ಉಗ್ರಾಯುಧಂ ಚಿತ್ರಕ್ಕೆ ಎಂಟ್ರಿ ಕೊಟ್ಟ ಕಾಂತಾರ ಬೆಡಗಿ: ಶ್ರೀಮುರಳಿಗೆ ಸಪ್ತಮಿ ಗೌಡ ಜೋಡಿ!

Published : Apr 01, 2026, 05:48 PM IST

ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಉಗ್ರಾಯುಧಂ ಸುಮಾರು 500 ವರ್ಷಗಳ ಹಿಂದಿನ ಕಥೆಯನ್ನು ಆಧರಿಸಿದೆ. ಇದೊಂದು ಐತಿಹಾಸಿಕ ಚಿತ್ರ.

PREV
15
ಸಪ್ತಮಿ ಗೌಡ ನಾಯಕಿ

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ‘ಉಗ್ರಾಯುಧಂ’ ಚಿತ್ರಕ್ಕೆ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆ ಆಗಿದ್ದು, ಸದ್ಯದಲ್ಲೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

25
ಐತಿಹಾಸಿಕ ಚಿತ್ರ

ಪುನೀತ್‌ ರುದ್ರನಾಗ್‌ ನಿರ್ದೇಶನದ ಈ ಚಿತ್ರವನ್ನು ಜಯರಾಮ್‌ ದೇವಸಮುದ್ರ ನಿರ್ಮಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ಸುಮಾರು 500 ವರ್ಷಗಳ ಹಿಂದಿನ ಕತೆಯನ್ನು ಒಳಗೊಂಡಿದೆ.

35
ದೊಡ್ಡ ಮಟ್ಟದಲ್ಲಿ ನಿರ್ಮಾಣ

ಮೊದಲ ಬಾರಿಗೆ ಈ ರೀತಿಯ ಜಾನರ್‌ ಚಿತ್ರಕ್ಕೆ ಶ್ರೀಮುರಳಿ ನಾಯಕನಾಗಿದ್ದಾರೆ. ಈಗ ಚಿತ್ರೀಕರಣದ ಹಂತದಲ್ಲಿರುವಾಗ ನಾಯಕಿಯಾಗಿ ಸಪ್ತಮಿ ಗೌಡ ಜೊತೆಯಾಗಿದ್ದಾರೆ. ಈ ಚಿತ್ರವು ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ.

45
700 ವರ್ಷ ಹಿಂದಿನ ಕಥೆ

ಈ ಉಗ್ರಾಯುಧಂ ಸಿನಿಮಾದ್ದು 700 ವರ್ಷ ಹಿಂದಿನ ಐತಿಹಾಸಿಕ ಕಥೆ. ಸಕಲೇಶಪುರದ 148 ಎಕರೆಗಳಷ್ಟು ವಿಶಾಲವಾದ ಎಸ್ಟೇಟ್‌ನಲ್ಲಿ ಈ ಸಿನಿಮಾದ ಶೂಟಿಂಗ್‌ ನಡೆಯಲಿದೆ ಎಂದರು ಪುನೀತ್‌.

55
ಕಥೆ ಬಹಳ ಇಷ್ಟವಾಯ್ತು

ಐತಿಹಾಸಿಕ ಕಥೆಗಾಗಿ ಕಾಯುತ್ತಿದ್ದ ನನಗೆ ಉಗ್ರಾಯುಧಂ ಕಥೆ ಬಹಳ ಇಷ್ಟವಾಯ್ತು. ನನ್ನ ಇನ್ನೊಂದು ಸಿನಿಮಾ ಪರಾಕ್‌ಗೂ ಮೊದಲೇ ಈ ಸಿನಿಮಾದ ಶೂಟಿಂಗ್‌ ನಡೆಯಲಿದೆ. ಇದೇ ಚಿತ್ರ ಮೊದಲು ರಿಲೀಸ್‌ ಆಗಲಿದೆ ಎಂದರು ಶ್ರೀಮುರಳಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories