ವಿಶಾಲ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ 'ವಜ್ರಕಾಯ' ನಟಿ ಶುಭ್ರಾ ಅಯ್ಯಪ್ಪ; 150 ವರ್ಷಗಳ ಹಳೆಯ ಮನೆಯಲ್ಲಿ ಮದುವೆ

Published : Jan 19, 2023, 12:46 PM IST

ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ, ಮಾಡಲ್ ಶುಭ್ರಾ ಅಯ್ಯಪ್ಪ ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

PREV
17
ವಿಶಾಲ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ 'ವಜ್ರಕಾಯ' ನಟಿ ಶುಭ್ರಾ ಅಯ್ಯಪ್ಪ; 150 ವರ್ಷಗಳ ಹಳೆಯ ಮನೆಯಲ್ಲಿ ಮದುವೆ

ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ, ಮಾಡಲ್ ಶುಭ್ರಾ ಅಯ್ಯಪ್ಪ ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಶುಭ್ರಾ ಅಯ್ಯಪ್ಪ ಸಿನಿಮಾಗಿಂತ ಹೆಚ್ಚಾಗಿ ಮಾಡಲಿಂಗ್ ಕ್ಷೇತ್ರದಲ್ಲಿ ಖ್ಯಾತಿಗಳಿಸಿದ್ದಾರೆ. 

27

ನಟಿ ಶುಭ್ರಾ ಅಯ್ಯಪ್ಪ ಗೆಳೆಯ ವಿಶಾಲ್ ಶಿವಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜನವರಿ 18ರಂದು ನಡೆದ ಮದುವೆ ಸಂಭ್ರಮದಲ್ಲಿ ವಿಶಾಲ್ ಶಿವಪ್ಪ, ಶುಭ್ರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು.  ಅಂದಹಾಗೆ ಇಬ್ಬರ ಮದುವೆ ಕೂರ್ಗ್‌ನಲ್ಲಿ ನೆರವೇರಿದೆ. 

37

ಶುಭ್ರಾ ಅಯ್ಯಪ್ಪ ವಿಶಾಲ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಫೋಟೋಗಳನ್ನು ನಟಿ ಶುಭ್ರಾ ಅಯ್ಯಪ್ಪ ಕೂಡ ಶೇರ್ ಮಾಡಿದ್ದಾರೆ. ಅಂದಹಾಗೆ ಇಬ್ಬರ ಮದುವೆ ವಿಶೇಷವಾದ ಸ್ಥಳದಲ್ಲಿ ನಡೆದಿದೆ. 150 ವರ್ಷಗಳ ಹಳೆಯ ಮನೆ ದೊಡ್ಮನೆಯಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 
 

47

ಈ ಬಗ್ಗೆ ನಟಿ ಶುಭ್ರಾ ಅಯ್ಯಪ್ಪ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡು,  'ದೊಡ್ಡಮನೆಯಲ್ಲಿ ನಾನು ಮತ್ತು ವಿಶಾಲ್ ನಮ್ಮ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾದೆವು. ಇದು ಅವರ 150 ವರ್ಷಗಳ ಹಿಂದಿನ ಮನೆಯಾಗಿದೆ. ಈ ಸುಂದರ ಸ್ಥಳದಲ್ಲಿ ನಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಈ ಸಂತೋಷದಾಯಕ ಸಂದರ್ಭದ ಪ್ರೀತಿಯನ್ನು ನಾವು ಅನುಭವಿಸಿದ್ದೇವೆ' ಎಂದು ಹೇಳಿದ್ದಾರೆ. 
 

57

ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ದಂಪತಿಗೆ ಅಭಿಮಾನಿಗಳು, ಕನ್ನಡ ಸಿನಿಮಾರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಅಭಿನಂದನೆ ಸಲ್ಲಿಸುತ್ತಿದ್ದಾರೆ. 

67

ಮದುವೆಯಲ್ಲಿ ಶುಭ್ರಾ ಅಯ್ಯಪ್ಪ ಗೋಲ್ಡ್ ಮತ್ತು ಪಿಂಕ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ವಿಶಾಲ್ ಪಂಚೆ ಶಲ್ಯಾದಲ್ಲಿ ಕಾಣಿಸಿಕೊಂಡರು. ಇಬ್ಬರ ಸುಂದರ ಮದುವೆ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಟಗೆ ವ್ಯಕ್ತವಾಗುತ್ತಿದೆ. 
 

77

ಇತ್ತೀಚಿಗಷ್ಟೆ ತನ್ನ ಲವ್ ಸ್ಟೋರಿ ರಿವೀಲ್ ಮಾಡಿ ಮದುವೆ ವಿಚಾರ ಬಹಿರಂಗ ಪಡಿಸಿದ್ದರು ಶುಭ್ರಾ ಅಯ್ಯಪ್ಪ.  'ವಿಶಾಲ್ ಶಿವಪ್ಪ ಮತ್ತು ನಾನು ಮೊದಲು ಭೇಟಿಯಾಗಿದ್ದು 6 ವರ್ಷಗಳ ಹಿಂದೆ. ನನ್ನ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಬೇಕು ಎಂದು ನನ್ನ ಸ್ನೇಹತರ ಬಳಿ ಮಾಹಿತಿಗಾಗಿ ಬೇಡುತ್ತಿದ್ದರು' ಎಂದು ಶುಭ್ರಾ ಅಯ್ಯಪ್ಪ ಹೇಳಿಕೊಂಡಿದ್ದರು. ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಶುಭ್ರಾ ಸದ್ಯ ರಾಮನ ಅವತಾರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ವಜ್ರಕಾಯ ಮತ್ತು ತಿಮ್ಮಯ್ಯ ಅಂಡ್ ತಮ್ಮಯ್ಯ ಸಿನಿಮಾದಲ್ಲಿ ನಟಿಸಿದ್ದರು. ಕನ್ನಡ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.  

Read more Photos on
click me!

Recommended Stories