ಬಾಲಿವುಡ್ ನಟಿ ಹುಮಾ ಖುರೇಷಿ ಇತ್ತೀಚೆಗೆ ಧರಿಸಿದ್ದ ಹರಿದು ಚಿಂದಿಯಾದ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಫ್ಯಾಷನ್ ಹೆಸರಿನಲ್ಲಿ ಗಮನ ಸೆಳೆಯಲು ಯತ್ನಿಸಿರುವ ನಟಿಯ ಈ ಡ್ರೆಸ್‌ನ ಬೆಲೆ ಕೇಳಿ ಫ್ಯಾನ್ಸ್ ಹೌಹಾರಿದ್ದಾರೆ. ಸೆಲೆಬ್ರಿಟಿಗಳ ವಿಚಿತ್ರ ಫ್ಯಾಷನ್ ಕುರಿತು ಚರ್ಚೆ ಹುಟ್ಟುಹಾಕಿದೆ
ಅದೊಂದು ಮಾತಿದೆ. ಶ್ರೀಮಂತರು ಹರಿದ ಬಟ್ಟೆ ಹಾಕಿದ್ರೆ ಎಷ್ಟು ಸಿಂಪಲ್ಮನುಷ್ಯನಪ್ಪಾ ಅಂತಾರೆ, ಅದೇ ಬಡವರು ಹಾಕಿದ್ರೆ ಗತಿ ಇಲ್ಲದವರು ಅಂತಾರೆ ಎನ್ನುವ ಮಾತಿದು. ಆದರೆ ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ ಅತಿ ಹೆಚ್ಚು ಮೈ ಕಾಣಿಸುವ ಸೆಲೆಬ್ರಿಟಿಗಳಿಗೆ ಹೆಚ್ಚೆಚ್ಚು ಬೆಲೆಯಾದ್ರೆ, ಹೆಚ್ಚು ಹೆಚ್ಚು ಹರಿದ ಬಟ್ಟೆ ಧರಿಸಿದ ತಾರೆಯರಿಗೂ ಅಷ್ಟೇ ಬೆಲೆ ಎನ್ನುವಂತೆ ಆಗಿಬಿಟ್ಟಿದೆ. ಸಾಮಾನ್ಯ ಹೆಣ್ಣುಮಕ್ಕಳು ಬಡತನದಿಂದಲೋ ಅಥವಾ ಇನ್ನಾವುದೇ ಕಾರಣಕ್ಕೆ ಸ್ವಲ್ಪ ಹರಿದ ಬಟ್ಟೆ ಹಾಕಿದ್ರೂ ಕೀಳಾಗಿ ನೋಡುವ ಜನರೇ ಸೆಲೆಬ್ರಿಟಿಗಳು ಇಂಥ ಬಟ್ಟೆ ಧರಿಸಿದಾಗ ಕಣ್ ಕಣ್ ಅರಳಿಸಿ ನೋಡುವುದು ಇದೆ.
25
ಫ್ಯಾಷನ್ ಹೆಸರಿನಲ್ಲಿ
ಹರಿದ ಜೀನ್ಸ್, ಹರಿದ ಟಾಪ್ ಎಲ್ಲವೂ ಮಾಮೂಲಾಗಿ ದಶಕಗಳೇ ಕಳೆದುಬಿಟ್ಟಿವೆ. ಸೆಲೆಬ್ರಿಟಿಗಳು ಫ್ಯಾಷನ್ ಹೆಸರಿನಲ್ಲಿ ಬಟ್ಟೆ ಹರಿದುಕೊಳ್ಳುವುದನ್ನು ನೋಡಿ, ಇಂಥ ನಟ-ನಟಿಯರನ್ನೇ ಫಾಲೋ ಮಾಡುವ, ಅವರನ್ನೇ ಆರಾಧ್ಯ ದೈವ ಎಂದುಕೊಳ್ಳುವ ದೊಡ್ಡ ವರ್ಗವೂ ಹರಿದ ಬಟ್ಟೆಗಳ ಮೊರೆ ಹೋಗುತ್ತಿರುವುದು ಹೊಸ ವಿಷಯವೇನಲ್ಲ.
35
ಚಿಂದಿ ಚಿತ್ರಾನ್ನ
ಆದರೆ, ಇದೀಗ ಒಂದು ಹಂತ ಮೀರಿ ಹರಿದ ಬಟ್ಟೆಯನ್ನು ತೊಟ್ಟು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸ್ತಾಳೆ ನಟಿ ಹುಮಾ ಖುರೇಷಿ (Huma Qureshi). ಯಶ್ ಅವರ ಟಾಕ್ಸಿಕ್ ಚಿತ್ರದಲ್ಲಿಯೂ ನಟಿಸಿರೋ ಬಾಲಿವುಡ್ ನಟಿ ಹುಮಾ ಈಗ ಸೋಷಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಿದ್ದಾರೆ. ಅರ್ಧಂಬರ್ಧ ಬಟ್ಟೆ ಹಾಕಿ ದೇಹ ಪ್ರದರ್ಶನ ಮಾಡುವವರು ಧಾರಾಳವಾಗಿ ಇಂದು ಕಾಣಿಸುತ್ತಾರೆ. ಆದರೆ ಹುಮಾ ಹಾಕಿರುವ ಬಟ್ಟೆ ಅಂಥದ್ದಲ್ಲ. ಬದಲಿಗೆ ಸಂಪೂರ್ಣ ಹರಿದು ಚಿಂದಿಚಿತ್ರಾನ್ನವಾಗಿದೆ.
ಆದರೆ ಅಸಲಿ ವಿಷ್ಯ ಇರೋದು ಅಲ್ಲಲ್ಲ. ಬದಲಿಗೆ ಈ ಡ್ರೆಸ್‌ನ ಬೆಲೆಯದ್ದು. ಈ ಡ್ರೆಸ್ಗೆ 65 ಸಾವಿರ ರೂಪಾಯಿ ಅಂತೆ! ಅಂಥದ್ದೇನಿದೆ ಈ ಡ್ರೆಸ್ನಲ್ಲಿ ಕೇಳಿದ್ರೆ ಬಹುಶಃ ಉತ್ತರ ಯಾರ ಬಳಿಯೂ ಇಲ್ಲ. ಬಟ್ಟೆ ಹರಿದರೆ ಹೆಚ್ಚು ಡಿಮಾಂಡ್ ಅನ್ನೋದು ಈಕೆಯ ಈ ಡ್ರೆಸ್ನಿಂದ ಈಗ ತಿಳಿದು ಬರುತ್ತಿದೆ.
55
ಡಿಫರೆಂಟಾಗಿ ಕಾಣಿಸಿಕೊಂಡ ನಟಿ
ಅಷ್ಟಕ್ಕೂ ಸೆಲೆಬ್ರಿಟಿಗಳೇ ಹಾಗೆ. ಅವರು ಮೂಲೆ ಗುಂಪು ಆಗುತ್ತಿದ್ದಾರೆ ಎಂದು ತಿಳಿದ ತಕ್ಷಣ, ತಮ್ಮ ಅಮೋಘ ಡ್ರೆಸ್ ಪ್ರದರ್ಶನದ ಮೂಲಕ ಟ್ರೋಲ್ ಆಗಿ ಪ್ರಚಾರ ಗಿಟ್ಟಿಸಿಕೊಳ್ಳೋದು ಹೊಸ ವಿಷಯವೇನಲ್ಲ. ಆದರೆ ಎಷ್ಟು ಮೈ ತೋರಿಸಲು ಸಾಧ್ಯವೋ ಅಷ್ಟು ತೋರಿಸಿ ಪ್ರಚಾರ ಗಿಟ್ಟಿಸಿಕೊಳ್ಳುವವರ ನಡುವೆ ಹುಮಾ ಖುರೇಷಿ ಡಿಫರೆಂಟ್ ಆಗಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾದ ಗಮನ ಸೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.