯೂ ಸಪ್ತಮಿ ಹೆಚ್ಚಾಗಿ  ಫ್ಯಾಮಿಲಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. 

38

ಅಂದಹಾಗೆ ಸಪ್ತಮಿ ಪೊಲೀಸ್ ಅಧಿಕಾರಿಯ ಮಗಳು. ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲದೆ ಇರಬಹುದು. ಖ್ಯಾತ ಪೊಲೀಸ್ ಆಫೀಸರ್ ಎಸ್‌ಕೆ ಉಮೇಶ್ ಅವರ ಮುದ್ದಾದ ಮಗಳು. ತಾಯಿ ಸಾಂತ ಮಾದಯ್ಯ. ಇಬ್ಬರೂ ಹೆಣ್ಣು ಮಕ್ಕಳಲ್ಲಿ ಸಪ್ತಮಿ ಮೊದಲ ಮಗಳು. 

48

ಅಂದಹಾಗೆ ಇತ್ತೀಚಿಗಷ್ಟೆ ಕೋರಮಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಪ್ತಮಿ ಅಪ್ಪನ ಜೊತೆ ಕಾಣಿಸಿಕೊಂಡಿದ್ದರು. ತಂದೆ ಮಗಳ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿವೆ. 

58

ಎಸ್ ಕೆ ಉಮೇಶ್ ಅವರು 1990ರಿಂದ 2020ರವರೆಗೆ ಬೆಂಗಳೂರಿನಲ್ಲಿ ಕೆಲಸ ಮಾಡಿ ವ್ಯಾಪಕ ಮೆಚ್ಚುಗೆ ಗಳಿಸಿದ್ದರು. ತಮ್ಮ ಸೇವೆಗಾಗಿ 2015ರಲ್ಲಿ ರಾಷ್ಟ್ರಪತಿ ಪದಕ, 2020ನೇ ಸಾಲಿನ ಕೇಂದ್ರ ಸರ್ಕಾರದ ಸ್ಪೆಷಲ್ ಆಪರೇಷನ್ ಮೆಡಲ್ ಹಾಗೂ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
 

68

ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಎಸ್.ಕೆ ಉಮೇಶ್ ಮತ್ತು ಸಪ್ತಮಿ ಗೌಡ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮಾವ ಪೊಲೀಸ್ ಕಂಡ್ರೋ ಹುಷಾರಾಗ್ರೋ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಚಿನ್ನ ಅತ್ತೆ ಮಾವನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದ ಎಂದು ಹೇಳುತ್ತಿದ್ದಾರೆ. 

78

ಮತ್ತೋರ್ವ ಕಾಮೆಂಟ್ ಮಾಡಿ, ನಿಮ್ಮ ಅಪ್ಪ ಪೊಲೀಸ್ ಆಗಿದ್ದರೂ ನಾವು ನಿಮ್ಮನ್ನ ಲವ್ ಮಾಡ್ತೀವಿ ಅಂತ ಹೇಳಿದ್ದಾರೆ. ಹೆಮ್ಮೆಯ ಮಗಳು ಮತ್ತು ಅಪ್ಪ ಎಂದು ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಹೀಗೆ ಸಪ್ತಮಿ ಶೇರ್ ಮಾಡಿರುವ ಫೋಟೋಗಳಿಗೆ ಸಾಕಷ್ಟು ಕಾಮೆಂಟ್ ಗಳು ಹರಿದು ಬರುತ್ತಿವೆ. 

88

ಅಂದಹಾಗೆ ಸಪ್ತಮಿ ಗೌಡ ಕಾಂತಾರ ಸಕ್ಸಸ್ ಬಳಿಕ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ. ಕೃಷ್ಣ ಮತ್ತು ಅಭಿಷೇಕ್ ಅಂಬರೀಶ್ ನಟನೆಯ ಸಿನಿಮಾದಲ್ಲಿ ಸಪ್ತಮಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಪ್ತಮಿ ಯಾವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.   

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories