Happy Birthday Yash; ದುಬೈನಲ್ಲಿ ರಾಕಿಂಗ್ ಸ್ಟಾರ್ ಹುಟ್ಟುಹಬ್ಬ ಆಚರಣೆ; ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

Published : Jan 08, 2023, 10:04 AM IST

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು (ಜನವರಿ 08) ಹುಟ್ಟುಹಬ್ಬದ ಸಂಭ್ರಮ. ರಾಕಿ ಭಾಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. 

PREV
16
Happy Birthday Yash; ದುಬೈನಲ್ಲಿ ರಾಕಿಂಗ್ ಸ್ಟಾರ್ ಹುಟ್ಟುಹಬ್ಬ ಆಚರಣೆ; ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು (ಜನವರಿ 08) ಹುಟ್ಟುಹಬ್ಬದ ಸಂಭ್ರಮ. ರಾಕಿ ಭಾಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. 

26

ಅಂದಹಾಗೆ ಯಶ್  ಹಲವು ಬಾರಿ ಅವರು ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಿಸಿಕೊಂಡಿದ್ದರು. ಆದರೆ ಕೊರೊನಾ ಬಳಿಕ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಲ್ಲ. ಆದರೆ ಈ ಬಾರಿಯಾದರೂ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಬರ್ತಡೇ ಆಚರಿಸಿಕೊಳ್ಳುತ್ತಾರಾ ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ ಈ ಬಾರಿಯೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. 

36

ಸದ್ಯ ಯಶ್ ದುಬೈನಲ್ಲಿದ್ದಾರೆ. ಇಡೀ ಕುಟುಂಬದ ಜೊತೆ ರಾಕಿಂಗ್ ಸ್ಟಾರ್ ದುಬೈ ಹಾರಿದ್ದಾರೆ. ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ದುಬೈನಲ್ಲಿ ಕುಟುಂಬದ ಜೊತೆ ಡಿನ್ನರ್ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 

46

ಅಭಿಮಾನಿಗಳು ಯಶ್ ಫೋಟೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ರಾಷ್ಟ್ರ ಆಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. .ಕೆಜಿಎಫ್-2 ಬಳಿಕ ಯಶ್ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಕೆಜಿಎಫ್2 ರಿಲೀಸ್ ಆಗಿ ಅನೇಕ ತಿಂಗಳೇ ಆಗಿದೆ.  ಹಾಗಾಗಿ ಯಶ್ ಮುಂದಿನ ಸಿನಿಮಾದ ಮೇಲೆ ಕುತೂಹಲ ಹೆಚ್ಚಾಗಿದೆ. 

56

ರಾಕಿಂಗ್ ಸ್ಟಾರ್ ಕೆಜಿಎಫ್-2 ಬಳಿಕ ಅವರ ಜೊತೆ ಸಿನಿಮಾ ಮಾಡ್ತಾರೆ ಇವರ ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಯಶ್ 'ಕೆವಿಯನ್ ಪ್ರೊಡಕ್ಷನ್' ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. 
 

66

ಅಂದಹಾಗೆ ಯಶ್ ದುಬೈಗೆ ಹೊರಡುವ ಮುನ್ನ ಕೆವಿಯನ್ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ, ದುಬೈನಿಂದ ಪಾವಾಸ್ ಆದ ಬಳಿಕ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.    
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories