‘ಬೀರ್ ಬಲ್ ಕೇಸ್ 2’ ಮೂಲಕ ಚಂದನವನಕ್ಕೆ ಎಂಟ್ರಿ ಕೊಡ್ತಿದ್ದಾರ ಟೂರಿಸ್ಟ್ ಫ್ಯಾಮಿಲಿ ನಟಿ?

Published : Aug 22, 2025, 04:11 PM IST

'ಬೀರ್ ಬಲ್' ಸಿನಿಮಾ ನಿರ್ದೇಶಕ ಮತ್ತು ನಟ ಎಂ. ಜಿ ಶ್ರೀನಿವಾಸ್ ಇದೀಗ ಎರಡನೇ ಭಾಗ ಮಾಡಲು ರೆಡಿಯಾಗಿದ್ದು, ಸಿನಿಮಾಗೆ ಟೂರಿಸ್ಟ್ ಫ್ಯಾಮಿಲಿ ನಟಿ ಯೋಗಲಕ್ಷ್ಮೀ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಸದ್ದು ಮಾದುತ್ತಿದೆ. 

PREV
17

ನಿಮಗೆ 2019ರಲ್ಲಿ ಬಿಡುಗಡೆಯಾಗಿರುವ 'ಬೀರ್ ಬಲ್ ಟ್ರೈಲಜಿ- ಕೇಸ್ 1 ಫೈಂಡಿಂಗ್ ವಜ್ರಮುನಿ' ಸಿನಿಮಾ ನೆನಪಿದ್ಯಾ? ಎಂ. ಜಿ ಶ್ರೀನಿವಾಸ್ ನಾಯಕನಾಗಿ, ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಿನಿಮಾ ಇದು. ಈ ಚಿತ್ರದ ಮೂಲಕ ಕನ್ನಡಕ್ಕೆ ಬ್ಯೂಟಿ ರುಕ್ಮಿಣಿ ವಸಂತ್ ಎಂಟ್ರಿ ಕೊಟ್ಟರು.

27

'ಬೀರ್ ಬಲ್' ಚಿತ್ರ ಬಿಡುಗಡೆ ಸಂದರ್ಭವೇ ಎಂ. ಜಿ ಶ್ರೀನಿ ಈ ಚಿತ್ರವು ಒಟ್ಟು ಮೂರು ಭಾಗಗಳನ್ನು ಹೊಂದಿದೆ ಎಂದಿದ್ದರು. ಆದರೆ ಮೊದಲ ಭಾಗ ಬಿಡುಗಡೆಯಾದಾಗ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಲಾಕ್ ಡೌನ್ ಟೈಮಲ್ಲಿ ಮನೆಯಲ್ಲಿ ಕುಳಿತ ಜನರು, ಒಟಿಟಿ ಮೂಲಕ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಅಮೆಜಾನ್ ಪ್ರೈಮ್‌ನಲ್ಲಿ 2.50 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದರು. ಆದರೆ ಸಿನಿಮಾದ ಎರಡನೇ ಭಾಗ ಮಾತ್ರ ಬಿಡುಗಡೆಯಾಗಿರಲಿಲ್ಲ.

37

ಇದೀಗ ಎಂ. ಜಿ ಶ್ರೀನಿವಾಸ್ ತಮ್ಮ ‘ಬೀರ್ ಬಲ್ ಕೇಸ್ 2’ ಸಿನಿಮಾ ಅನೌನ್ಸ್ ಮಾಡಿದ್ದು, ಈ ಬಾರಿ ಸಿನಿಮಾಗೆ ನಾಯಕಿಯಾಗಿ ಸದ್ಯ ತಮಿಳಿನಲ್ಲಿ ಮೋಡಿ ಮಾಡುತ್ತಿರುವ ಟೂರಿಸ್ಟ್ ಫ್ಯಾಮಿಲಿ ಸಿನಿಮಾ ನಟಿ ಯೋಗ ಲಕ್ಷ್ಮೀ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಇದೆ.

47

ಟೂರಿಸ್ಟ್ ಫ್ಯಾಮಿಲಿ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರೂ ಕೂಡ, ಇವರನ್ನು ಜನರು ಇಷ್ಟಪಟ್ಟಿದ್ದರು. ಅದಕ್ಕೂ ಮುನ್ನವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಯೋಗ ಲಕ್ಷ್ಮಿಗೆ ಜನಪ್ರಿಯತೆ ಕೊಟ್ಟಿದ್ದು ಮಾತ್ರ ಟೂರಿಸ್ಟ್ ಫ್ಯಾಮಿಲಿ ಸಿನಿಮಾ. ಇದೀಗ ಕನ್ನಡದಲ್ಲೂ ಮೋಡಿ ಮಾಡೋಕೆ ಹೊರಟಿದ್ದಾರೆ ಯೋಗಲಕ್ಷ್ಮಿ.

57

ಯೋಗ ಲಕ್ಷ್ಮೀ ಈ ಹಿಂದೆ ಹಾರ್ಟ್ ಬೀಟ್ ಹಾಗೂ ಸಿಂಗಪೆಣ್ಣೆ ಎನ್ನುವ ಸೀರೀಸ್ ಗಳಲ್ಲಿ ನಟಿಸಿದ್ದರು. ಹಾರ್ಟ್ ಬೀಟ್ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು. ಇದು ಡಾಕ್ಟರ್ ಗಳ ಜೀವನದ ಕಥೆಯಾಗಿದ್ದು, ಒಂದು ಸುಂದರವಾದ ಲವ್ ಸ್ಟೋರಿಯನ್ನು ಈ ಸೀರೀಸ್ ನಲ್ಲಿ ಕಾಣಬಹುದು.

67

ಟೂರಿಸ್ಟ್ ಫ್ಯಾಮಿಲಿ ಬಳಿಕ ಯೋಗ ಲಕ್ಷ್ಮಿಗೆ ಹೆಚ್ಚಿನ ಅವಕಾಶಗಳು ಒದಗಿ ಬರುತ್ತಿವೆ ಎನ್ನುವ ಸುದ್ದಿ ಸಹ ಇದೆ. ಕೆಲವು ತಮಿಳು ಸಿನಿಮಾಗಳಲ್ಲೂ ಆಫರ್ ಸಿಕ್ಕಿವೆ ಎನ್ನಲಾಗುತ್ತಿದೆ. ಇದರ ನಡುವೆ ಕನ್ನಡ ಸಿನಿಮಾದಲ್ಲಿ ಯೋಗಲಕ್ಷ್ಮೀ ನಟಿಸುತ್ತಿರುವ ಸುದ್ದಿ ಕೇಳಿ ಟೂರಿಸ್ಟ್ ಫ್ಯಾಮಿಲಿ ಸಿನಿಮಾ ನೋಡಿ ಈಕೆಯನ್ನು ಇಷ್ಟಪಟ್ಟವರು ಮೆಚ್ಚಿಕೊಂಡಿದ್ದಾರೆ.

77

ಇನ್ನು ಬೀರ್ ಬಲ್ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ, ಶೂಟಿಂಗ್ ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಶ್ರೀನಿವಾಸ್ ಇಲ್ಲಿವರೆಗೆ ಟೋಪಿವಾಲಾ, ಘೋಸ್ಟ್, ಶ್ರೀನಿವಾಸ ಕಲ್ಯಾಣ ಸಿನಿಮಾ ನಟನೆ ಮತ್ತು ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರು. ಸದ್ಯದಲ್ಲೇ ಬೀರ್ ಬಲ್ ಸರಣಿಯೂ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories