Upendra: ರಿಯಲ್​ ಸ್ಟಾರ್​ ಉಪೇಂದ್ರ-ವೇದಿಕಾ ನಟನೆಯ 'ಹೋಮ್‌ ಮಿನಿಸ್ಟರ್‌' ರಿಲೀಸ್‌ ಡೇಟ್ ಫಿಕ್ಸ್!

Suvarna News   | Asianet News
Published : Mar 04, 2022, 11:16 AM IST

ಸ್ಯಾಂಡಲ್‌ವುಡ್‌ನ ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ 'ಹೋಮ್​ ಮಿನಿಸ್ಟರ್' ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಚಿತ್ರ ರಿಲೀಸ್​ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾದ ಕೆಲಸಗಳು ಲೇಟ್​ ಆದವು.

PREV
16
Upendra: ರಿಯಲ್​ ಸ್ಟಾರ್​ ಉಪೇಂದ್ರ-ವೇದಿಕಾ ನಟನೆಯ 'ಹೋಮ್‌ ಮಿನಿಸ್ಟರ್‌' ರಿಲೀಸ್‌ ಡೇಟ್ ಫಿಕ್ಸ್!

ಉಪೇಂದ್ರ (Upendra), ವೇದಿಕಾ (Vedhika) ನಟನೆಯ 'ಹೋಮ್ ಮಿನಿಸ್ಟರ್‌' (Home Minister) ಚಿತ್ರ ಏಪ್ರಿಲ್ 1ರಂದು ಬಿಡುಗಡೆಯಾಗಲಿದೆ. ಸುಜಯ್‌ ಕೆ ಶ್ರೀಹರಿ ನಿರ್ದೇಶನದ, ಎಸ್‌ ಪೂರ್ಣಚಂದ್ರ ನಾಯ್ಡು, ಶ್ರೀಕಾಂತ್‌ ವೀರಮಾಚಿನೇನಿ ನಿರ್ಮಾಣದ ಸಿನಿಮಾ ಇದು.

26

ಈ ಕುರಿತ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಪೇಂದ್ರ, 'ನಿಮ್ಮ ಊಹೆಗಳೆಲ್ಲ ತಲೆ ಕೆಳಗಾಗುವಂತೆ ಈ ಚಿತ್ರವಿದೆ. ವೇದಿಕಾ ಈ ಚಿತ್ರದಲ್ಲಿ ನನ್ನ ಆಟ ಆಡಿಸ್ತಾರೆ. ಚಿತ್ರದ ತುಂಬ ಗ್ಲಾಮರಸ್‌ ಹುಡುಗಿಯರಿದ್ದಾರೆ. ಮಲೇಶ್ಯಾ, ಥೈಲ್ಯಾಂಡ್‌ಗಳಲ್ಲಿ ಶೂಟಿಂಗ್‌ ನಡೆದಿದೆ' ಎಂದರು. 

36

'ಹೋಮ್​ ಮಿನಿಸ್ಟರ್' ಶೀರ್ಷಿಕೆ ನೋಡಿದರೆ ಇದು ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಎನಿಸಬಹುದು. ಆದರೆ ಅಸಲಿ ವಿಚಾರ ಬೇರೆಯೇ ಇದೆ. ಇದು ವಿಭಿನ್ನವಾದಂತಹ ಪ್ರಯತ್ನ. ಸಿನಿಮಾ ನೋಡಿದರೆ ಜನರಿಗೆ ಗೊತ್ತಾಗುತ್ತದೆ. ನಾವು ಮಾಡಿದ ಸಿನಿಮಾವನ್ನು ನಾವೇ ಹೊಗಳಬಾರದು. 

46

ಹೋಮ್​ ಮಿನಿಸ್ಟರ್​ ಎಂಬ ಟೈಟಲ್​ ಕೇಳಿ ಥಿಯೇಟರ್​ ಒಳಗೆ ಹೋದರೆ ನೀವು ಶಾಕ್​ ಆಗ್ತೀರಿ. ಅಲ್ಲಿ ಬೇರೆಯದೇ ಹೋಮ್​ ಮಿನಿಸ್ಟರ್​ ಇರುತ್ತಾರೆ. ಈ ಸಿನಿಮಾದಲ್ಲಿ ಅದೇ ಸಸ್ಪೆನ್ಸ್​. ನನಗಿಂತ ವೇದಿಕಾ ಪಾತ್ರ ಹೆಚ್ಚು ಚೆನ್ನಾಗಿದೆ. ಸಿನಿಮಾದಲ್ಲಿ ಅವರು ನನ್ನನ್ನು ಆಟ ಆಡಿಸ್ತಾರೆ. ಅವರು ತುಂಬ ಚೆನ್ನಾಗಿ ನಟಿಸಿದ್ದಾರೆ. 

56

ಹಲವು ಹುಡುಗಿಯರು ಈ ಸಿನಿಮಾದಲ್ಲಿ ಇದ್ದಾರೆ. ನಮ್ಮ ನಿರ್ಮಾಪಕರಿಗೆ ಗ್ಲಾಮರ್​ ಎಂದರೆ ಇಷ್ಟ. ಮಲೇಷಿಯಾ, ಥಾಯ್ಲೆಂಡ್​ನಲ್ಲಿ ಶೂಟಿಂಗ್​ ಮಾಡಲಾಗಿದೆ ಎಂದು ಉಪೇಂದ್ರ ತಿಳಿಸಿದ್ದಾರೆ. ಚಿತ್ರದ ನಾಯಕಿ ವೇದಿಕಾ ಮಾತನಾಡಿ, ನಾನು ರಿಪೋರ್ಟರ್‌ ಪಾತ್ರ ಮಾಡುತ್ತಿದ್ದೇನೆ. ಪರ್ಫಾರ್ಮೆನ್ಸ್‌ಗೆ ಅವಕಾಶ ಇರುವ ಚಿತ್ರವಿದು’ ಎಂದರು.

66

ಇನ್ನು, ತಮ್ಮ ನಿರ್ದೇಶನದ ಹೊಸ ಸಿನಿಮಾದ ಅಧಿಕೃತ ಘೋಷಣೆಯನ್ನು ಮಾರ್ಚ್ 10ರಂದು ಮಾಡುತ್ತೇನೆ ಎಂದು ಉಪೇಂದ್ರ ತಿಳಿಸಿದ್ದಾರೆ. ಉಪ್ಪಿ ಜನ್ಮದಿನದಂದು ಸೋಷಿಯಲ್‌ ಮೀಡಿಯಾದಲ್ಲಿ 'ಉಪ್ಪಿ 3' ಎಂಬಂತೆ ಕಾಣಿಸುತ್ತಿದ್ದ ಮೂರು ನಾಮವುಳ್ಳ ವಿಶಿಷ್ಟ ರೀತಿಯ ಪೋಸ್ಟರ್‌ ಬಿಡುಗಡೆ ಆಗಿತ್ತು.

Read more Photos on
click me!

Recommended Stories