'ಯಜಮಾನ'ನನ್ನು ಭೇಟಿ ಮಾಡಿದ ಉಪಾಧ್ಯಕ್ಷ; ಚಿಕ್ಕಣ್ಣ ಕೋಟಿ ಮುಟ್ಟೋದರಲ್ಲಿ ಅನುಮಾನವಿಲ್ಲ ಎಂದ ನೆಟ್ಟಿಗರು!

Published : Feb 02, 2024, 02:24 PM ISTUpdated : Feb 02, 2024, 02:52 PM IST

ಬಾಕ್ಸ್ ಆಫೀಸ್ ಕಲೆಕ್ಷನ್ ಮುಟ್ಟಿದ ಉಪಾಧ್ಯಕ್ಷ. ಚಿಕ್ಕಣ್ಣ ಮತ್ತು ಮಲೈಕಾಗೆ ಶುಭ ಹಾರೈಸಿದ ನಟ ದರ್ಶನ್. 

PREV
16
'ಯಜಮಾನ'ನನ್ನು ಭೇಟಿ ಮಾಡಿದ ಉಪಾಧ್ಯಕ್ಷ; ಚಿಕ್ಕಣ್ಣ ಕೋಟಿ ಮುಟ್ಟೋದರಲ್ಲಿ ಅನುಮಾನವಿಲ್ಲ ಎಂದ ನೆಟ್ಟಿಗರು!

ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯ ನಟ ಚಿಕ್ಕಣ್ಣ ಈಗ ಚಾಕೋಲೇಟ್ ಹೀರೋ ಆಗಿದ್ದಾರೆ. ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಸಿನಿಮಾ ಸೂಪರ್ ಹಿಟ್ ಆಗಿದೆ.

26

ಸ್ಮಿತಾ ಉಮಾಪತಿ ನಿರ್ಮಾಣ ಮಾಡಿರುವ ಉಪಾಧ್ಯಕ್ಷ ಚಿತ್ರದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ನಟಿ ಮಲೈಕಾ ನಟಿಸಿದ್ದಾರೆ.

36

ಕಾಮಿಡಿ, ಲವ್ ಆಂಡ್ ಫ್ಯಾಮಿಲಿ ಡ್ರಾಮಾ ಇರುವ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೂರೇ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿದೆ.

46

ಸದ್ಯ ಚಿಕ್ಕಣ್ಣ ಮತ್ತು ಮಲೈಕಾ ನಟ ದರ್ಶನ್‌ರನ್ನು ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದೊಡ್ಡ ಸ್ಟಾರ್‌ ನಟರು ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ.

56

ಚಿತ್ರದ ಹಾಡು ಹೇಳಿದಂತೆ ನಿಜಕ್ಕೂ ಪುಣ್ಯಾತ್ಮ. ನಿಮ್ಮ ಸಪೋರ್ಟ್‌ಗೆ ನಾವು ಎಂದೂ ಮರೆಯುವುದಿಲ್ಲ ಎಂದು ಮಲೈಕಾ ಪೋಸ್ಟ್ ಹಾಕಿದ್ದಾರೆ. 

66

ಕೆಲವು ದಿನಗಳ ಹಿಂದೆ ನಟ ಯಶ್‌ ಮತ್ತು ರಾಧಿಕಾ ಪಂಡಿತ್‌ರನ್ನು ಭೇಟಿ ಮಾಡಿ ಅವರ ಮನೆಯಲ್ಲಿ ತಿಂಡಿ ತಿನ್ನುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದರು. 

Read more Photos on
click me!

Recommended Stories