ದುಬೈ ಪ್ರವಾಸದಲ್ಲಿ 'ಕಾಂತಾರ' ಶಿವ; ಪತ್ನಿ, ಮಕ್ಕಳ ಜೊತೆ ರಿಷಬ್ ಶೆಟ್ಟಿ ಮಸ್ತ್ ಮಜಾ

First Published Jan 18, 2023, 11:34 AM IST

ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕುಟುಂಬದ ಜೊತೆ ದುಬೈ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಕಾಂತಾರ ಸಿನಿಮಾ ಮೂಲಕ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ ರಿಷಬ್ ಶೆಟ್ಟ. ಕಾಂತಾರ ಪ್ಯಾನ್ ಇಂಡಿಯಾ ಸಕ್ಸಸ್‌ನ ಖುಷಿಯಲ್ಲಿರುವ ರಿಷಬ್ ಶೆಟ್ಟಿ ಸದ್ಯ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಸಿನಿಮಾ ರಿಲೀಸ್, ಪ್ರಮೋಷನ್ ಸಕ್ಸಸ್ ಅಂತ ಬ್ಯುಸಿಯಾಗಿದ್ದ ರಿಷಬ್ ಇದೀಗ ಇಡೀ ಕುಟುಂಬದ ಜೊತೆ ವಿದೇಶಕ್ಕೆ ಹಾರಿದ್ದಾರೆ. 

ರಿಷಬ್ ಶೆಟ್ಟಿ ಸದ್ಯ ಕುಟುಂಬದ ಜೊತೆ ದುಬೈ ಪ್ರವಾಸಕ್ಕೆ ತೆರಳಿದ್ದು ಮಸ್ತ್ ಮಜಾ ಮಾಡುತ್ತಿದ್ದಾರೆ. ದುಬೈ ಪ್ರವಾಸದ ವಿಡಿಯೋವನ್ನು ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಮರಳುಗಾಡಿನ ಸವಾರಿ, ನೈಟ್ ಡಿನ್ನರ್, ಡಾನ್ಸ್ ಶೋ, ಗೇಮ್ಸ್ ಸೇರಿದಂತೆ ರಿಷಬ್ ಮತ್ತು ಪ್ರಗತಿ ಇಬ್ಬರೂ ಮಕ್ಕಳ ಜೊತೆ ಪ್ರವಾಸ ಎಂಜಾಯ್ ಮಾಡಿದ್ದಾರೆ. ಪುತ್ರ ರಣ್ವಿತ್ ಕ್ಯೂಟ್ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಪ್ಪ-ಅಮ್ಮನ ಜೊತೆ ರಣ್ವಿತ್ ಮಸ್ತ್ ಎಂಜಾಯ್ ಮಾಡಿದ್ದಾರೆ.

ಸುಂದರ ವಿಡಿಯೋ ಶೇರ್ ಮಾಡಿ, ದುಬೈ ಅದ್ಭುತವಾದ ಅನುಭವ ಎಂದು ಹೇಳಿದ್ದಾರೆ. ಪ್ರಗತಿ ಮತ್ತು ರಿಷಬ್ ಇಬ್ಬರೂ ಸಾಮಾಜಿಕ ಜಾಲತಾಣಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಕುಟುಂಬದ ಜೊತೆ ಅದ್ಭುತ ಸಮಯ. ಅಲ್ಲಿನ  ಆತಿಥ್ಯ ಮತ್ತು ವಾತಾವರಣ ಇಷ್ಟವಾಯಿತು ಎಂದು ಹೇಳಿದ್ದಾರೆ. 

ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಾಂತಾರ ಬಳಿಕ ಶೆಟ್ರು ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎಂದು ಕಾಯುತ್ತಿದ್ದಾರೆ. ಈಗಾಗಲೇ ರಿಷಬ್ ಅನೇಕ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದರು. ಆದರೆ ಕಾಂತಾರ ಸಕ್ಸಸ್ ಬಳಿಕ ಕೆಲವು ಸಿನಿಮಾಗಳಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. 
 

ಕಾಂತಾರ ಸಕ್ಸಸ್ ಬಳಿಕ ಕಾಂತಾರ 2 ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ರಿಷಬ್ ಶೆಟ್ಟಿ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಹಾಗಾಗಿ ಕಾಂತಾರ-2 ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. 
 

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಕಲಾವಿದರೂ, ಸಿನಿಮಾ ಗಣ್ಯರು ಮೆಚ್ಚಿಕೊಂಡಿದ್ದಾರೆ. ಹಾಡಿ ಹೊಗಳಿದ್ದಾರೆ.
 

ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಕೋಟಿ ಕೋಟಿ ಬಾಚಿಕೊಂಡಿದೆ. ಕಾಂತಾರ ಸೂಪರ್ ಸಕ್ಸಸ್ ಬಳಿಕ ರಿಷಬ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. ಯಾವಾಗ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಎಂದು ಕಾದುನೋಡಬೇಕಿದೆ. 

click me!