ಹಂಪಿ ಉತ್ಸವ 2024ಕ್ಕೆ ನಟ ದರ್ಶನ್, ಡಾಲಿ ಧನಂಜಯ್, ರವಿಚಂದ್ರನ್ ಸೇರಿ ಸ್ಟಾರ್ ನಟರ ಆಗಮನ

First Published | Jan 28, 2024, 11:49 AM IST

ವಿಜಯನಗರ (ಜ.28): ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ತಾರಾ ಮೆರಗು ಹೆಚ್ಚಿಸಲು ನಿಗಾವಹಿಸಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ನಟರು, ಆಂಕರ್ ಹಾಗೂ ಹಾಸ್ಯ ನಟರು ಕೂಡ ಭಾಗಿಯಾಗಲಿದ್ದಾರೆ.
 

ದಕ್ಷಿಣ ಭಾರತದಲ್ಲಿ ಮುಸ್ಲಿಂ ದಾಳಿ ಹಾಗೂ ಆಡಳಿತವನ್ನು ಹತ್ತಿಕ್ಕಿ ಹಿಂದೂ ಧರ್ಮದ ಉಳಿವಿಗಾಗಿ ಶ್ರಮಿಸಿದ ಸಾಮ್ರಾಜ್ಯವೆಂದರೆ ಅದು ವಿಜಯನಗರ ಸಾಮ್ರಾಜ್ಯ ಎಂದು ಹೇಳಬಹುದು. ಈ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಸರ್ಕಾರ ಉತ್ಸವವನ್ನು ಆಚರಿಸುತ್ತದೆ.
 

ರಾಜ್ಯ ಸರ್ಕಾರ ಇತ್ತೀಚಿನ ಕೆಲವು ವರ್ಷಗಳಿಂದ ಹಂಪಿ ಉತ್ಸವ ಆಚರಣೆ ಮಾಡುತ್ತಾ ಬಂದಿದ್ದು, ಈಗ ಉತ್ಸವಕ್ಕೆ ತಾರಾ ಮೆರಗು ಕೂಡ ಜೋರಾಗುತ್ತಿದೆ.
 

Tap to resize

ಕನ್ನಡದ ಟಾಪ್ ಹಿರೋಗಳು,‌ ಹಾಸ್ಯ ನಟರು ಮತ್ತು  ಹಾಡುಗಾರರು ಉತ್ಸವದ ಮೆರಗು ಹೆಚ್ಚಿಸಲಿದ್ದಾರೆ. ಇನ್ನು ಹಂಪಿ ಉತ್ಸವ ನೋಡುವುದಕ್ಕೆ ಲಕ್ಷಾಂತರ ಜನರು ಸೇರಲಿದ್ದಾರೆ.
 

ಫೆಬ್ರವರಿ 2, 3 ಮತ್ತು 4ರಂದು ನಡೆಯಲಿರೋ ಹಂಪಿ ಉತ್ಸವಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ದರ್ಶನ್, ಡಾಲಿ ಧನಂಜಯ, ಅಜಯ್ ರಾವ್, ನಟಿ ಅನುಶ್ರೀ, ಹಾಸ್ಯ ನಟ ಸಾಧು ಕೋಕಿಲ ಸೇರಿದಂತೆ ಹಲವು ನಟ- ನಟಿಯರು‌ ಬರುತ್ತಿದ್ದಾರೆ.
 

ಹಂಪಿ ಉತ್ಸವವನ್ನು ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
 

ಈಗಾಗಲೇ ಹಂಪಿ ಉತ್ಸವಕ್ಕೆ ವೇದಿಕೆ ಸಿದ್ದತೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ವಿಜಯನಗರ ಜಿಲ್ಲಾಡಳಿತ ಮಾಡಿಕೊಂಡಿದೆ. ಈ ಉತ್ಸವ ನೋಡಲು ರಾಜ್ಯಾದ್ಯಂತ ಜನರು ಆಗಮಿಸಲಿದ್ದಾರೆ.
 

ಹಂಪಿ ಉತ್ಸವಕ್ಕೆ ಒಟ್ಟು 5 ವೇದಿಕೆಯನ್ನು ನಿರ್ಮಿಸಲಾಗುತ್ತಿದೆ. ಎಲ್ಲ ವೇದಿಕೆಗಳಲ್ಲಿಯೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ,  ಗ್ರಾಮೀಣ ಸೊಗಡಿನ ಕ್ರೀಡೆಗಳು ಕೂಡ ನಡೆಯಲಿವೆ.
 

ಮುಜುರಾಯಿ ಇಲಾಖೆಗೆ ಒಳಪಟ್ಟ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ಬಂದಿದೆ. ಬರ್ಮುಡ ಚಡ್ಡಿ, ಜೀನ್ಸ್‌ ಧರಿಸಿ ಬಂದವರು, ಇನ್ನು ಮುಂದೆ ಪಂಚೆ ತೊಡುವುದು ಕಡ್ಡಾಯ.
 

Latest Videos

click me!