ಕನ್ನಡದ ಹೆಸರಾಂತ ಹಾಸ್ಯನಟ ಮತ್ತು ನಾಯಕನಟ ನಾಗಭೂಷಣ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ, ಕಲಾವಿದೆ, ಗ್ರಾಫಿಕ್ ಡಿಸೈನರ್ ಪೂಜಾ ಪ್ರಕಾಶ್ ಬಾಸ್ಮೆ ಜೊತೆ ಇಂದು ಬೆಳಗಾವಿಯಲ್ಲಿ ವಿವಾಹ ನೆರವೇರಿದೆ.
28
ನಾಗಭೂಷಣ್ ಇತ್ತೀಚೆಗೆ ಟಗರುಪಲ್ಯ ಚಿತ್ರದಲ್ಲಿ ನಾಯಕನಾಗಿ ನಟಿ ಅಮೃತಾ ಪ್ರೇಮ್ ಜೊತೆಗೆ ನಟಿಸಿದ್ದರು. ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಇನ್ಸ್ಟಾಗ್ರಾನಲ್ಲಿ ಶೇರ್ ಮಾಡಿದ್ದ ನಾಗಭೂಷಣ್, ಪೂಜಾಭೂಷಣ ಕಲ್ಯಾಣ ಎಂದು ಪತ್ರಿಕೆಯಲ್ಲಿ ಬರೆದಿದ್ದರು.
38
ಇಕ್ಕಟ್, ಕೌಸಲ್ಯ ಸುಪ್ರಜಾ ರಾಮ, ಬಡವ ರಾಸ್ಕಲ್, ಲಕ್ಕಿ ಮ್ಯಾನ್ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಭೂಷಣ್ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
48
ಢಾಲಿ ಧನಂಜಯ್, ವಾಸುಕಿ ವೈಭವ್ ಸೇರಿದಂತೆ ಹಲವು ನಟ ನಟಿಯರು ಬೆಳಗಾವಿಯಲ್ಲಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
58
ನಿನ್ನೆ ಸಂಜೆ ನಡೆದ ನಾಗಭೂಷಣ್ ಸಂಗೀತ್ ಕಾರ್ಯಕ್ರಮದಲ್ಲಿ ವಾಸುಕಿ ವೈಭವ್ ಹೇಳಿಕೊಡುವ 'ಬಾ ಬೆಳಕಾಗಿ ಬಾ' ಹಾಡನ್ನು ಭೂಷಣ್ ಹೇಳುವುದನ್ನು ಕಾಣಬಹುದು.
68
ಇತ್ತೀಚೆಗೆ ಇವರ ಹೊಸ ಸಿನಿಮಾ ವಿದ್ಯಾಪತಿ ಘೋಷಣೆಯಾಗುತ್ತಿದ್ದು, ಪೋಸ್ಟರ್ ಬಿಡುಯಾಗಿದೆ. ಇದನ್ನು ಡಾಲಿ ಧನಂಜಯ್ ನಿರ್ಮಿಸಲಿದ್ದಾರೆ.
78
ಇದೀಗ ಪೂಜಾ ಪ್ರಕಾಶ್ ಯಾರು ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಈಕೆ ಕಲಾವಿದೆಯಾಗಿದ್ದು, ಅವರ ಫ್ರೊಫೈಲ್‌ನಲ್ಲಿ ಸಾಕಷ್ಟು ಸಿನಿಮಾ ನಟರ ಚಿತ್ರ ಬಿಡಿಸಿದ್ದನ್ನು ಕಾಣಬಹುದು.
88
ಪೂಜಾ ಕಲ್ಲಿನಲ್ಲಿ ರಚಿಸಿದ 13.5 ಅಡಿ ಉದ್ದದ ರಾಕಿ ಭಾಯ್ ಯಶ್ ಚಿತ್ರ. ಇದಕ್ಕೆ ಅವರು ಬಂದರು, ಕನಸು ಕಂಡರು, ಗೆದ್ದರು ಮತ್ತು ಆವರಿಸಿಕೊಂಡರು ಎಂದು ಕ್ಯಾಪ್ಶನ್ ನೀಡಿದ್ದಾರೆ.