Actors Death in 2025: ಈ ವರ್ಷ ಇಹಲೋಕ ತ್ಯಜಿಸಿದ ಚಂದನವನದ ತಾರೆಯರು

Published : Dec 21, 2025, 05:00 PM IST

Actors Death in 2025: ಈ ವರ್ಷ ಹಲವಾರು ತಾರೆಯರು ಇಹಲೋಕ ತ್ಯಜಿಸಿದ್ದಾರೆ. ಕೆಲವರು ವೃದ್ಧಾಪ್ಯದ ಕಾರಣದಿಂದ ಸಾವನ್ನಪ್ಪಿದರೆ, ಇನ್ನೂ ಕೆಲವರು ದಿಢೀರ್ ಆಗಿ ಸಾವನ್ನಪ್ಪಿದ್ದಾರೆ. ಅವರು ಯಾರ್ಯರು ನೋಡೋಣ.

PREV
112
ಬಿ. ಸರೋಜಾ ದೇವಿ

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ ಸರೋಜಾ ದೇವಿ ಅವರು ತಮ್ಮ 89ನೇ ವಯಸ್ಸಿನಲ್ಲಿ ವೃದ್ಧಾಪ್ಯದ ಕಾರಣದಿಂದ ಮರಣ ಹೊಂದಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ಇವರು ಜನಪ್ರಿಯತೆ ಪಡೆದಿದ್ದಾರೆ.

212
ಎಂ ಎಸ್. ಉಮೇಶ್

ಖ್ಯಾತ ಹಾಸ್ಯನಟ ಎಂ ಎಸ್. ಉಮೇಶ್ ಅವರು 80 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ಇವರು ನಾಲ್ಕನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಕೊನೆಗೂ ನಗಿಸುತ್ತಲೇ ಮರೆಯಾದರು.

312
ಹರೀಶ್ ರಾಯ್

ಕನ್ನಡದ ಖಳನಟ, ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ, ಕೆಜಿಎಫ್ ಚಾಚಾ ಖ್ಯಾತಿಯ ಹರೀಶ್ ರಾಯ್ 55ನೇ ವಯಸ್ಸಿನಲ್ಲಿ ಥೈರಾಯ್ಡ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ.

412
ರಾಜು ತಾಳಿಕೋಟೆ

ಚಂದನವನದ ಹಾಸ್ಯನಟ, ಬಿಗ್ ಬಾಸ್ ಸ್ಪರ್ಧಿ ರಾಜು ತಾಳಿಕೋಟೆ 62ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾದರು. ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಇವರು, ಆ ಸಂದರ್ಭದಲ್ಲೇ ಹೃದಯಾಘಾತಕ್ಕೆ ಒಳಗಾಗಿದ್ದರು.

512
ಯಶವಂತ್ ಸರದೇಶಪಾಂಡೆ

ಸಿನಿಮಾ, ಸೀರಿಯಲ್ ಹಾಗೂ ನಾಟಕ ನಿರ್ದೇಶಕ ಯಶವಂತ್ ಸರದೇಶಪಾಂಡೆ 61ನೇ ವಯಸ್ಸಿನಲ್ಲಿ ಕಾರ್ಡಿಯಾಕ್ ಅರೆಸ್ಟ್ ನಿಂದ ಸಾವನ್ನಪ್ಪಿದರು.

612
ಬ್ಯಾಂಕ್ ಜನಾರ್ಧನ್

ತಮ್ಮ ಕಾಮಿಡಿಯಿಂದಲೇ ಜನರನ್ನು ನಕ್ಕು ನಗಿಸಿದ ಬ್ಯಾಂಕ್ ಜನಾರ್ಧನ್ ಖ್ಯಾತಿಯ ಜನಾರ್ಧನ್ ರಾವ್ ಅವರು 76ನೇ ವಯಸ್ಸಿನಲ್ಲಿ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದರು.

712
ಗಡ್ಡಪ್ಪ ಆಲಿಯಾಸ್ ಚನ್ನೇಗೌಡ

ತಿಥಿ ಸಿನಿಮಾ ಮೂಲಕ ಖ್ಯಾತಿ ಪಡೆದ ಗಡ್ಡಪ್ಪ ಆಲಿಯಾಸ್ ಚನ್ನೇಗೌಡ 89ನೇ ವಯಸ್ಸಿನಲ್ಲಿ ಮರಣ ಹೊಂದಿದ್ದರು. ಇವರು ಹಾಲು ತುಪ್ಪ, ಕಂತ್ರಿ ಬಾಯ್ಸ್, ಗಡ್ಡಪ್ಪನ ದುನಿಯಾ ಸಿನಿಮಾದಲ್ಲಿ ನಟಿಸಿದ್ದರು.

812
ದಿನೇಶ್ ಮಂಗಳೂರು

ಸಿನಿಮಾ ನಟ ಹಾಗೂ ಆರ್ಟ್ ಡೈರೆಕ್ಟರ್ ದಿನೇಶ್ ಮಂಗಳೂರು 55ನೇ ವಯಸ್ಸಿನಲ್ಲಿ ಬ್ರೈನ್ ಸ್ಟ್ರೋಕ್ ನಿಂದ ಸಾವನ್ನಪ್ಪಿದ್ದರು. ಇವರು ಹಲವು ಸಿನಿಮಾಗಳಲ್ಲಿ ಖಡಕ್ ವಿಲನ್ ಆಗಿ ನಟಿಸಿದ್ದರು.

912
ಸಂತೋಷ್ ಬಾಲರಾಜ್

ಕರಿಯ 2, ಗಣಪ, ಕೆಂಪ ಹಾಗೂ ಒಲವಿನ ಓಲೆ ಸಿನಿಮಾದಲ್ಲಿ ನಟಿಸಿದ್ದ ಸಂತೋಷ್ ಬಾಲರಾಜ್ ಅವರು ಜಾಂಡೀಸ್ ಗೆ ಒಳಗಾಗಿ, ಕೊನೆಗೆ 38ನೇ ವಯಸ್ಸಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

1012
ಶ್ರೀಧರ್ ನಾಯಕ್

ಕನ್ನಡ ಕಿರುತೆರೆಯ ಹಲವಾರು ಸೀರಿಯಲ್ ಗಳಲ್ಲಿ ಪೋಷಕ ಕಲಾವಿದನಾಗಿ ನಟಿಸಿದ್ದ ಶ್ರೀಧರ್ ನಾಯಕ್ 47ನೇ ವಯಸ್ಸಿನಲ್ಲಿ ಬಹು ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ್ದರು. ಇವರು ಕೊನೆಯದಾಗಿ ವಧು ಸೀರಿಯಲ್ ನಲ್ಲಿ ನಟಿಸಿದ್ದರು.

1112
ಸರಿಗಮ ವಿಜಿ

40 ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟ ಸರಿಗಮ ವಿಜಿ ಸರಿಗಮ ವಿಜಿ 77ನೆ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದರು. ಇವರು ಸುಮಾರು 250 ಸಿನಿಮಾಗಳಲ್ಲಿ ನಟಿಸಿದ್ದಾರೆ.

1212
ರಾಕೇಶ್ ಪೂಜಾರಿ

ಕಾಮಿಡಿ ಕಿಲಾಡಿಗಳು ವಿನ್ನರ್ ಆಗಿದ್ದ, ತಮ್ಮ ನಗುಮುಖದಿಂದಲೇ ಎಲ್ಲರನ್ನೂ ಸೆಳೆದಿದ್ದ ಕಾಂತಾರ ಚಾಪ್ಟರ್ 1 ರಲ್ಲಿ ತಮ್ಮ ಪಾತ್ರದ ಮೂಲಕ ನಕ್ಕು ನಗಿಸಿದ, ನಟ ರಾಕೇಶ್ ಪೂಜಾರಿ 35ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories