ನಟ ರಕ್ಷಿತ್ ಶೆಟ್ಟಿ ಒಡೆತನದ ಪರಂವಾಹ್ ಸ್ಟುಡಿಯೋಗೆ ದೆಹಲಿ ಹೈಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ. 2012ರ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ MTR ಮ್ಯೂಸಿಕ್ ಸಂಸ್ಥೆಯ ಹಾಡನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಅಸಲಿ ವಿಷ್ಯ ಇಲ್ಲಿದೆ!
ನಟಿ ರಶ್ಮಿಕಾ ಮಂದಣ್ಣ ಅವರ ಮದುವೆಯ ಬಳಿಕ ರಕ್ಷಿತ್ ಶೆಟ್ಟಿ ಸಕತ್ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಇವರ ಎಂಗೇಜ್ಮೆಂಟ್ ರಶ್ಮಿಕಾ ಜೊತೆ ನಡೆದು ಕೊನೆಗೆ ಮದುವೆ ಮುರಿದುಬಿದ್ದ ಕಾರಣದಿಂದಾಗಿ. ಇದಕ್ಕಾಗಿ ರಕ್ಷಿತ್ ಶೆಟ್ಟಿ ಅವರ ರಿಯಾಕ್ಷನ್ ಏನು ಎನ್ನುವ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ನಡುವೆಯೇ, ಇದೀಗ ದೆಹಲಿ ಹೈಕೋರ್ಟ್ ನಟನಿಗೆ ಭಾರಿ ಶಾಕ್ ಕೊಟ್ಟಿದೆ.
26
25 ಲಕ್ಷ ರೂ ದಂಡ
ದೆಹಲಿಯ ಹೈಕೋರ್ಟ್ Rakshit Shetty ಅವರಿಗೆ 25 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದಕ್ಕೆ ಕಾರಣ ಬ್ಯಾಚುಲರ್ ಪಾರ್ಟಿ ಸಿನಿಮಾ. ಇವರ ವಿರುದ್ಧ ಎಂಟಿಆರ್ ಮ್ಯೂಸಿಕ್ ಸಂಸ್ಥೆಯು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಕಾರಣ, 2012ರಲ್ಲಿ ಬಿಡುಗಡೆಯಾಗಿದ್ದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ತಮ್ಮ ಹಾಡನ್ನು ಕದ್ದಿದ್ದಾರೆ ಎನ್ನುವ ಕಾರಣಕ್ಕೆ. ಈ ಚಿತ್ರದ ನಿರ್ಮಾಪಕರು ರಕ್ಷಿತ್ ಶೆಟ್ಟಿ.
36
ಭಾರಿ ದಂಡದ ಹಿನ್ನೆಲೆ
ಈ ಹಿನ್ನೆಲೆಯಲ್ಲಿ, ರಕ್ಷಿತ್ ಶೆಟ್ಟಿ ಒಡೆತನದ ಪರಂವಾಹ್ ಸ್ಟುಡಿಯೋಗೆ ದೆಹಲಿಯ ಕೋರ್ಟ್ ಭಾರಿ ದಂಡ ವಿಧಿಸಿದೆ. ಅತ್ಯಂತ ಚಿಕ್ಕ ಅವಧಿಯವರೆಗೆ ಮಾತ್ರ ಹಾಡನ್ನು ಬಳಸಲಾಗಿದೆ. ಇದು ಅಪರಾಧವಲ್ಲ ಎಂದು ರಕ್ಷಿತ್ ಶೆಟ್ಟಿ ಪರ ವಕೀಲರ ವಾದವನ್ನು ಕೋರ್ಟ್ ಮಾನ್ಯ ಮಾಡಲಿಲ್ಲ. ಬೇರೆ ಸಿನಿಮಾದಿಂದ ಒಂದು ಚಿಕ್ಕ ದೃಶ್ಯ ಕಾಪಿ ಮಾಡಿದರೂ ಅದು ಕಾಪಿರೈಟ್ ಉಲ್ಲಂಘನೆಯೇ ಆಗುತ್ತದೆ ಎಂದು ದಂಡ ವಿಧಿಸಿದೆ.
ಅಷ್ಟಕ್ಕೂ ಕರ್ನಾಟಕದ್ದೇ ಆಗಿರೋ MTR Music Company ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವ ಹಿಂದೆಯೂ ಉದ್ದೇಶವಿದೆ. ಬೆಂಗಳೂರಿನಲ್ಲಿ ಕಂಪೆನಿ ಇದ್ದರೂ, ಹಾಡನ್ನು ಕದ್ದಿರುವ ಬಗ್ಗೆ ಬೆಂಗಳೂರಿನಲ್ಲಿಯೇ FIR ದಾಖಲು ಆಗಿದ್ದರೂ, ಈ ಕಂಪೆನಿಯ ಕಾನೂನು ವ್ಯವಹಾರಗಳನ್ನು ನೋಡಿಕೊಳ್ಳುವುದು ದೆಹಲಿಯ ಕಂಪೆನಿ. ಲೀಗಲ್ ಟೀಮ್ ಇರುವುದು ದೆಹಲಿಯಲ್ಲಿ. ಇದೇ ಕಾರಣಕ್ಕೆ ದೆಹಲಿಯ ಕೋರ್ಟ್ನಲ್ಲಿ ಕೇಸ್ ದಾಖಲು ಮಾಡಲಾಗಿತ್ತು.
56
ಹಿಟ್ ಸಿನಿಮಾಗಳ ರೈಟ್ಸ್
ಅಂದಹಾಗೆ, MTR ಮ್ಯೂಸಿಕ್ ಇದಾಗಲೇ ಕೆಜಿಎಫ್-2 ನಂಥ ಹಲವು ಹಿಟ್ ಸಿನಿಮಾಗಳ ರೈಟ್ಸ್ ಕೂಡ ಪಡೆದಿವೆ. ಇಂಟರೆಸ್ಟಿಂಗ್ ವಿಷ್ಯ ಏನೆಂದರೆ, ಈ ಕಂಪೆನಿ ಇದಾಗಲೇ ಕಾಪಿರೈಟ್ ಉಲ್ಲಂಘನೆಯ ಬಗ್ಗೆ ಹಲವು ಕೇಸ್ಗಳನ್ನು ಹಾಕಿ ಜಯ ಸಾಧಿಸಿದೆ.
66
ರಾಹುಲ್ ಗಾಂಧಿ ವಿರುದ್ಧವೂ ಕೇಸ್
2022ರಲ್ಲಿ ಭಾರತ್ ಜೋಡೋ ಯಾತ್ರೆಯ ವಿಡಿಯೋಗಳಿಗೆ ಕೆಜಿಎಫ್ 2 ಸಿನಿಮಾದ ಮ್ಯೂಸಿಕ್ ಬಳಸಿದ್ದಕ್ಕಾಗಿ ಇದೇ ಸಂಸ್ಥೆ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇಟ್ ವಿರುದ್ಧ ಕಾಪಿರೈಟ್ ಕೇಸ್ ಹಾಕಿದ್ದು ಇಲ್ಲಿ ಉಲ್ಲೇಖಾರ್ಹ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.