ಈ ಬಗ್ಗೆ ಮಾತನಾಡಿದ ಶ್ರೀನಿ, ‘ಸಿನಿಮಾಕ್ಕೆ ಜನ ನೀಡುತ್ತಿರುವ ರೆಸ್ಪಾನ್‌ಸ್ ನೋಡಿ ಭಾಳ ಖುಷಿ ಆಗ್ತಿದೆ. ನಿನ್ನೆ ಒಂದೇ ದಿನ 8 ಶೋಗಳು ಹೌಸ್‌ಫುಲ್ ಆಗಿವೆ. ಸೋಷಿಯಲ್ ಮೀಡಿಯಾಗಳಲ್ಲಿ, ಪರ್ಸನಲ್ ಆಗಿ ಜನರ ಮೆಚ್ಚುಗೆ ಹರಿದು ಬರುತ್ತಲೇ
ಇದೆ.
ಗಳಿಕೆಯಲ್ಲಿ ಈಗಾಗಲೇ ಶೇ.60ರಷ್ಟು ಸೇಫ್ ಆಗಿದ್ದೀವಿ. ನಾವೀಗ ನಮಗೆ ಇನ್ನಷ್ಟು ಥಿಯೇಟರ್ ಬೇಕು ಅಂತ ಜಗಳ ಮಾಡ್ತಿದ್ದೀವಿ. ಕಳೆದ ವಾರ ಹೆಚ್ಚು ಸಿನಿಮಾ ಬಿಡುಗಡೆಯಾದ ಕಾರಣ 50 ಸೆಂಟರ್‌ಗಳಲ್ಲಷ್ಟೇ ಸಿನಿಮಾ ರಿಲೀಸ್ ಮಾಡೋದು ಸಾಧ್ಯವಾಯ್ತು.
ಆದರೆ ಈ ವಾರ 120 ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನವಾಗುವ ವಿಶ್ವಾಸ ಇದೆ. ಶಿವಮೊಗ್ಗದಲ್ಲಿ ಕರ್ಫ್ಯೂ ಇದ್ದ ಕಾರಣ
ಈ ಸೋಮವಾರದಿಂದಷ್ಟೇ ರಿಲೀಸ್ ಮಾಡೋದಕ್ಕಾಯ್ತು.
ಮಂಡ್ಯ, ಮೈಸೂರು, ಹಾಸನ ಮೊದಲಾದ ಕಡೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರಲೇ ಇಲ್ಲ. ಹೀಗಾಗಲು ಕಾರಣ ಬೇರೆ ಭಾಷೆಯ ಸಿನಿಮಾ ರಿಲೀಸ್.
ನಾನು ಹೇಳೋದು ನಮ್ಮ ಕನ್ನಡ ಸಿನಿಮಾ ಮೊದಲು ನೋಡಿ ಅಂತ. ಇಷ್ಟೊಳ್ಳೆ ಕಂಟೆಂಟ್‌ಅನ್ನು ನಮ್ಮ ಜನಕ್ಕೋಸ್ಕರವೇ ಸಿದ್ಧಪಡಿಸಿರುವಾಗ ಮೊದಲ ಮಾನ್ಯತೆ ನಮ್ಮ ಸಿನಿಮಾಕ್ಕೆ ಕೊಡಿ ಅನ್ನೋದು ಕೋರಿಕೆ. ಇದರ
ಜೊತೆಗೆ ರಮ್ಯಾ ಅವರು ನಮ್ಮ ಸಿನಿಮಾ ನೋಡಿ ಮೆಚ್ಚಿಕೊಂಡದ್ದು ಖುಷಿ ಹೆಚ್ಚಿಸಿತು’ ಎನ್ನುತ್ತಾರೆ.
ಓಲ್‌ಡ್ಮಾಂಕ್ ನೋಡಿ ಓಲ್‌ಡ್ಮಾಂಕ್ 2ಗೆ ಜನ ಬೇಡಿಕೆ ಇಡ್ತಿದ್ದಾರೆ. ಆದರೆ ಅದಕ್ಕೂ ಮೊದಲು ಬೀರಬಲ್ 2 ಬೇಗ ರಿಲೀಸ್ ಮಾಡದಿದ್ರೆ ಜನ ನನ್ನ ಕೊಲೆ ಮಾಡ್ತಾರೆ’ ಎಂದೂ ಶ್ರೀನಿ ಹೇಳಿದ್ದಾರೆ.
ರಮ್ಯಾ ಮೆಚ್ಚುಗೆ ‘ಓಲ್‌ಡ್ಮಾಂಕ್’ ಚಿತ್ರ ನೋಡಿ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಓಲ್‌ಡ್ಮಾಂಕ್ ನೋಡಿ ಕಿಕ್ ತಗೊಳ್ಳಿ, ನಾನು ಸಖತ್ತಾಗಿ ಎನ್‌ಜಾಯ್ ಮಾಡಿದೆ ಅಂದಿದ್ದಾರೆ. ಜೊತೆಗೆ ಶ್ರೀನಿ ಅವರ ನಟನೆಗೆ ಶಹಭಾಸ್ ಅಂದಿದ್ದಾರೆ.