ದಿಗಂತ್ ಎಡಗೈಗೆ ಕೈಜೋಡಿಸಿದ ಬ್ಲಿಂಕ್ ಮತ್ತು ಶಾಖಾಹಾರಿ ನಿರ್ಮಾಪಕರು!

Published : Apr 19, 2025, 05:12 PM ISTUpdated : Apr 19, 2025, 05:40 PM IST

ನಿರ್ಮಾಪಕ ರವಿಚಂದ್ರ ಎಜೆ, ಕಳೆದ ಆರು ತಿಂಗಳುಗಳಲ್ಲಿ ನೋಡಿದ ಸಿನಿಮಾಗಳಿಗಿಂತ ಈ ಸಿನಿಮಾ ಅತ್ಯುತ್ತಮವಾಗಿದೆ ಎಂದಿದ್ದಾರೆ. ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

PREV
15
ದಿಗಂತ್ ಎಡಗೈಗೆ ಕೈಜೋಡಿಸಿದ ಬ್ಲಿಂಕ್ ಮತ್ತು ಶಾಖಾಹಾರಿ ನಿರ್ಮಾಪಕರು!

ದಿಗಂತ್ ನಟನೆಯ, ಸಮರ್ಥ್ ಕಡಕೋಳ ನಿರ್ದೇಶನದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಬಹಳ ದಿನಗಳ ಹಿಂದೆಯೇ ಸಿದ್ಧವಾದರೂ ಬಿಡುಗಡೆ ಆಗಿರಲಿಲ್ಲ. ಇದೀಗ ಚಿತ್ರಕ್ಕೆ ಹೊಸ ಸಹ ನಿರ್ಮಾಪಕರು ಮತ್ತು ವಿತರಕರು ದೊರಕಿದ್ದಾರೆ. ದಿಗಂತ್‌ ಚಿತ್ರಕ್ಕೆ ಬಿಡುಗಡೆ ಭಾಗ್ಯ ದೊರಕಲಿದೆ.
 

25
Diganth

‘ಶಾಖಾಹಾರಿ’ ಸಿನಿಮಾ ನಿರ್ಮಿಸಿದ್ದ ರಾಜೇಶ್ ಕೀಳಂಬಿ ಸಹ ನಿರ್ಮಾಪಕರಾದರೆ, ‘ಬ್ಲಿಂಕ್‌’ ನಿರ್ಮಾಪಕ ರವಿಚಂದ್ರ ಎ.ಜೆ. ವಿತರಕರಾಗಿದ್ದಾರೆ. ಈ ಕುರಿತು ರಾಜೇಶ್ ಕೀಳಂಬಿ, ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಕಂಟೆಂಟ್ ಬಹಳ ಚೆನ್ನಾಗಿದೆ. 

35

ಹಾಗಾಗಿ ಈ ಸಿನಿಮಾಗೆ ಸಹ ನಿರ್ಮಾಪಕನಾಗಿದ್ದೇನೆ ಎಂದಿದ್ದಾರೆ. ರವಿಚಂದ್ರ ಎಜೆ, ಕಳೆದ ಆರು ತಿಂಗಳುಗಳಲ್ಲಿ ನೋಡಿದ ಸಿನಿಮಾಗಳಿಗಿಂತ ಈ ಸಿನಿಮಾ ಅತ್ಯುತ್ತಮವಾಗಿದೆ ಎಂದಿದ್ದಾರೆ. ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

45

ಚಿತ್ರದಲ್ಲಿ ನಿರೂಪ್ ಭಂಡಾರಿ: ಎಡಗೈ ಬಳಕೆದಾರರ  ಕುರಿತಾದ ವಿಶಿಷ್ಟ ಸಿನಿಮಾ ‘ಎಡಗೈಯೇ ಅಪಘಾತಕ್ಕೆ ಕಾರಣ’ದಲ್ಲಿ ನಿರೂಪ್ ಭಂಡಾರಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.

55

ನಿರೂಪ್ ಭಂಡಾರಿಯವರು ಈ ಚಿತ್ರದ ಕತೆ ಮತ್ತು ಪರಿಕಲ್ಪನೆಯನ್ನು ಮೆಚ್ಚಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದೆ.

Read more Photos on
click me!

Recommended Stories