ರಾಜಹುಲಿನ ಭೇಟಿ ಮಾಡಿದ ಉಪಾಧ್ಯಕ್ಷ; ಅತ್ತಿಗೆ ಮಾಡಿದ ತಿಂಡಿ ಹೇಗಿತ್ತು ಎಂದ ನೆಟ್ಟಿಗರು!

First Published | Jan 29, 2024, 10:33 AM IST

ರಾಜಹುಲಿ ವಿತ್ ಉಪಾಧ್ಯಕ್ಷ ಒಟ್ಟಿಗೆ ತಿಂಡಿ ಮಾಡುತ್ತಿರುವ ಫೋಟೋ ವೈರಲ್. ಬಾಸ್‌ ಬ್ಲೆಸಿಂಗ್ ಸಿಗ್ತು ಎಂದ ಫ್ಯಾನ್ಸ್‌. 

ಸ್ಮಿತಾ ಉಮಾಪತಿ ನಿರ್ಮಾಣದ ಉಪಾಧ್ಯಕ್ಷ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿಕ್ಕಣ್ಣ ಮತ್ತು ಮಲೈಕಾ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಚಿತ್ರವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. 

ಚಿತ್ರದ ಯಶಸ್ಸಿನಲ್ಲಿರುವ ಚಿಕ್ಕಣ್ಣ ಮತ್ತು ಮಲೈಕಾ ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ರನ್ನು ಭೇಟಿ ಮಾಡಿದ್ದಾರೆ.

Tap to resize

ಬೆಂಗಳೂರಿನಲ್ಲಿ ಇರುವ ಯಶ್ ನಿವಾಸದಲ್ಲಿ ಚಿಕ್ಕಣ್ಣ ಮತ್ತು ಮಲೈಕಾ ಕಾಣಿಸಿಕೊಂಡಿದ್ದಾರೆ. ಯಶ್, ರಾಧಿಕಾ, ಚಿಕ್ಕಣ್ಣ ಮತ್ತು ಮಲೈಕಾ ಒಟ್ಟಿಗೆ ಊಟ ಮಾಡಿದ್ದಾರೆ.

ತಟ್ಟೆಯಲ್ಲಿ ವಿವಿಧ ತಿಂಡಿಗಳನ್ನು ನೋಡಿ ನೆಟ್ಟಿಗರು ವಾವ್ ಅತ್ತಿಗೆ ರಾಧಿಕಾ ಪಂಡಿತ್ ಸೂಪರ್ ಆಗಿ ಅಡುಗೆ ಮಾಡಿದ್ದಾರಾ? ರುಚಿ ಹೇಗಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಉಪಾಧ್ಯಕ್ಷ ಚಿತ್ರದಲ್ಲಿ ಚಿಕ್ಕಣ್ಣ ಮತ್ತು ಮಲೈಕಾ ಅದ್ಭುತವಾಗಿ ನಟಿಸಿದ್ದಾರೆ. ಆರಂಭದಿಂದ ಅಂತ್ಯದವರೆಗೂ ಚಿತ್ರರಂಗದಲ್ಲಿರುವ ಪ್ರತಿಯೊಬ್ಬ ಸ್ಟಾರ್ ನಟರನ್ನು ನೆನಪು ಮಾಡಿಕೊಂಡು ಅವರ ಡೈಲಾಗ್‌ ಬಳಸಿದ್ದಾರೆ. 

ಅಲ್ಲದೆ ಅಧ್ಯಕ್ಷ ನಿಲ್ಲದೆ ಉಪಾಧ್ಯಕ್ಷ ಹೇಗಿರುತ್ತಾನೆ? ಹೀಗಾಗಿ ಚಿಕ್ಕಣ್ಣ ಸಂಕಷ್ಟದಲ್ಲಿ ಸಿಲುಕಿಕೊಂಡಾಗ ಮೊದಲು ಸಹಾಯಕ್ಕೆ ಬಂದಿದ್ದು ಓನ್ ಆಂಡ್ ಓನ್ ಅಧ್ಯಕ್ಷ ಚಂದ್ರಶೇಖರ್‌ ಉರ್ಫ್‌ ಶರಣ್. 

ಕಿರಾತಕ, ರಾಜಹುಲಿ ಸಿನಿಮಾದಿಂದ ಚಿಕ್ಕಣ್ಣ ಸಿನಿ ಜರ್ನಿಗೆ ಸಾಥ್ ಕೊಟ್ಟಿದ್ದು ಯಶ್. ಅದಾದ ಮೇಲೆ ಮಾಸ್ಟರ್‌ ಪೀಸ್‌ ಸಿನಿಮಾ ಕೂಡ ಹಿಟ್. ಹಲವು ಸಲ ಬೈಯ ಯಶ್‌ ಸಪೋರ್ಟ್‌ಗೆ ಚಿಕ್ಕಣ್ಣ ಮಾತನಾಡಿದ್ದಾರೆ.

Latest Videos

click me!